ಅಯೋಧ್ಯೆ ತೀರ್ಪು: ಪಾಕಿಸ್ತಾನದ ಪ್ರತಿಕ್ರಿಯೆ ಹೀಗಿತ್ತು

ಇಸ್ಲಾಮಾಬಾದ್, ನವೆಂಬರ್ 10: ಅಯೋಧ್ಯೆ ರಾಮಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪಾಕಿಸ್ತಾನ ಪ್ರತಿಕ್ರಿಯಿಸಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಮಾತನಾಡಿದ್ದು, ಈ ತೀರ್ಪು ಮುಸ್ಲಿಮರ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ. ಅಲ್ಲದೇ ಕರ್ತಾರ್ ಪುರ ಕಾರಿಡಾರ್ ನ ಉದ್ಘಾಟನೆ ಸಂದರ್ಭದಲ್ಲೇ ಈ ತೀರ್ಪು ಬಂದಿರುವುದರಿಂದ ಅತೀವವಾದ ಬೇಸರವಾಗಿದೆ.

ಇನ್ನು ಕೆಲವು ದಿನಗಳು ಕಾಯ್ದು ಆ ನಂತರ ತೀರ್ಪು ಕೊಡಲು ಆಗುತ್ತಿರಲಿಲ್ಲವೇ? ಈ ತೀರ್ಪಿನಿಂದಾಗಿ ಕರ್ತಾರ್ ಪುರ ಕಾರಿಡಾರ್ ನ ಮೇಲಿನ ಗಮನವನ್ನ ಬೇರೆಡೆ ಸೆಳೆದಂತಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಟ್ವೀಟ್ ಮಾಡಿ, ಭಾರತದ ಸುಪ್ರೀಂಕೋರ್ಟ್ ನ ಈ ನಡೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ವಾರವೇ ಯಾಕೆ ತೀರ್ಪು ನೀಡಿದೆ. ಕರ್ತಾರ್‌ಪುರದಲ್ಲಿ ಸಿಖ್ಖರಿಗೋಸ್ಕರ ಪಾಕಿಸ್ತಾನ ಮಾಡಿದ ತ್ಯಾಗಕ್ಕೆ ಇದು ಪ್ರತಿಕ್ರಿಯೆಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಅಯೋಧ್ಯೆಯಲ್ಲಿ ಈವರೆಗೂ ವಿವಾದಿತ ಪ್ರದೇಶವಾಗಿದ್ದ ಭೂಮಿಯನ್ನು ರಾಮಲಲ್ಲಾನಿಗೆ ಸೇರಿದ್ದು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದೆ.

ಭಾರತದ ಆಂತರಿಕ ವಿಚಾರ

ಭಾರತದ ಆಂತರಿಕ ವಿಚಾರ

ಭಾರತದ ಆಂತರಿಕ ನಿರ್ಧಾರದ ಬಗ್ಗೆ ಪದೇ ಪದೇ ಮೂಗು ತೂರಿಸಿ ಮುಖಭಂಗವಾದರೂ ತಿದ್ದಿಕೊಳ್ಳದ ಪಾಕ್ ಈಗ ರಾಮಜನ್ಮಭೂಮಿ ಕುರಿತು ತಿದ್ದಿಕೊಳ್ಳದ ಪಾಕ್ ಈಗ ರಾಮಜನ್ಮಭೂಮಿ ಕುರಿತ ಸುಪ್ರೀಂಕೋರ್ಟ್ ತೀರ್ಪಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ದೇಶದ ವಿರೋಧ ಪಕ್ಷಗಳೇ ತೀರ್ಪನ್ನು ಸ್ವಾಗತಿಸಿವೆ

ದೇಶದ ವಿರೋಧ ಪಕ್ಷಗಳೇ ತೀರ್ಪನ್ನು ಸ್ವಾಗತಿಸಿವೆ

ದೇಶದ ವಿರೋಧ ಪಕ್ಷಗಳೇ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿ, ಶತಮಾನದ ದ್ವೇಷವನ್ನು ಕೊನೆಗಾಣಿಸುವ ಆದೇಶವಾಗಿದೆ ಎಂದು ಬಣ್ಣಿಸಿವೆ. ಆದರೆ, ನಮ್ಮ ದೇಶದ ವಿಚಾರಗಳಿಗೆ ಸಂಬಂಧವೇ ಇಲ್ಲದ ಪಾಕ್‌ನಿಂದ ಇಂಥ ಪ್ರತಿಕ್ರಿಯೆ ಬಂದಿದೆ.

ಆಸಿಫ್ ಗಫೂರ್ ಹೇಳಿದ್ದೇನು?

ಆಸಿಫ್ ಗಫೂರ್ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಕಿಸ್ತಾನ ಸೇನೆಯ ವಕ್ತಾರ ಆಸಿಫ್ ಗಫೂರ್, ಜಗತ್ತು ಮತ್ತೊಮ್ಮೆ ಉಗ್ರಗಾಮಿ ಭಾರತದ ನೈಜ ಮುಖವನ್ನು ಕಂಡಿದೆ ಎಂದು ಟ್ವೀಟ್ ಮಾಡಿದ್ದಾರೆ. ಭಾರತವು ಆಗಸ್ಟ್ 5ರಂದು ಕಾಶ್ಮೀರದ ಸಾಂವಿಧಾನಿಕ ಸ್ಥಾನವಾಮನವನ್ನು ಕೊನೆಗೊಳಿಸಿತು. ಇಂದು ಬಾಬ್ರಿ ಮಸೀದಿಯ ನಿರ್ನಾಮಕ್ಕೆ ನಿರ್ಧರಿಸಿದೆ. ಆದರೆ, ಇತರ ಧರ್ಮಗಳನ್ನು ಗೌರವಿಸುವ ಪಾಕಿಸ್ತಾ, ಗುರುನಾನಕ್ ಭಕ್ತರಿಗೆ ಕರ್ತಾರ್‌ಪುರ ಕಾರಿಡಾರ್ ಎನ್ನು ತೆರೆಯುತ್ತಿದೆ ಎಂದು ಹೇಳಿದ್ದಾರೆ.

ಷಾ ಮೊಹಮ್ಮದ್ ಖುರೇಷಿ ಹೇಳಿದ್ದೇನು?

ಷಾ ಮೊಹಮ್ಮದ್ ಖುರೇಷಿ ಹೇಳಿದ್ದೇನು?

ಇನ್ನು ಅಯೋಧ್ಯೆ ತೀರ್ಪಿನ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿ ಇದು ಮೋದಿ ಸರ್ಕಾರದ ಧರ್ಮಾಂಧತೆಯನ್ನು ಪ್ರತಿಬಿಂಬಿಸುತ್ತದೆ. ಈ ನಿರ್ಧಾರದಿಂದ ಭಾರತದ ಜಾತ್ಯಾತೀತ ಚಿತ್ರಣದ ವಾಸ್ತವತೆ ಮುನ್ನೆಲೆಗೆ ಬಂದಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+