ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಮತ್ತೆ 15 ಪೈಲಟ್‌ಗಳಿಗೆ ಗೇಟ್‌ಪಾಸ್..!

By ಅನಿಕೇತ್
|
Google Oneindia Kannada News

ಇಸ್ಲಾಮಾಬಾದ್, ಜುಲೈ 19: ಪಾಕಿಸ್ತಾನದಲ್ಲಿ ನಕಲಿ ಪೈಲಟ್‌ಗಳ ತಲೆದಂಡ ಮುಂದುವರಿದಿದೆ. ನಕಲಿ ಲೈಸನ್ಸ್‌ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಮತ್ತೆ 15 ಪೈಲಟ್‌ಗಳನ್ನು ಪಾಕಿಸ್ತಾನ ವಿಮಾನಯಾನ ಪ್ರಾಧಿಕಾರ ಮನೆಗೆ ಕಳುಹಿಸಿದೆ. ಈ ಮೂಲಕ ನಕಲಿ ದಾಖಲೆ ಹೊಂದಿದ ಆರೋಪಕ್ಕಾಗಿ ಸಸ್ಪೆಂಡ್ ಆದ ಪೈಲಟ್‌ಗಳ ಸಂಖ್ಯೆ 93ಕ್ಕೆ ಏರಿದೆ.

Recommended Video

Twitter Hackers ಮಾಡಿದ್ದೇನು , ಕದ್ದಿದ್ದೆಷ್ಟು ? | Oneindia Kannada

ಇದೇ ವರ್ಷದ ಮೇ ತಿಂಗಳಲ್ಲಿ ಪಾಕ್‌ನಲ್ಲಿ ಭೀಕರ ವಿಮಾನ ದುರಂತವೊಂದು ಸಂಭವಿಸಿತ್ತು. ಕರಾಚಿ ಬಳಿ ಸಂಭವಿಸಿದ್ದ ಈ ಅಪಘಾತದಲ್ಲಿ 97 ಪಾಕ್‌ ಪ್ರಯಾಣಿಕರು ಜೀವ ಕಳೆದುಕೊಂಡಿದ್ದರು. ಘಟನೆಗೆ ವಿಮಾನದ ತಾಂತ್ರಿಕ ದೋಷವೇ ಕಾರಣ ಅಂತಾ ಮೊದಲಿಗೆ ಹೇಳಲಾಗಿತ್ತು.

97 ಮಂದಿ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನ ವಿಮಾನ ಪತನದ ಕಾರಣ ಬಹಿರಂಗ97 ಮಂದಿ ಸಾವಿಗೆ ಕಾರಣವಾಗಿದ್ದ ಪಾಕಿಸ್ತಾನ ವಿಮಾನ ಪತನದ ಕಾರಣ ಬಹಿರಂಗ

ಆದರೆ ತನಿಖೆಯ ನಂತರ ಭಯಾನಕ ಸಂಗತಿ ಬಯಲಾಗಿತ್ತು. ಪೈಲಟ್‌ಗಳು ಮಾಡಿದ ಎಡವಟ್ಟಿನಿಂದಾಗಿ ವಿಮಾನ ಅಪಘಾತ ಸಂಭವಿಸಿದೆ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಪೈಲಟ್‌ಗಳು ಕೊರೊನಾ ವೈರಸ್ ಬಗ್ಗೆ ಮಾತುಕತೆ ನಡೆಸಿದ್ದರಿಂದ ವಿಮಾನ ಲ್ಯಾಂಡ್ ಮಾಡುವಾಗ ಅವಘಡ ಸಂಭವಿಸಿತ್ತು.

ಕೊರೊನಾ ವೈರಸ್‌ ಬಗ್ಗೆ ಪೈಲಟ್ ಚರ್ಚೆ

ಕೊರೊನಾ ವೈರಸ್‌ ಬಗ್ಗೆ ಪೈಲಟ್ ಚರ್ಚೆ

ಈ ಬಗ್ಗೆ ಖುದ್ದು ಪಾಕ್‌ನ ವಿಮಾನಯಾನ ಸಚಿವರೇ ಮಾಹಿತಿ ನೀಡಿದ್ದರು. ಪೈಲಟ್‌ ಹಾಗೂ ಕಂಟ್ರೋಲರ್‌ ನಿಯಮ ಉಲ್ಲಂಘಿಸಿದ್ದರಿಂದ 97 ಜನರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಘಟನೆ ನಂತರ ಪಾಕಿಸ್ತಾನದಲ್ಲಿ ನಕಲಿ ದಾಖಲೆ ಹೊಂದಿರುವ ಪೈಲಟ್‌ಗಳನ್ನ ಹುಡುಕಿ, ಹುಡುಕಿ ಮನೆಗೆ ಕಳುಹಿಸಲಾಗುತ್ತಿದೆ.

