• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್

By ಒನ್ ಇಂಡಿಯಾ ಡೆಸ್ಕ್
|
   ಪಾಕಿಸ್ತಾನ ಅತಂತ್ರ, ಇಮ್ರಾನ್ ಖಾನ್ ಮ್ಯಾನ್ ಆಫ್ ದ ಮ್ಯಾಚ್ | Oneindia kannada

   ಪಾಕಿಸ್ತಾನದ ಚುನಾವಣೆಯ ಸಂಪೂರ್ಣ ಫಲಿತಾಂಶ ಅಧಿಕೃತವಾಗಿ ಬಂದಿಲ್ಲ. ಆದರೆ ಅಲ್ಲಿ ಏನೇನು ಆಗುತ್ತದೆ ಎಂಬ ನಿರೀಕ್ಷೆ ಇತ್ತೋ ಅವೆಲ್ಲವೂ ಆಗುತ್ತಿರುವುದು ಅಲ್ಲಿನ ಚುನಾವಣೆಯ ಫಲಿತಾಂಶದ ಸಂಖ್ಯೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಇಮ್ರಾನ್ ಖಾನ್ ನ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲೊಂದು ಖಿಚಡಿ ಸರಕಾರ ರಚನೆ ಆಗುವುದು ಖಾತ್ರಿ ಆಗಿದೆ.

   ಈ ಎರಡೂ ಕೂಡ ಅನಿರೀಕ್ಷಿತವಾಗಿರಲಿಲ್ಲ. ಮಾಜಿ ಪ್ರಧಾನಿ ನವಾಜ್ ಷರೀಫ್ ಜೈಲಿನಲ್ಲಿ ವಾಕಿಂಗ್ ಮಾಡುತ್ತಾ ಕಂಡ ಭವಿಷ್ಯದ ಆಸೆಗಳು ಕಮರಿದಂತಾಗಿದೆ. ಏಕೆಂದರೆ ಪಾಕಿಸ್ತಾನ್ ಮುಸ್ಲಿಮ್ ಲೀಗ್ (ನವಾಜ್) ಪಕ್ಷ ಗೆಲುವಿನ ಲೆಕ್ಕಾಚಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಜರ್ದಾರಿ- ಬಿಲಾವಲ್ ಅಪ್ಪ, ಮಕ್ಕಳ ಪಕ್ಷಕ್ಕೆ ಪಾಕಿಸ್ತಾನೀಯರು ನೀಡಿರುವುದು ಮೂರನೇ ಸ್ಥಾನ.

   ಚುನಾವಣೆ ಮತ್ತು ದಂಗೆ: 71 ವರ್ಷದಲ್ಲಿ ಬದಲಾಗದ ಪಾಕ್ ರಾಜಕೀಯ ದಾರಿ

   ಅಲ್ಲಿಗೆ ಪಾಕಿಸ್ತಾನದಲ್ಲಿ ಅತಂತ್ರ ಫಲಿತಾಂಶ ಖಾತ್ರಿಯಾಗಿದೆ. ಪೂರ್ಣ ಬಹುಮತ ಯಾವ ಪಕ್ಷಕ್ಕೂ ಬರುವುದಿಲ್ಲ ಅನ್ನೋದು ಸಹ ಗೊತ್ತಿತ್ತು. ಈ ಬಾರಿ ಪಾಕಿಸ್ತಾನ ಸೇನೆಯ ಪಾಲಿಗೆ 'ಡಾರ್ಲಿಂಗ್' ಆಗಿದ್ದ ಇಮ್ರಾನ್ ನೇತೃತ್ವದ ಪಕ್ಷ ಇಂಥದ್ದೊಂದು ಫಲಿತಾಂಶ ಪಡೆಯುವ ಬಗ್ಗೆಯೂ ಹೆಚ್ಚು ಅಚ್ಚರಿಯೇನೂ ಇರಲಿಲ್ಲ.

