ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನಲ್ಲೇ ಕತ್ತೆಗಳ ಸಂಖ್ಯೆ ಹೆಚ್ಚಿರುವ ಮೂರನೇ ದೇಶ ಪಾಕಿಸ್ತಾನ, ಕತ್ತೆಗಳ ಸಂಖ್ಯೆ 53 ಲಕ್ಷಕ್ಕೆ

|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಡಿಸೆಂಬರ್ 20: ಪಾಕಿಸ್ತಾನದ ಬಗ್ಗೆ ಸುದ್ದಿಯೊಂದು ಬಂದಿದೆ. ವಿಶಿಷ್ಟವೂ, ವಿಲಕ್ಷಣವಾದ ಸುದ್ದಿಯಿದು. ಅತಿ ಹೆಚ್ಚು ಕತ್ತೆಗಳನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಮೂರನೇ ಸ್ಥಾನವಂತೆ. ಅವುಗಳ ಸಂಖ್ಯೆ ಐವತ್ತು ಲಕ್ಷ ದಾಟಿದೆಯಂತೆ. ಲಾಹೋರ್ ವೊಂದರಲ್ಲೇ ನಲವತ್ತು ಸಾವಿರಕ್ಕೂ ಹೆಚ್ಚು ಕತ್ತೆಗಳಿವೆಯಂತೆ.

2017-18ರ ಪಾಕಿಸ್ತಾನ ಆರ್ಥಿಕ ಸಮೀಕ್ಷೆ ಪ್ರಕಾರ, ಕತ್ತೆಗಳ ಸಂಖ್ಯೆಯು 1 ಲಕ್ಷದಿಂದ 53 ಲಕ್ಷಕ್ಕೆ ಏರಿಕೆ ಆಗಿದೆ. ಪಂಜಾಬ್ ನ ಪಶು ಇಲಾಖೆ ಈ ಅಂಕಿ-ಅಂಶವನ್ನು ಬಯಲು ಮಾಡಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ. ಕತ್ತೆಗಳ ಸಂಖ್ಯೆ ಹೆಚ್ಚಳ ಆಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಪಂಜಾಬ್ ಸರಕಾರದಿಂದ ಅವುಗಳಿಗಾಗಿ ಆಸ್ಪತ್ರೆಗಳನ್ನು ತೆರೆದು, ಉಚಿತ ಚಿಕಿತ್ಸೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

300 ರುಪಾಯಿ ಹೊಂದಿಸಲಾಗದ ವ್ಯಕ್ತಿ ಖಾತೆಯಲ್ಲಿ 300 ಕೋಟಿ: ಇದು ಪಾಕಿಸ್ತಾನ!300 ರುಪಾಯಿ ಹೊಂದಿಸಲಾಗದ ವ್ಯಕ್ತಿ ಖಾತೆಯಲ್ಲಿ 300 ಕೋಟಿ: ಇದು ಪಾಕಿಸ್ತಾನ!

ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆ ವಿಪರೀತವಾಗಿ ಹೊರೆಯಾಗಿ ಪರಿಣಮಿಸಿದೆ. ಆದರೆ ಅವುಗಳ ಮಾಲೀಕರಿಗೆ ಒಳ್ಳೆ ಆದಾಯದ ಮೂಲಗಳಾಗಿವೆ. ಇದರಿಂದ ಒಳ್ಳೆ ಹಣ ಬರುತ್ತಿದೆ ಹಾಗೂ ವ್ಯಾಪಾರ ಆಗುತ್ತಿದೆ. ಅದರಲ್ಲೂ ಲಾಹೋರ್ ನಲ್ಲಿ ಭಾರೀ ಬೇಡಿಕೆ ಇದೆ ಎನ್ನುತ್ತಾರೆ. ಇವುಗಳನ್ನು ಸರಕು ಸಾಗಣೆ, ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ಬಳಕೆ ಮಾಡುತ್ತಾರೆ.

Pakistan has become the worlds third largest donkey population country

ಒಂದು ಕತ್ತೆ ಖರೀದಿಗೆ ಪಾಕಿಸ್ತಾನದ ರುಪಾಯಿಗಳಲ್ಲಿ ಮೂವತ್ತೈದರಿಂದ ಐವತ್ತೈದು ಸಾವಿರ ರುಪಾಯಿ ಆಗುತ್ತದೆ. ಇದರ ಮೂಲಕ ದಿನಕ್ಕೆ ಒಂದು ಸಾವಿರ ರುಪಾಯಿ ದುಡಿಯಬಹುದು. "ಕತ್ತೆಗಳ ವ್ಯವಹಾರ ಬಹಳ ಚೆನ್ನಾಗಿದೆ. ಅವುಗಳನ್ನು ಮಾರಿದರೂ ಒಳ್ಳೆ ಬೆಲೆ ಸಿಗುತ್ತದೆ" ಎಂದು ಕತ್ತೆ ಸಾಕಣೆ ವ್ಯವಹಾರ ಮಾಡುವವರೊಬ್ಬರು ತಿಳಿಸಿದ್ದಾರೆ.

English summary
Here is an interesting story about Pakistan. With 53 lakh population of donkey's, Pakistan has become the world's third largest donkey population country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X