ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಸಮೀಪದ ಪ್ರದೇಶ ತಾಲಿಬಾನ್‌ ವಶಕ್ಕೆ ಪಡೆದ ಬಳಿಕ ಅಫ್ಘಾನ್‌ನ ಪ್ರಮುಖ ಗಡಿ ಮುಚ್ಚಿದ ಪಾಕ್‌

|
Google Oneindia Kannada News

ಕರಾಚಿ, ಜು.15: ಅಫ್ಘಾನಿಸ್ತಾನದ ಪ್ರಮುಖ ಗಡಿ ಪ್ರದೇಶ ಸ್ಪಿನ್ ಬೋಲ್ಡಾಕ್ ಅನ್ನು ತಾಲಿಬಾನ್ ಉಗ್ರರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂಬ ವರದಿಗಳಾಗಿದೆ. ಈ ಹಿನ್ನೆಲೆಯಲ್ಲಿ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಅಫ್ಘಾನಿಸ್ತಾನದೊಂದಿಗಿನ ತನ್ನ ಪ್ರಮುಖ ಗಡಿಯನ್ನು ಪಾಕಿಸ್ತಾನ ಮುಚ್ಚಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

Recommended Video

ಜಗತ್ತಿನ No1 ಬಲಿಷ್ಠ ಮಿಲಿಟರಿ ಪಡೆ ಯಾವುದು? ಯುದ್ಧ ಸಂಭವಿಸಿದರೆ ಗೆಲ್ಲೋದು ಯಾರು? | Indian Army Rank

ಚಮನ್ ಗಡಿಯಲ್ಲಿರುವ ಅಫ್ಘಾನಿಸ್ತಾನದೊಂದಿಗಿನ ಸ್ನೇಹ ಗೇಟ್ ಕ್ರಾಸಿಂಗ್ ಅನ್ನು ಮುಚ್ಚಲಾಗಿದೆ ಎಂದು ಚಮನ್ ಸಹಾಯಕ ಆಯುಕ್ತ ಆರಿಫ್ ಕಾಕರ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ತಾಲಿಬಾನ್‌ ಜೊತೆ ಮಾತುಕತೆ ವಿಫಲವಾದರೆ ಭಾರತದ ಮಿಲಿಟರಿ ನೆರವು ಕೇಳಬಹುದು: ಅಫ್ಘಾನಿಸ್ತಾನತಾಲಿಬಾನ್‌ ಜೊತೆ ಮಾತುಕತೆ ವಿಫಲವಾದರೆ ಭಾರತದ ಮಿಲಿಟರಿ ನೆರವು ಕೇಳಬಹುದು: ಅಫ್ಘಾನಿಸ್ತಾನ

"ಭದ್ರತೆಯು ಹೆಚ್ಚಿನ ಎಚ್ಚರಿಕೆಯಲ್ಲಿದೆ" ಎಂದು ಹೇಳಿದ ಚಮನ್ ಸಹಾಯಕ ಆಯುಕ್ತ ಆರಿಫ್ ಕಾಕರ್, ಸ್ಪಿನ್ ಬೋಲ್ಡಾಕ್ ಕ್ರಾಸಿಂಗ್‌ನ ನಿಯಂತ್ರಣವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

Pakistan Closes Key Border Crossing With Afghanistan After Taliban Seizing Key Nearby Area Reports

ಗಡಿ ಪಾಕಿಸ್ತಾನದ ಪಟ್ಟಣವಾದ ಚಮನ್ ಜೊತೆಗೆ ಸಂಪರ್ಕ ಸಾಧಿಸಲು ಸ್ಪಿನ್ ಬೋಲ್ಡಾಕ್ ಪ್ರಮುಖ ಗಡಿ ಪ್ರದೇಶವಾಗಿದೆ. ಈ ಮೂಲಕ ಉಭಯ ದೇಶಗಳ ನಡುವೆ ಹೆಚ್ಚಿನ ವ್ಯಾಪಾರ ನಡೆಯುತ್ತದೆ. ಆದರೆ ಈಗ ಅಫ್ಘಾನಿಸ್ತಾನಕ್ಕೆ ತಾಲಿಬಾನ್‌ ದಾಳಿ ಬೆನ್ನಲ್ಲೇ ಪಾಕಿಸ್ತಾನ ಈ ಗಡಿ ಪ್ರದೇಶ ಮುಚ್ಚಿದೆ.

