Martial Law: 'ಮಾರ್ಷಲ್ ಲಾ ಜಾರಿ ಮಾಡಲ್ಲ, ನಾವು ಪ್ರಜಾಪ್ರಭುತ್ವವನ್ನು ನಂಬುತ್ತೇವೆ,' ಎಂದ ಪಾಕ್ ಸೇನೆ
ಸುಮಾರು ನಾಲ್ಕು ದಿನಗಳ ಕಾಲ ರಾಜಕೀಯವಾಗಿ ಹಲವಾರು ಬೆಳವಣಿಗೆಗಳು ಕಂಡ ಬಳಿಕ ಪಾಕಿಸ್ತಾನದಲ್ಲಿ ಮಾರ್ಷಲ್ ಲಾ (ಮಿಟಿಲರಿ ಆಡಳಿತ) ಅನ್ನು ಜಾರಿ ಮಾಡಲಾಗುತ್ತದೆಯೇ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಮಿಲಿಟರಿ ಪಡೆಯು, "ನಾವು ಪಾಕಿಸ್ತಾನದಲ್ಲಿ ಯಾವುದೇ ಮಾರ್ಷಲ್ ಲಾ ಅನ್ನು ಜಾರಿ ಮಾಡಲ್ಲ, ನಾವು ಪ್ರಜಾಪ್ರಭುತ್ವವನ್ನು ನಂಬುತ್ತೇವೆ," ಎಂದು ಹೇಳಿಕೊಂಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ರನ್ನು ಬಂಧನ ಮಾಡಿದ ಬಳಿಕ ಪಾಕ್‌ನಲ್ಲಿ ಭಾರೀ ಗೊಂದಲಮಯ ವಾತಾರಣ ಕಂಡು ಬಂದಿದೆ. ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್ ಜಾಮೀನು ಪಡೆದು ಹೊರಗಿದ್ದರು. ಆದರೆ ಹೈಕೋರ್ಟ್‌ಗೆ ಹಾಜರಾದ ಸಂದರ್ಭದಲ್ಲಿ ಇಮ್ರಾನ್ ಖಾನ್‌ರನ್ನು ಬಂಧನ ಮಾಡಲಾಗಿದೆ. ಅದಕ್ಕೂ ಮುನ್ನ ಇಮ್ರಾನ್ ಖಾನ್‌ಗೆ 8 ಪ್ರಕರಣಗಳಲ್ಲಿ ಜಾಮೀನು ವಿಸ್ತರಣೆ ಮಾಡಲಾಗಿತ್ತು.

ಪಾಕಿಸ್ತಾನದಲ್ಲಿ ಮಾರ್ಷಲ್ ಲಾ ಜಾರಿಯಾಗುತ್ತಾ ಎಂಬ ಗೊಂದಲಗಳ ನಡುವೆ ಪಾಕ್ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಐಎಸ್‌ಪಿಆರ್‌ನ ಡೈರೆಕ್ಟರ್ ಜನರಲ್ ಶರೀಫ್ ಚೌಧ್ರಿ, "ಜನರ್ ಆಸೀಮ್ ಮುನಿರ್ (ಸೇನಾ ಮುಖ್ಯಸ್ಥ) ಮತ್ತು ಸೇನಾ ನಾಯಕತ್ವವು ಮನಪೂರ್ವಕವಾಗಿ ಪ್ರಜಾಪ್ರಭುತ್ವಕ್ಕೆ ಬೆಂಬಲ ನೀಡುತ್ತದೆ. ಈ ಬೆಂಬಲವನ್ನು ಮುಂದುವರಿಸುತ್ತದೆ. ಹಾಗಿರುವಾಗ ಮಾರ್ಷಲ್ ಲಾ ಜಾರಿಯ ವಿಚಾರವೇ ಇಲ್ಲ," ಎಂದು ತಿಳಿಸಿದ್ದಾರೆ.
ಇಮ್ರಾನ್ ಖಾನ್ ಬಂಧನಕ್ಕೆ ಸಂಬಂಧಿಸಿಂತೆ ಪಾಕಿಸ್ತಾನ ಸೇನೆಯ ನಾಯಕತ್ವದಲ್ಲಿ ಭಿನ್ನಮತವಿದೆ. ಸೇನೆಯ ನಾಯಕರ ನಡುವೆ ಒಗ್ಗಟ್ಟು ಇಲ್ಲ ಎಂಬ ವರದಿಯನ್ನು ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದ್ದಾರೆ. ಇನ್ನು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲು ಹಲವಾರು ಸೇನೆಯ ಸದಸ್ಯರು ಹಿಂದೇಟು ಹಾಕಿದದಾರೆ ಎಂದು ಕೂಡಾ ವರದಿಯಾಗಿದೆ.
"ಸೇನೆಯ ಮುಖ್ಯಸ್ಥರು ಹಾಗೂ ಸೇನೆಯ ಹಿರಿಯ ನಾಯಕರುಗಳು ಸಂಪೂರ್ಣವಾಗಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯನ್ನು ಇರಿಸಿಕೊಂಡಿದೆ," ಎಂದು ವಕ್ತಾರರು ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಹಲವಾರು ಸೇನಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎಂವ ವರದಿಯನ್ನು ಕೂಡಾ ಚೌದ್ರಿ ತಳ್ಳಿಹಾಕಿದ್ದಾರೆ.
"ಬಾಹ್ಯ ದ್ವೇಷಿಗಳ ಮತ್ತು ಆಂತರಿಕ ತಂತ್ರಗಳ ಹೊರತಾಗಿಯು ಕೂಡಾ ಪಾಕಿಸ್ತಾನದ ಸೇನೆಯು ಮುಖ್ಯ ಸೇನಾಧಿಕಾರಿ ಜನರಲ್ ಆಸಿಮ್ ಮುನಿರ್ ನೇತೃತ್ವದಲ್ಲಿ ಸಂಘಟಿತವಾಗಿದೆ, ಒಗ್ಗಟ್ಟಿನಲ್ಲಿದೆ. ಸೇನೆಯಲ್ಲಿ ವಿಭಜನೆಯನ್ನು ತರುವ ಕೆಲವರ ಕನಸು ಎಂದಿಗೂ ಕೂಡಾ ಕನಸಾಗಿಯೇ ಉಳಿಯಲಿದೆ. ಸೇನೆಯಲ್ಲಿ ಯಾರೂ ಕೂಡಾ ರಾಜೀನಾಮೆ ನೀಡಿಲ್ಲ, ಆದೇಶವನ್ನು ಉಲ್ಲಂಘನೆ ಮಾಡಿಲ್ಲ," ಎಂದು ಸ್ಪಷ್ಟಣೆಯನ್ನು ನೀಡಿದ್ದಾರೆ.
ಇಮ್ರಾನ್ ಖಾನ್ ವಿರುದ್ಧದ ಆರೋಪಗಳೇನು?
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸುಮಾರು 5 ಸಾವಿರ ಕೋಟಿ ರೂಪಾಯಿಯ ಲ್ಯಾಂಡ್ ಡೀಲಿಂಗ್ ಹಗರಣದ ಆರೋಪವಿದೆ. ಈ ಪ್ರಕರಣ ಸಂಬಂಧಿಸಿದಂತೆ ಇಮ್ರಾನ್ ಖಾನ್ ಬಂಧನ ಮಾಡಲಾಗಿದೆ. ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿದೆ. ಸದ್ಯ ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು ಮಾಡಿದೆ.












Click it and Unblock the Notifications