ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಪಾಕಿಸ್ತಾನದಲ್ಲಿ ಪ್ರವಾಹ, 1,033 ಜನರ ಸಾವು

|
Google Oneindia Kannada News

ಇಸ್ಲಮಾಬಾದ್‌, ಆಗಸ್ಟ್ 28: ಪಾಕಿಸ್ತಾನದ ಅನೇಕ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಕಳೆದ 24 ಗಂಟೆಗಳಲ್ಲಿ 119 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆಯನ್ನು 1,033ಕ್ಕೆ ಏರಿಕೆಯಾಗಿದೆ.

ಪಾಕಿಸ್ತಾನದಲ್ಲಿ ಮಾನ್ಸೂನ್ ಪ್ರವಾಹವು ವಿನಾಶವನ್ನು ಮುಂದುವರೆಸಿದ್ದು, ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ 119 ಜನರು ಸಾವನ್ನಪ್ಪಿದ್ದಾರೆ. ಇದು ದುರಂತದಿಂದ ಒಟ್ಟು ಸಾವಿನ ಸಂಖ್ಯೆಯನ್ನು 1,033 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ತುರ್ತು ಪರಿಸ್ಥಿತಿ ಘೋಷಿಸಿದ ಪಾಕಿಸ್ತಾನ, ಇದಕ್ಕೆ ಕಾರಣವೇನು?ತುರ್ತು ಪರಿಸ್ಥಿತಿ ಘೋಷಿಸಿದ ಪಾಕಿಸ್ತಾನ, ಇದಕ್ಕೆ ಕಾರಣವೇನು?

ಶನಿವಾರ ಬಲೂಚಿಸ್ತಾನದಲ್ಲಿ ನಾಲ್ಕು ಮಂದಿ, ಗಿಲ್ಗಿಟ್ ಬಾಲ್ಟಿಸ್ತಾನ್‌ದಿಂದ ಆರು, ಖೈಬರ್ ಪಖ್ತುಂಖ್ವಾದಿಂದ 31 ಮತ್ತು ಸಿಂಧ್‌ನಿಂದ 76 ಸಾವುಗಳು ವರದಿಯಾಗಿವೆ. ಇನ್ನು ಮಾನ್ಸೂನ್ ಪ್ರವಾಹವು 4 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುವುದರಿಂದ ಪಾಕಿಸ್ತಾನ ಸರಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

Pakistan floods: total death up to 1,000, high level warning issued

ಭಾರೀ ಮಳೆಯು 33 ಮಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ದೇಶದ ಕೆಲವು ಭಾಗಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದೆ. ಪಾಕಿಸ್ತಾನದ ಕನಿಷ್ಠ 110 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಒಟ್ಟು 72 ಜಿಲ್ಲೆಗಳನ್ನು ವಿಪತ್ತು ಪೀಡಿತ ಎಂದು ಘೋಷಿಸಲಾಗಿದೆ, ದೇಶವು ಒಂದು ದಶಕದಲ್ಲಿಯೇ ಅತ್ಯಂತ ಭೀಕರವಾದ ನೈಸರ್ಗಿಕ ವಿಕೋಪದಿಂದ ಬಳಲುತ್ತಿದೆ.

ಪ್ರವಾಹದಿಂದ ಒಟ್ಟು 9,49,858 ಮನೆಗಳು ನಾಶವಾಗಿವೆ, ಅದರಲ್ಲಿ 6,62,446 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು 2, 87,412 ಸಂಪೂರ್ಣವಾಗಿ ನಾಶವಾಗಿವೆ. ಪ್ರವಾಹ ಸಂಬಂಧಿತ ಘಟನೆಗಳಲ್ಲಿ 7,00,000 ಜಾನುವಾರುಗಳು ಸಾವನ್ನಪ್ಪಿವೆ.

ಶನಿವಾರದಂದು, ಪಾಕಿಸ್ತಾನದ ಪ್ರವಾಹ ಮುನ್ಸೂಚನೆ ವಿಭಾಗ (ಎಫ್‌ಎಫ್‌ಡಿ) ಮುಂದಿನ 24 ಗಂಟೆಗಳಲ್ಲಿ ನೌಶೇರಾದ ಕಾಬೂಲ್ ನದಿಯಲ್ಲಿ ಅತಿ ಹೆಚ್ಚು ಮತ್ತು ಹೆಚ್ಚಿನ ಮಟ್ಟದ ಪ್ರವಾಹ ಮುಂದುವರಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ರವಾನಿಸಿದೆ.

