ಪ್ರವಾಹದ ನೀರಲ್ಲಿ ನಿಂತು ವರದಿ ಮಾಡಿದ ಪತ್ರಕರ್ತ: ವೈರಲ್ ವಿಡಿಯೋ
ಇಸ್ಲಾಮಾಬಾದ್, ಏಪ್ರಿಲ್ 18: ಪಾಕಿಸ್ತಾನದ ಟೆಲಿವಿಷನ್ ವಾಹಿನಿ ವರದಿಗಾರರ ಯಡವಟ್ಟುಗಳು ಬಲುಜನಪ್ರಿಯ. ಅವರ ಅನೇಕ ವಿಡಿಯೋಗಳು ಪಾಕಿಸ್ತಾನ ಮಾತ್ರವಲ್ಲ, ಜಗತ್ತಿನ ಅನೇಕ ಕಡೆ ವೈರಲ್ ಆಗಿದ್ದವು. ಈ ವಿಡಿಯೋಗಳನ್ನು ಬಳಸಿಕೊಂಡು ಸಲ್ಮಾನ್ ಖಾನ್ ಅಭಿನಯದ 'ಬಜರಂಗಿ ಭಾಯಿಜಾನ್' ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ನಗಿಸಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈಗ ಪಾಕಿಸ್ತಾನದ ಪತ್ರಕರ್ತರೊಬ್ಬರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಆದರೆ, ಇದು ನಗಿಸುವ ವಿಡಿಯೋವಲ್ಲ. ಕೆಲವರು ತಮ್ಮ ಕೆಲಸದಲ್ಲಿ ಬೇರೆಯವರನ್ನು ಮೆಚ್ಚಿಸಲು ಎಂತಹ ಹುಚ್ಚು ಸಾಹಸಕ್ಕೂ ಮುಂದಾಗುತ್ತಾರೆ ಎಂಬುದನ್ನು ಸಾಬೀತುಪಡಿಸುವಂತಹ ವಿಡಿಯೋ.
ನೆರೆಯಿಂದ ತುಂಬಿ ಹರಿಯುತ್ತಿರುವ ನದಿಯೊಂದರ ಮಧ್ಯದಲ್ಲಿ ನಿಂತು ಪಾಕಿಸ್ತಾನದ ಪತ್ರಕರ್ತ ವಾಹಿನಿಗೆ ವರದಿಗಾರಿಕೆ ಮಾಡಿದ್ದಾರೆ. ಅಲ್ಲಿನ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವೇಗವಾಗಿ ಹರಿಯುವ ಅಪಾಯಕಾರಿ ನೀರಿನೊಳಗೆ ನಿಂತು ವರದಿಗಾರಿಕೆ ಮಾಡಿರುವ ಪತ್ರಕರ್ತನ ಹುಚ್ಚುತನವನ್ನು ಅನೇಕರು ಟೀಕಿಸಿದ್ದಾರೆ. ಜತೆಗೆ ತಮಾಷೆಯ ಕಾಮೆಂಟ್‌ಗಳು ಹರಿದಾಡುತ್ತಿವೆ.
Producer: Bring me a news story that no other channel has.
— Naila Inayat नायला इनायत (@nailainayat) 16 April 2019
Reporter: pic.twitter.com/cOLxx6Uvas
ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್, 'ಪ್ರೊಡ್ಯೂಸರ್: ಬೇರೆ ಯಾವ ಚಾನೆಲ್‌ನಲ್ಲಿಯೂ ಇಲ್ಲದ ಸುದ್ದಿಯನ್ನು ತನ್ನಿ'

ವರದಿಗಾರ:...." ಎಂದು ಬರೆದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ಅನೇಕರು ಪಾಕಿಸ್ತಾನದ ಪತ್ರಕರ್ತರ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.












Click it and Unblock the Notifications