ಭಾರತದ ಶತ್ರು ವಿಲವಿಲ, ಇನ್ನೂ ಬದಲಾಗಿಲ್ಲ ಪಾಕಿಸ್ತಾನದ ಪರಿಸ್ಥಿತಿ!
ಭಾರತ ಒಂದು ಕಡೆ ಭದ್ರ ಬುನಾದಿ ಹಾಕಿಕೊಂಡು, ಅಭಿವೃದ್ಧಿ ಹೊಂದುತ್ತಿದೆ. ಆದ್ರೆ ಈ ಸಮಯದಲ್ಲೇ ಭಾರತದ ಪಕ್ಕದಲ್ಲೇ ಇರುವ ದೇಶ ಪಾಕಿಸ್ತಾನ ಪರದಾಡುತ್ತಿದೆ. ಅಲ್ಲಿ ಜನ ಒಂದು ಹೊತ್ತು ಸರಿಯಾಗಿ ಊಟ ಮಾಡುವುದಕ್ಕೂ ಪರದಾಡುವ ಪರಿಸ್ಥಿತಿ ಇದೆ. ಅದ್ರಲ್ಲೂ ಕಳೆದ ಶುಕ್ರವಾರ ನಡೆದಿದ್ದ ಪಾಕಿಸ್ತಾನ ಲೋಕಸಭಾ ಚುನಾವಣೆ ಈಗ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ.
ಅಷ್ಟಕ್ಕೂ ಪಾಕಿಸ್ತಾನದಲ್ಲಿ ಇದೀಗ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಸಿಕ್ಕಿಲ್ಲ. ಹೀಗೆ ಬಹುಮತ ಸಿಗದ ಕಾರಣ ಪಾಕಿಸ್ತಾನದಲ್ಲಿ ಫಲಿತಾಂಶ ಹೊರಬಿದ್ದು ಈಗಾಗಲೇ 2-3 ದಿನ ಕಳೆದರೂ, ಸರ್ಕಾರ ಮಾತ್ರ ರಚನೆ ಆಗಿಲ್ಲ. ಹೀಗಾಗಿ ಅಲ್ಲಿನ ಪ್ರಜೆಗಳು ಕೂಡ, ಹಿಂಸೆಯ ಭಯ & ಅನಿಶ್ಚಿತತೆಯ ಆತಂಕದಲ್ಲಿ ದಿನ ದೂಡುವ ಪರಿಸ್ಥಿತಿ ಬಂದಿದೆ. ಹಾಗಾದ್ರೆ ಇದೀಗ ಪಾಕಿಸ್ತಾನದ ಸ್ಥಿತಿ ಹೇಗಿದೆ? ಏನ್ ನಡೀತಾ ಇದೆ ಪಾಪಿ ಪಾಕಿಸ್ತಾನದಲ್ಲಿ. ಆ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ನವಾಜ್ ಷರೀಫ್ ಮತ್ತೆ ಪ್ರಧಾನಿ?
ಪಾಕಿಸ್ತಾನದಲ್ಲಿ ಪಿಟಿಐ ಬೆಂಬಲಿತ 101 ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯವನ್ನು ಸಾಧಿಸಿದ್ದಾರೆ. ಪಾಕಿಸ್ತಾನ ಮುಸ್ಲೀಂ ಲೀಗ್-ನವಾಜ್ ಪಕ್ಷವು 75 ಸೀಟು, ಪಾಕಿಸ್ತಾನ ಪೀಪಲ್ಸ್ ಪಾರ್ಟಿ 54 ಕ್ಷೇತ್ರ ಗೆದ್ದಿದೆ. ಎಂಕ್ಯೂಎಂ-ಪಿ 17 ಕ್ಷೇತ್ರ & ಇತರ ಪಕ್ಷಗಳು 17 ಸೀಟನ್ನ ಗೆದ್ದಿವೆ. ಒಂದು ಕ್ಷೇತ್ರದ ಫಲಿತಾಂಶ ತಡೆಹಿಡಿಯಲಾಗಿದೆ. ಹೀಗಿದ್ದಾಗ ನವಾಜ್ ಷರೀಫ್ ಅವರ ಪಕ್ಷ & ಪಿಪಿಪಿ ನಡುವೆ ಮೈತ್ರಿ ಮಾತುಕತೆ ಕೂಡ ಬಲು ಜೋರಾಗಿದ್ದು. ಈ ಮೂಲಕ ಇಮ್ರಾನ್ ಖಾನ್ ಪಕ್ಷ ಬೆಂಬಲಿಸಿದ್ದ ಅಭ್ಯರ್ಥಿಗಳು ದೊಡ್ಡ ನಿರಾಸೆ ಅನುಭವಿಸಿದ್ದಾರೆ.
