• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದ ಆರ್ಥಿಕತೆ ಕುರಿತು ಪಾಕ್ ಪ್ರಧಾನಿಗೆ ಬಾಲಕನ ಪಾಠ

|

ಇಸ್ಲಾಮಾಬಾದ್, ಸೆಪ್ಟೆಂಬರ್ 3: ಪಾಕಿಸ್ತಾನದ ಆರ್ಥಿಕತೆ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ಖಾನ್‌ಗೆ 15 ವರ್ಷದ ಬಾಲಕನೊಬ್ಬ ಪಾಠ ಮಾಡಿದ್ದಾನೆ.

ದೇಶದಲ್ಲಿ ಆರ್ಥಿಕತೆ ಸರಿ ಇಲ್ಲದಿರುವಾಗ ಕಾಶ್ಮೀರದ ಕುರಿತು ಯಾಕೆ ಚಿಂತೆ ಮಾಡುತ್ತೀರ ಮೊದಲು ದೇಶದ ಆರ್ಥಿಕತೆ ಸರಿ ಮಾಡುವುದರ ಬಗ್ಗೆ ಮೊದಲು ಗಮನ ವಹಿಸಿ ಎಂದಿದ್ದಾನೆ.

ಭಾರತ ಜಾಗತಿಕವಾಗಿ ಪ್ರಭಾವವನ್ನು ಹೊಂದಿದೆ, ಆರ್ಥಿಕ ಪ್ರಗತಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತ ಮುಂದಿದೆ. ಆರ್ಥಿಕತೆ ವಿಷಯದಲ್ಲಿ ಪಾಕಿಸ್ತಾನವನ್ನು ಭಾರತಕ್ಕೆ ಹೋಲಿಸಿದರೆ ಪರಿಗಣನೆಗೆ ಸಿಗದಷ್ಟು ಪಾಕ್ ಹಿಂದೆ ಉಳಿದಿದೆ.

ಭಾರತಕ್ಕೆ ಸರಿಸಮನಾಗಿ ಆರ್ಥಿಕತೆಯನ್ನು ಬಲಪಡಿಸುವವರೆಗೂ ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಪಾಕಿಸ್ತಾನವು ಭಾರತದೊಂದಿಗೆ ವ್ಯಾಪಾರಿ ಅನಿವಾರ್ಯತೆ ಹೊಂದಿದೆ ಎನ್ನುವುದನ್ನು ದೇಶ ಅರ್ಥ ಮಾಡಿಕೊಳ್ಳಬೇಕು.

ಮೋದಿ ಶುರು ಮಾಡಿದರು, ನಾವು ಮುಗಿಸುತ್ತೇವೆ: ಪಾಕಿಸ್ತಾನ

ಇಡೀ ವಿಶ್ವದ ಮೇಲೆ ಭಾರತ ಪ್ರಭಾವ ಬೀರಿದೆ, ವ್ಯವಹಾರ ವಾಣಿಜ್ಯ ಕಾರಣಕ್ಕೆ ಭಾರತ ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಿದೆ. ಈ ಲಾಬಿ ಇಡೀ ಜಗತ್ತನ್ನು ಭಾರತದೊಂದಿಗೆ ಕರೆದೊಯ್ಯುತ್ತಿದೆ.

ಎಲ್ಲಿಯವರೆಗೆ, ಪಾಕಿಸ್ತಾನದ ಆರ್ಥಿಕತೆಯು ಭಾರತದ ಆರ್ಥಿಕತೆಗೆ ಸಮನಾಗುವುದಿಲ್ಲವೋ, ಅಲ್ಲಿಯವರೆಗೆ ಪಾಕಿಸ್ತಾನ ಸಮಸ್ಯೆ ಬಗೆಹರಿಯಲ್ಲ. ಸಮಸ್ಯೆ ಬಗೆಹರಿಸಲು ಪಾಕ್ ಭಾರತದ ಸಮಾನವಾಗಿ ನಿಲ್ಲಲು ಸಾಧ್ಯವಾಗಲ್ಲ ಎಂದು ಹೇಳಿದ್ದಾನೆ.

ಆರ್ಥಿಕತೆ ಸರಿ ಇಲ್ಲದೆ ದೇಶ ಯಾವ ಗುರಿಯನ್ನೂ ಸಾಧಿಸಲು ಸಾಧ್ಯವಿಲ್ಲ, ಪಾಕಿಸ್ತಾನವು ಭಾರತವನ್ನು ಆರ್ಥಿಕವಾಗಿ ಹಿಂದಿಕ್ಕುವವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ.

ಹಾಗೆಯೇ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲುವುದರ ಮೂಲಕ ಭಾರತದ ಕೋಪಕ್ಕೆ ಒಳಗಾಗಲು ಯಾವ ದೇಶ ಕೂಡ ಬಯಸುವುದಿಲ್ಲ.

ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸಿದರೆ ಮಾತ್ರ ಕಾಶ್ಮೀರ ಸಮಸ್ಯೆ, ಸೇರಿದಂತೆ ನಮ್ಮ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತೆ ಎಂದು ಬಾಲಕ ಧೈರ್ಯದಿಂದ ಪ್ರಧಾನಿಗೆ ತಿರುಗೇಟು ನೀಡಿದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬಾಲಕನಿಂದ ಇಮ್ರಾನ್ ಖಾನ್ ಸಲಹೆ ಪಡೆಯುಂತಾಯಿತು ಎಂದು ಎಲ್ಲೆಡೆ ಟ್ರೋಲ್ ಆಗುತ್ತಿದೆ.

English summary
Pakistan 15 year Old Boy Suggest Prime minister Imran Khan to Focus on Nation's Economy instead of Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X