40% ಪಾಕ್‌ ಪೈಲಟ್‌ಗಳು ಫೇಕ್..!

40% ಪಾಕ್‌ ಪೈಲಟ್‌ಗಳು ಫೇಕ್..!

ಕರಾಚಿಯಲ್ಲಿ ಭೀಕರ ವಿಮಾನ ಅಪಘಾತ ಸಂಭಿಸಿದ ನಂತರ ಖುದ್ದು ಪಾಕಿಸ್ತಾನದ ವಿಮಾನಯಾನ ಸಚಿವರು ಬೆಚ್ಚಿಬೀಳಿಸುವ ಹೇಳಿಕೆ ನೀಡಿದ್ದರು. ಪಾಕ್‌ನಲ್ಲಿರುವ ಶೇಕಡ 40ರಷ್ಟು ಪೈಲಟ್‌ಗಳು ನಕಲಿ ಲೈಸೆನ್ಸ್ ಹಾಗೂ ನಕಲಿ ದಾಖಲೆಗಳನ್ನ ಹೊಂದಿದ್ದಾರೆ ಎಂದು ವಿವರಿಸಿದ್ದರು. ಇದು ಪಾಕ್ ಮಾನವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿತ್ತು. ಇದೆಲ್ಲದರ ಪರಿಣಾಮ ಸದ್ಯ ನಕಲಿ ದಾಖಲೆ ಹೊಂದಿರುವ ಫೇಕ್ ಪೈಲಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

262 ಪೈಲೆಟ್‌ಗಳ ದಾಖಲೆಗಳೇ ನಕಲಿ..!

262 ಪೈಲೆಟ್‌ಗಳ ದಾಖಲೆಗಳೇ ನಕಲಿ..!

ವಿಮಾನಯಾನ ಸಚಿವಾಲಯ ಕಳೆದ ತಿಂಗಳು ತನಿಖೆ ನಡೆಸಿದಾಗ ಒಟ್ಟು 262 ಪೈಲಟ್‌ಗಳು ನಕಲಿ ಲೈಸೆನ್ಸ್‌ ಹೊಂದಿರುವುದು ಪತ್ತೆಯಾಗಿತ್ತು. ಆದರೆ ಇವರೆಲ್ಲರ ಮೇಲೆ ದಿಢೀರ್ ಕ್ರಮ ಕೈಗೊಳ್ಳದೆ, ಹಂತ ಹಂತವಾಗಿ ಕ್ರಮ ಜರುಗಿಸಲಾಗುತ್ತಿದೆ. 262 ಪೈಲಟ್‌ಗಳ ಪೈಕಿ 28 ಪೈಲಟ್‌ಗಳ ಪರವಾನಗಿ ರದ್ದಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗ

ಈಗಾಗಲೇ 93 ಪೈಲಟ್‌ಗಳ ಲೈಸನ್ಸ್‌ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಉಳಿದ 141 ಕೇಸ್‌ಗಳ ತನಿಖೆ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಅಂತಾ ಪಾಕ್‌ನ ವಿಮಾನಯಾನ ವಿಭಾಗದ ವಕ್ತಾರ ಅಬ್ದುಲ್‌ ಸತ್ತಾರ್‌ ಖೋಖರ್‌ ಮಾಹಿತಿ ನೀಡಿದ್ದಾರೆ. ಈ ಮೂಲಕ ಮೊದಲೇ ಬಡತನದ ಬೇಗೆಯಲ್ಲಿ ಬೇಯುತ್ತಾ, ನೆರೆ ರಾಷ್ಟ್ರಗಳ ಜೊತೆಗೆ ಕಿರಿಕ್ ಮಾಡುವ ಪಾಕ್‌ಗೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗವಾಗಿದೆ.

English summary
Pakistan aviation authority suspended 15 more pilots for having Fake licenses. Still investigation underway about fake pilots. More than 40 percent of Pakistan pilots are Fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X