   ಮೂಲಭೂತವಾದಿಗಳ ಜತೆಗೆ ಕೈ ಜೋಡಿಸಿದ ಇಮ್ರಾನ್ ಖಾನ್

   ಮೂಲಭೂತವಾದಿಗಳ ಜತೆಗೆ ಕೈ ಜೋಡಿಸಿದ ಇಮ್ರಾನ್ ಖಾನ್

   ಆದರೆ, ತಮಾಷೆ ವಿಷಯ ಏನು ಗೊತ್ತಾ? ಒಂದು ಕಾಲಕ್ಕೆ ಪ್ರಗತಿಪರ ಆಲೋಚನೆ ಇಟ್ಟುಕೊಂಡು, 'ನಯಾ ಪಾಕಿಸ್ತಾನ್' ಎಂಬ ಘೋಷಣೆಯಂದಿಗೆ ಪಾಕಿಸ್ತಾನದ ರಾಜಕಾರಣಕ್ಕೆ ಪ್ರವೇಶ ಮಾಡಿದ್ದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನನ್ನು ನಯಾ ಇಮ್ರಾನ್ ಖಾನ್ ನನ್ನಾಗಿ ಸನ್ನಿವೇಶಗಳೇ ಬದಲಾವಣೆ ಮಾಡಿವೆ. ಜಾಗತಿಕ ಭಯೋತ್ಪಾದಕ ಸಂಘಟನೆ, ಮೂಲಭೂತವಾದಿಗಳು, ವಿಚ್ಛಿದ್ರಕಾರಿ ಶಕ್ತಿಗಳು ಯಾವೆಲ್ಲ- ಯಾರೆಲ್ಲ ಇದ್ದಾರೋ ಎಲ್ಲವೂ- ಎಲ್ಲರ ಜತೆ ಸೇರಿ ಇಮ್ರಾನ್ ಖಾನ್ ಗದ್ದುಗೆ ಕಡೆಗೆ ಸಾಗುತ್ತಿರುವುದು ನೋಡಿದರೆ ಭಾರತವು ಎಚ್ಚರಗೊಳ್ಳಲೇಬೇಕು ಎಂಬ ಸಂದೇಶ ಸಿಕ್ಕಂತೆ ಕಾಣುತ್ತಿದೆ.

   ಇಮ್ರಾನ್ ಖಾನ್ ಪಾಕ್ ಪ್ರಧಾನಿ? ಜನ್ಮ ಜಾಲಾಡಿದ ಮಾಜಿ ಪತ್ನಿ!

   ಖಿಚಡಿ ಸರಕಾರವೇ ರಚನೆ

   ಖಿಚಡಿ ಸರಕಾರವೇ ರಚನೆ

   ಏಕೆಂದರೆ, ಖಿಚಡಿ ಸರಕಾರ ರಚನೆಯಾಗಿ, ಭಾರತದ ವಿರುದ್ಧ ವಿಷವನ್ನೇ ಇಟ್ಟುಕೊಂಡಿರುವ ಪಟ್ಟಭದ್ರ ಹಿತಾಸಕ್ತಿಗಳೇ ಅಧಿಕಾರ ಕೇಂದ್ರದ ಸುತ್ತ-ಮುತ್ತ ಇದ್ದರೆ ಏನನ್ನು ನಿರೀಕ್ಷಿಸಬಹುದೋ ಪಾಕಿಸ್ತಾನ ಹಾಗಾಗಬಹುದು. ಈ ಸಲ ಚುನಾವಣೆಯಲ್ಲಿ ಮುಂಬೈ ದಾಳಿಯ ಪ್ರಮುಖ ಸೂತ್ರಧಾರ ಹಫೀಜ್ ಸಯೀದ್ ನ ಪಕ್ಷದಿಂದ ಕೂಡ ಸ್ಪರ್ಧೆಯಲ್ಲಿದ್ದಾರೆ. ಬುಧವಾರ ರಾತ್ರಿ 11.55ರ ಸುಮಾರಿಗೆ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) 62 ಸ್ಥಾನದಲ್ಲಿ, ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ 97, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 28 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದವು. ಒಟ್ಟು 272 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 249 ಕ್ಷೇತ್ರಗಳ ಎಣಿಕೆ ನಡೆದಿತ್ತು.