ಇತ್ತೀಚಿನ ವಾರಗಳಲ್ಲಿ ತಾಲಿಬಾನ್, ಅಫ್ಘಾನಿಸ್ತಾನದ ಗಡಿ ಪ್ರದೇಶಗಳನ್ನು, ಬಂದರುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಪಿನ್ ಬೋಲ್ಡಾಕ್ ಕ್ರಾಸಿಂಗ್ ಬಳಿ ತಾಲಿಬಾನ್ ಉಗ್ರರು ಇರುವ ಚಿತ್ರಗಳು ವೈರಲ್‌ ಆಗುತ್ತಿದೆ. ಆದರೆ ಅಫ್ಘಾನ್‌ ಸರ್ಕಾರಿ ಅಧಿಕಾರಿಗಳು ಈ ಪ್ರದೇಶದ ಮೇಲೆ ಇನ್ನೂ ತಾವು ನಿಯಂತ್ರಣವನ್ನು ಹೊಂದಿದ್ದಾರೆಂದು ಹೇಳಿದ್ದಾರೆ.

'ಅಫ್ಘಾನ್‌ನ ನಗರದೊಳಗೆ ಹೋರಾಡಲು ಬಯಸಲ್ಲ' ಎಂದ ತಾಲಿಬಾನ್‌ ಉಗ್ರರು'ಅಫ್ಘಾನ್‌ನ ನಗರದೊಳಗೆ ಹೋರಾಡಲು ಬಯಸಲ್ಲ' ಎಂದ ತಾಲಿಬಾನ್‌ ಉಗ್ರರು

"ಬೋಲ್ಡಾಕ್ ಮತ್ತು ಚಮನ್ ನಡುವಿನ ಪ್ರಮುಖ ರಸ್ತೆಯನ್ನು (ಸ್ಪಿನ್) ತಾಲಿಬಾನ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಈ ಪ್ರದೇಶದ ವ್ಯಾಪಾರಿಗಳು ಮತ್ತು ನಿವಾಸಿಗಳಿಗೆ ತಮ್ಮ ಭದ್ರತೆಯನ್ನು ಖಾತರಿಪಡಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ವರದಿಗಳನ್ನು ತೋರಿಸಿದೆ. ಹಾಗೆಯೇ ಯುದ್ಧ ಪೀಡಿತ ದೇಶದಿಂದ ವಿದೇಶಿ ಪಡೆಗಳು ಹಿಂದೆ ಸರಿದಿರುವ ಕಾರಣ ಅಫ್ಘಾನಿಸ್ತಾನದ ಪರವಾಗಿ ಪಾಕಿಸ್ತಾನ ಸರ್ಕಾರ ನಿಲ್ಲದು ಎಂದು ಹೇಳಲಾಗಿದೆ.

ಇತ್ತೀಚಿನ ವಾರಗಳಲ್ಲಿ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಹಲವಾರು ಜಿಲ್ಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಹಲವಾರು ಸೈನಿಕರು ಗಡಿ ಪ್ರದೇಶದಿಂದ ಓಡಿ ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂಪಡೆದ ಬಳಿಕ ನಡೆದಿದೆ. ಅಫ್ಘಾನಿಸ್ತಾನದಲ್ಲಿ ಸುಮಾರು 20 ವರ್ಷಗಳ ಕಾಲ ಅಮೆರಿಕದ ಮಿಲಿಟರಿ ಮಿಷನ್ ಇತ್ತು. ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಕಳೆದ ವಾರ ಘೋಷಿಸಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Pakistan Closes Key Border Crossing With Afghanistan After Taliban Seizing Key Nearby Area Reports. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X