ಸರ್ಕಾರ ರಚನೆಯೇ ದೊಡ್ಡ ತಲೆನೋವು
ಮತ್ತೊಂದು ಕಡೆ ಪ್ರಮುಖ ಪಕ್ಷಗಳ ಜೊತೆಗೆ ಸೇರಿ ಮೈತ್ರಿ ಸರ್ಕಾರ ರಚಿಸುವುದನ್ನೂ ಮಾಜಿ ಪ್ರಧಾನಿ ಹಾಗೂ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ತಳ್ಳಿಹಾಕಿದ್ದಾರಂತೆ. ಇನ್ನು ಸರ್ಕಾರ ರಚನೆ ಕುರಿತ ಚರ್ಚೆಗೆ ಪ್ರಾಂತ್ಯವಾರು ಸಮಿತಿ ರಚನೆ ಆಗಿದೆ ಎನ್ನಲಾಗುತ್ತಿದ್ದು, ಇಷ್ಟೆಲ್ಲದರ ನಡುವೆ ಪಿಎಂಎಲ್-ಎನ್ & ಪಿಪಿಪಿ, ಎಂಕ್ಯೂಎಂ ಜೊತೆಗೆ ಚರ್ಚೆ ಇಲ್ಲ. ಇತರೆ ಪಕ್ಷಗಳು & ಆಸಕ್ತರ ಜೊತೆ ಚರ್ಚೆಗೆ ಸಿದ್ಧ ಅಂತಿದ್ದಾರಂತೆ ಇಮ್ರಾನ್ ಖಾನ್. ಹೀಗಾಗಿ ಪಾಕಿಸ್ತಾನದಲ್ಲಿ ಹೊಸದಾಗಿ ಸರ್ಕಾರ ರಚನೆಯೇ ದೊಡ್ಡ ತಲೆನೋವಾಗಿದೆ.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ಧಾರಿಗೆ ಪ್ರಧಾನಿ ಪಟ್ಟವು ಸಿಗಲಿ ಎಂದು ಇಷ್ಟು ದಿನ ಪಟ್ಟು ಹಿಡಿಯಲಾಗಿತ್ತು. ಆದರೆ ಇದೀಗ ಸರ್ಕಾರದಲ್ಲಿ ಭಾಗಿಯಾಗದೇ ಪಿಎಂಎಲ್-ನವಾಜ್ ಪಕ್ಷ ಬೆಂಬಲಿಸಲಾಗುವುದು ಅಂತಾ ಹೇಳುತ್ತಿದೆ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ. ಹೀಗಾಗಿ ಪಾಕಿಸ್ತಾನದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ? ಅನ್ನೋದು ಇದೀಗ ದೊಡ್ಡ ಯಕ್ಷಪ್ರಶ್ನೆ ಆಗಿ ಉಳಿದಿದೆ. ಇಷ್ಟೆಲ್ಲದರ ನಡುವೆ ಪಾಕಿಸ್ತಾನ ಸೇನೆಯ ಸಪೋರ್ಟ್ ಪಡೆದು, ಪಿಎಂಎಲ್-ನವಾಜ್ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್ 4ನೇ ಬಾರಿ ಪ್ರಧಾನಿ ಪಟ್ಟ ಪಡೆಯುವುದು ಪಕ್ಕಾ ಎನ್ನಲಾಗುತ್ತಿದೆ.












Click it and Unblock the Notifications