ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಸಚಿವರ ಮೇಲೆ ಗುಂಡಿನ ದಾಳಿ

By ದೀಪಿಕಾ
|
Google Oneindia Kannada News

ಇಸ್ಲಮಾಬಾದ್, ಮೇ 7: ಪಾಕಿಸ್ತಾನದ ಆಂತರಿಕ ಸಚಿವ ಎಹ್ಸಾನ್ ಇಕ್ಬಾಲ್ ಮೇಲೆ ಭಾನುವಾರ ಗುಂಡಿನ ದಾಳಿ ನಡೆದಿದೆ. ಪರಿಣಾಮ ಸಚಿವರು ಗಾಯಗೊಂಡಿದ್ದಾರೆ.

ನಾರೋವಾಲ್ ನಲ್ಲಿ ಈ ಘಟನೆ ನಡೆದಿದ್ದು, ಸಚಿವರ ಬಲ ಭುಜಕ್ಕೆ ಗುಂಡು ತಾಗಿದೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಸುಮಾರು 18 ಮೀಟರ್ ದೂರದಿಂದ ಪಿಸ್ತೂಲ್ ನಿಂದ ಅವರ ಮೇಲೆ ಗುಂಡು ಹಾರಿಸಲಾಗಿದೆ.

ಬಂದೂಕುಧಾರಿ ಗುಂಡು ಹಾರಿಸುತ್ತಿದ್ದಂತೆ ತಕ್ಷಣ ಎಚ್ಚೆತ್ತುಕೊಂಡ ಭದ್ರತಾಪಡೆಗಳ ಸಿಬ್ಬಂದಿಗಳು ಆತನನ್ನು ಬಂಧಿಸಿದ್ದಾರೆ. ಈ ದಾಳಿಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಬಂದೂಕುಧಾರಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Pakistan Interior Minister injured after gunman opens fire at political rally

ಇದೊಂದು ಹತ್ಯಾ ಯತ್ನ ಎಂದು ಪಂಜಾಬ್ ಮುಖ್ಯಮಂತ್ರಿ ಶಹ್ಬಾಜ್ ಶರೀಫ್ ಹೇಳಿದ್ದಾರೆ.

ಪಾಕಿಸ್ತಾನ್ ಮುಸ್ಲಿಂ ಲೀಗ್ ಪಾರ್ಟಿಗೆ ಸೇರಿರುವ ಎಹ್ಸಾನ್ ಇಕ್ಬಾಲ್ ಭಾನುವಾರ ತಮ್ಮ ಊರು ನಾರೋವಾಲ್ ನಲ್ಲಿ ಸಾರ್ವಜನಿಕ ಸಮಾವೇಶವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಈ ದಾಳಿ ನಡೆದಿದೆ.

ಪಾಕಿಸ್ತಾನ ಪ್ರಧಾನಿ ಶಹೀದ್ ಖಕ್ಕಾನ್ ಅಬ್ಬಾಸಿ ಮತ್ತು ನೊಬೆಲ್ ಪುರಸ್ಕೃತ ಸಾಮಾಜಿಕ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯ್ ಈ ಘಟನೆಯನ್ನು ಖಂಡಿಸಿದ್ದಾರೆ.

ಇದೇ ಜೂನ್ ನಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಇದೀಗ ರಾಜಕಾರಣಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

English summary
Pakistan's interior minister Ahsan Iqbal was injured on Sunday when an unidentified assailant opened fire at him in Narowal, the Dawn reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X