Pakistan floods: total death up to 1,000, high level warning issued

ಕಲಬಾಗ್ ಮತ್ತು ಚಶ್ಮಾದಲ್ಲಿ ಸಿಂಧೂ ನದಿಯು ಮುಂದಿನ 24 ರಿಂದ 48 ಗಂಟೆಗಳ ಅವಧಿಯಲ್ಲಿ ಹೆಚ್ಚಿನ ಪ್ರವಾಹದ ಮಟ್ಟವನ್ನು ತಲುಪುವ ಸಾಧ್ಯತೆಯಿದೆ.

ಎಲ್ಲಾ ನಾಗರಿಕ ಸಂಸ್ಥೆಗಳು ಮತ್ತು ರಕ್ಷಣಾ ದಳ, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್ ಮತ್ತು ಸಿವಿಲ್ ಡಿಫೆನ್ಸ್ ಸೇರಿದಂತೆ ರಕ್ಷಣಾ ಸೇವೆಗಳಿಗೆ ಎಚ್ಚರಿಕೆಯನ್ನು ನೀಡುವಂತೆ ಮತ್ತು ಮುನ್ಸೂಚನೆಯ ಅವಧಿಯಲ್ಲಿ ಅಪಾಯದ ಪ್ರದೇಶಗಳಲ್ಲಿ ಸಿಬ್ಬಂದಿ ಮತ್ತು ಸಲಕರಣೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರಕಾರ ಸಲಹೆ ನೀಡಿದೆ.

ತಗ್ಗು ಪ್ರದೇಶದ / ಪ್ರವಾಹ ಪೀಡಿತ ಪ್ರದೇಶಗಳಿಂದ ಅಪಾಯದಲ್ಲಿರುವ ಜನಸಂಖ್ಯೆಯನ್ನು ಸಕಾಲಿಕವಾಗಿ ಸ್ಥಳಾಂತರಿಸುವುದು. ಆ ಆಶ್ರಯ ಶಿಬಿರಗಳಲ್ಲಿ ಆಶ್ರಯ, ಆಹಾರ ಮತ್ತು ಔಷಧಿಗಳ ಲಭ್ಯತೆಯನ್ನು ಸರಿಯಾಗಿ ನೋಡಿಕೊಳ್ಳುವಂತೆ ಆದೇಶಿಸಿದೆ.

ನಿರಂತರವಾಗಿ ಸುರಿಯತ್ತಿರುವ ಜೋರು ಮಳೆಯಿಂದಾಗಿ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಷ್ಟಕರವಾಗಿದೆ. ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್‌ಗಳನ್ನು ತಲುಪಿಸುವ ಹೆಲಿಕಾಪ್ಟರ್‌ಗಳ ಹಾರಾಟವು ಇಲ್ಲಿ ಕಷ್ಟವಾಗಿದೆ. ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹಗಳಿಂದಾಗಿ ದೇಶದ ವಿವಿಧ ಪ್ರದೇಶಗಳಲ್ಲಿ ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿವೆ. ಸುಮಾರು 30 ಮಿಲಿಯನ್ ಜನರು ಆಶ್ರಯವಿಲ್ಲದೆ ಪರದಾಡಿದ್ದಾರೆ.

ಪಾಕಿಸ್ತಾನದ ಪ್ರಸ್ತುತ ಪರಿಸ್ಥಿತಿಯನ್ನು 2010 ರ ಪ್ರವಾಹದೊಂದಿಗೆ ಸಚಿವ ರೆಹಮಾನ್ ಹೋಲಿಸಿದ್ದಾರೆ. ಈ ವಾರದ ಆರಂಭದಲ್ಲಿ ಪ್ರಸ್ತುತ ಪರಿಸ್ಥಿತಿ ಅದಕ್ಕಿಂತ ಕೆಟ್ಟದಾಗಿದೆ. 2010 ರಲ್ಲಿ ನೀರು ಉತ್ತರದಿಂದ ಹರಿಯುತ್ತಿರಲಿಲ್ಲ. ಆಗ ಮಳೆಯು ಹೆಚ್ಚು ವಿನಾಶಕಾರಿಯಾಗಿತ್ತು. ಪಾಕಿಸ್ತಾನವು ಈ ಮಾನ್ಸೂನ್‌ನಲ್ಲಿ ಭಾರೀ ಮಳೆಯನ್ನು ಕಂಡಿದೆ. ಅಲ್ಲದೆ ಸೆಪ್ಟೆಂಬರ್‌ನಲ್ಲಿ ಮತ್ತೊಂದು ಋತುವಿನ ಮಳೆಯ ಪುನರಾವರ್ತನೆಯ ಸಾಧ್ಯತೆಯನ್ನು ಕಾಣಬಹುದು ಎಂದು ಅಂಕಿಅಂಶಗಳು ಹೇಳಿವೆ ಎಂದು ಹೇಳಿದ್ದಾರೆ.

English summary
Pakistan monsoon floods: Total death up to 1,033. Pakistan government declared a national emergency. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X