ಸುಮನ್ ಕುಮಾರಿ: ಪಾಕಿಸ್ತಾನದ ಮೊದಲ ಹಿಂದೂ ನ್ಯಾಯಾಧೀಶೆ

ಇಸ್ಲಾಮಾಬಾದ್, ಜನವರಿ 29: ಪಾಕಿಸ್ತಾನದ ಸಿವಿಲ್ ನ್ಯಾಯಾಧೀಶ ಸ್ಥಾನಕ್ಕೆ ಹಿಂದೂ ಮಹಿಳಾ ಜಡ್ಜ್ ನೇಮಕ ಮಾಡಿದ್ದಾರೆ. ಈ ಮೂಲಕ ನ್ಯಾಯಾಧೀಶೆಯಾಗಿ ನೇಮಕವಾದ ಪ್ರಥಮ ಹಿಂದೂ ಮಹಿಳೆ ಎಂಬ ಸಾಧನೆಯನ್ನು ಸುಮನ್ ಕುಮಾರಿ ಮಾಡಿದ್ದಾರೆ.

ಸಿಂಧ್ ಪ್ರಾಂತ್ಯದ ಕ್ವಾಬಾರ್ ಶಾದಾಬ್ಕೊಟ್ ಪ್ರದೇಶದ ನಿವಾಸಿ, ವೃತ್ತಿಯಲ್ಲಿ ನೇತ್ರ ತಜ್ಞರಾಗಿರುವ ಪವನ್ ಕುಮಾರ್ ಬೋಧನ್ ಎಂಬವರ ಪುತ್ರಿ ಸುಮನ್ ಕುಮಾರಿ ಅವರು ನ್ಯಾಯಾಂಗ ಅಧಿಕಾರಿಗಳ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು..

ತಮ್ಮ ತವರು ಜಿಲ್ಲೆಯ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗುವ ಕನಸು ಕಂಡಿದ್ದರು. ಈಗ ಅವರ ಕನಸು ನನಸಾಗಿದೆ. ಹೈದರಾಬಾದ್ ನಲ್ಲಿ ಎಲ್.ಎಲ್.ಬಿ. ಪದವಿ ಪಡೆದಿದ್ದು, ನಂತರ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

Pakistan appoints first ever female Hindu civil judge

ತಮ್ಮ ಪುತ್ರಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಪವನ್ ಕುಮಾರ್, ನಮ್ಮ ಪ್ರಾಂತ್ಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಕಾನೂನು ಸಲಹೆ ನೀಡುತ್ತಿದ್ದ ಸುಮನ್ ಈಗ ಉನ್ನತ ಹುದ್ದೆಗೇರಿರುವುದು ಸಂತಸದ ವಿಷಯ ಎಂದಿದ್ದಾರೆ.

ಸುಮನ್ ಕುಮಾರಿ ಅವರ ಅಕ್ಕ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಮತ್ತೊಬ್ಬ ಸಹೋದರಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ. ಪಾಕಿಸ್ತಾನದ ಲ್ಲಿ ಶೇ 1.85ರಷ್ಟು ಹಿಂದುಗಳಿದ್ದಾರೆ. 2006ರಲ್ಲಿ ರತ್ನ ಭಗವಾನ್ ದಾಸ್ ಚಾವ್ಲಾ ಅವರು ಪಾಕಿಸ್ತಾನದ ಸೆನೆಟ್ ಸೇರಿದ ಮೊದಲ ಹಿಂದೂ ಮಹಿಳೆ ಎನಿಸಿಕೊಂಡಿದ್ದರು. ಕಳೆದ ವರ್ಷ ಕೃಷ್ಣ ಕುಮಾರಿ ಕೊಹ್ಲಿ ಕೂಡಾ ಇದೆ ರೀತಿ ಸಾಧನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+