• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಸ್ಪುಟ್ನಿಕ್ 5 ಕೊರೊನಾ ಲಸಿಕೆ ತುರ್ತು ಬಳಕೆಗೆ ಅನುಮತಿ

|

ಇಸ್ಲಾಮಾಬಾದ್, ಜನವರಿ 24: ರಷ್ಯಾದ ಸ್ಪುಟ್ನಿಕ್ 5 ಕೊರೊನಾ ಲಸಿಕೆಯ ತುರ್ತು ಬಳಕೆಗೆ ಪಾಕಿಸ್ತಾನ ಸರ್ಕಾರ ಅನುಮೋದನೆ ನೀಡಿದೆ.

ಇದಕ್ಕೂ ಮೊದಲು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿದ ಕೋವಿಡ್ -19 ಲಸಿಕೆ, ನಂತರ ಚೀನಾದ ಸಿನೋವಾಕ್ ಲಸಿಕೆಯ ತುರ್ತು ಬಳಕೆಗೆ ಪ್ರಾಧಿಕಾರ ಅನುಮತಿಸಿತ್ತು. ಆದರೆ. ಚೀನಾದ ಔಷಧೇ ಶೇ 50.4 ಕ್ಕಿಂತ ಹೆಚ್ಚು ಪರಿಣಾಮತ್ವ ಹೊಂದಿಲ್ಲ ಎಂದು ಬ್ರೆಜಿಲಿಯನ್ ಕ್ಲಿನಿಕಲ್ ಪ್ರಯೋಗಗಳಿಂದ ಕಂಡು ಬಂದಿದೆ.

ಕೊರೊನಾ ಲಸಿಕೆ ನೆಪದಲ್ಲಿ ಹಿರಿಯ ನಾಗರಿಕರಿಗೆ ಮೋಸ; ಕೇಂದ್ರದ ಎಚ್ಚರಿಕೆಕೊರೊನಾ ಲಸಿಕೆ ನೆಪದಲ್ಲಿ ಹಿರಿಯ ನಾಗರಿಕರಿಗೆ ಮೋಸ; ಕೇಂದ್ರದ ಎಚ್ಚರಿಕೆ

ಸರ್ಕಾರದ ಆದೇಶದಂತೆ, ಸ್ಥಳೀಯ ಔಷಧೀಯ ಕಂಪೆನಿಗೆ ಸ್ಪುಟ್ನಿಕ್ ವಿ ಆಮದು ಮತ್ತು ಪೂರೈಕೆ ಹಕ್ಕುಗಳನ್ನು ನೀಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಶನಿವಾರ ದೃಢಪಡಿಸಿದ್ದಾರೆ.

ಸ್ಪುಟ್ನಿಕ್ ವಿ ಮೂರನೇ ಕೋವಿಡ್ -19 ಲಸಿಕೆ ಆಗಿದ್ದು, ಇದನ್ನು ಪಾಕಿಸ್ತಾನ ಸರ್ಕಾರ ತುರ್ತು ಬಳಕೆಗಾಗಿ ಅನುಮೋದಿಸಿದೆ. ಪಾಕಿಸ್ತಾನದ ಔಷಧ ನಿಯಂತ್ರಣಾ ಪ್ರಾಧಿಕಾರದ ಮಂಡಳಿಯು ನಡೆಸಿದ ಸಭೆಯಲ್ಲಿ, ಮತ್ತೊಂದು ಲಸಿಕೆಯ ತುರ್ತು ಬಳಕೆಗೆ ಅನುಮತಿಸಲಾಗಿದೆ.

ಇದನ್ನು ರಷ್ಯಾ ಅಭಿವೃದ್ಧಿ ಹೂಡಿಕೆ ನಿಧಿಯ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.

English summary
Pakistan has authorised the emergency use of Russia's Sputnik V, the third anti-COVID-19 vaccine approved by the country against the deadly coronavirus, authorities said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X