   ಕ್ರಿಕೆಟ್, ರಾಜಕೀಯ, ವಿವಾಹ ವಿಚ್ಛೇದನ : ವಿಕ್ಷಿಪ್ತವ್ಯಕ್ತಿ ಇಮ್ರಾನ್ ಖಾನ್

   70 ವರ್ಷದಲ್ಲಿ ಮೊದಲ ಬಾರಿಗೆ ಮತ ಹಾಕಿದ ಬುಡಕಟ್ಟು ಮಹಿಳೆಯರು

   70 ವರ್ಷದಲ್ಲಿ ಮೊದಲ ಬಾರಿಗೆ ಮತ ಹಾಕಿದ ಬುಡಕಟ್ಟು ಮಹಿಳೆಯರು

   ಪಾಕಿಸ್ತಾನ ದೇಶ ಎಂದು ರಚನೆಗೊಂಡ ಎಪ್ಪತ್ತು ವರ್ಷಕ್ಕೆ ಇದೇ ಮೊದಲ ಬಾರಿಗೆ ಅಲ್ಲಿನ ಬುಡಕಟ್ಟು ಮಹಿಳೆಯರಿಗೆ ಮತ ಹಾಕಲು ಅವಕಾಶ ಸಿಕ್ಕಿದೆ. ಇದು ಒಳ್ಳೆ ಸುದ್ದಿ ಎಂದು ಪರಿಗಣಿಸಿದರೆ, ಕ್ವೆಟ್ಟಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಮೂವತ್ತು ಮಂದಿ ಸಾವನ್ನಪ್ಪಿದ್ದಾರೆ. ಪೂರ್ಣ ಹಾಗೂ ಸ್ಪಷ್ಟವಾದ ಫಲಿತಾಂಶವು ಗುರುವಾರವೇ ಗೊತ್ತಾಗುತ್ತದೆ. ಆದರೆ ಇಮ್ರಾನ್ ಖಾನ್ ಹಾದಿ ಸುಗಮವಾದಂತೆ ಕಾಣುತ್ತಿದೆ. ಆ ದೇಶಕ್ಕೆ ಕ್ರಿಕೆಟ್ ವರ್ಲ್ಡ್ ಕಪ್ ಗೆದ್ದುಕೊಟ್ಟಿದ್ದ ಆತ ತನ್ನ ರಾಜಕೀಯ ಪ್ರವೇಶದ ಆರಂಭದಲ್ಲಿ ಇಟ್ಟುಕೊಂಡಿದ್ದ ಉದ್ದೇಶದಿಂದ ಪೂರ್ಣ ವಿಮುಖ ಆಗಿರುವುದು ಸ್ಪಷ್ಟವಾಗುತ್ತದೆ.

   ಬದಲಾವಣೆ ಎಂಬುದು ನೀರಿನ ಮೇಲೆ ಬರಹ

   ಬದಲಾವಣೆ ಎಂಬುದು ನೀರಿನ ಮೇಲೆ ಬರಹ

   ಭಾರತದ ವಿರುದ್ಧ ವಿಷ ಕಾರುವ, ನಾಗರ ಹಾವುಗಳಂಥ ಉಗ್ರಗಾಮಿಗಳನ್ನು ಒಳ ನುಸುಳುವಂತೆ ಪ್ರೇರೇಪಿಸಿ ನೆಮ್ಮದಿ ಹಾಳು ಮಾಡಲು ಉತ್ತೇಜಿಸುವಂಥ ಹಫೀಜ್ ಸಯೀದ್ ಸ್ಥಾಪಿಸಿದ ರಾಜಕೀಯ ಪಕ್ಷ ಕೂಡ ಪಾಕಿಸ್ತಾನದ ಚುನಾವಣೆ ಕಣದಲ್ಲಿದೆ. ಆ ಪಕ್ಷದಿಂದ ಸ್ಪರ್ಧಿಸಿರುವುದು ಕೂಡ ಉಗ್ರಗಾಮಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡ ಹಲವರು. ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಆ ಕಾರಣಕ್ಕೇ ಇಂಥ ಫಲಿತಾಂಶ ಬಂದಿದೆ ಎಂದು ಪಿಎಂಎಲ್-ಎನ್ ದೂರಿದೆ. ಅಲ್ಲಿಗೆ ಪಾಕಿಸ್ತಾನದಲ್ಲಿ ಬದಲಾವಣೆ ತರ್ತೀನಿ ಎಂದು ಆರಂಭದಲ್ಲಿ ಬಲು ಉತ್ಸಾಹದಲ್ಲಿದ್ದ ಇಮ್ರಾನ್ ಖಾನ್ ನನ್ನು ಅಲ್ಲಿನ ಮೂಲಭೂತವಾದಿಗಳೇ ತಮ್ಮ ಹಾದಿಗೆ ತಂದ ಮೇಲೆ ಬದಲಾವಣೆ ಎಂಬುದು ನೀರಿನ ಮೇಲೆ ಬರಹದಂತೆ ಕಾಣುತ್ತದೆ.

   English summary
   Pakistan general elections leading towards hung, Imran Khan led PTI largest party. PML-N party is the second largest party. Here is the details.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more