India-Bangladesh Relations: ಒಂದಾಯ್ತು ಪಾಕಿಸ್ತಾನ್‌ - ಬಾಂಗ್ಲಾದೇಶ, ಭಾರತಕ್ಕೆ ಶುರುವಾಯ್ತು ಹೊಸ ತಲೆಬಿಸಿ!

Pakistan and Bangladesh unite: ಭಾರತಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ. ಶತ್ರು ಹಾಗೂ ಮಿತ್ರ ದೇಶಗಳು ಒಂದಾಗಿವೆ. ಹೌದು ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾದ ಮೇಲೆ ಹೊಸ ಸರ್ಕಾರವು ಪಾಕಿಸ್ತಾನ್‌ ಹಾಗೂ ಚೀನಾದೊಂದಿಗೆ ಕೈಜೋಡಿಸಿದ್ದು, ಭಾರತಕ್ಕೆ ಹೊಸ ತಲೆನೋವು ಶುರುವಾಗಿದೆ. ಬಾಂಗ್ಲಾದೇಶದ ಉದಯಕ್ಕೆ ಕಾರಣವಾಗಿದ್ದೇ ಭಾರತ. ಭಾರತ ಮಧ್ಯಸ್ಥಿಕೆ ಹಾಗೂ ಭಾರತ ಯುದ್ಧದ ಮುಂದಾಳತ್ವ ವಹಿಸಿ ಬಾಂಗ್ಲಾದೇಶದ ಉದಯಕ್ಕೆ ಭಾರತ ಕಾರಣವಾಗಿತ್ತು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತೋರಿಸಿದ್ದ ಧೈರ್ಯ ಈಗ ಇತಿಹಾಸ. ಪ್ರಧಾನಿ ನರೇಂದ್ರ ಮೋದಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಮೇಲೂ ಈ ಸಂಬಂಧ ಉತ್ತಮವಾಗಿತ್ತು. ಮೋದಿ ಅವರ ಆಡಳಿತದಲ್ಲೂ ಕೋಟ್ಯಾಂತರ ರೂಪಾಯಿ ಅನುದಾನವನ್ನು ಬಾಂಗ್ಲಾಗೆ ಕೊಡಲಾಗಿದೆ. ಆದರೆ, ಬಾಂಗ್ಲಾ ಕೃತಜ್ಞತೆ ಮರೆಯುತ್ತಿದ್ದು, ಶತ್ರು ರಾಷ್ಟ್ರಗಳೊಂದಿಗೆ ಒಂದಾಗುತ್ತಿದ್ದು, ಭಾರತಕ್ಕೆ ಮುಳ್ಳಾಗುತ್ತಿದೆ.

ಬಾಂಗ್ಲಾದೇಶದಲ್ಲಿ ಈಗ ಎಲ್ಲವೂ ಮೊದಲಿನಿಂತೆ ಇಲ್ಲ. ಬಾಂಗ್ಲಾದೇಶದಲ್ಲಿ ಹೆಚ್ಚಾದ ಉದ್ವಿಗ್ನತೆಯ ನಂತರ ಪ್ರಧಾನಿಯಾದ ಶೇಖ್ ಹಸೀನಾ ಅವರು ದೇಶ ತೊರೆದಿದ್ದರು. ಇದಾದ ಮೇಲೆ ಅವರ ರಾಜೀನಾಮೆ ಹಾಗೂ ಇದೀಗ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ಬಾಂಗ್ಲಾದಲ್ಲಿ ಈಚೆಗೆ ಇಸ್ಲಾಮಿಕ್ ಮೂಲಭೂತವಾದಿಗಳ ಉಪಟಳ ಹೆಚ್ಚಾಗಿರುವುದು ವರದಿಯಾಗುತ್ತಲ್ಲೇ ಇದೆ.

Pakistan and Bangladesh unite India faces a new challenge

ಅಲ್ಲಿನ ಅಲ್ಪಸಂಖ್ಯಾತರು ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಭಾರತದ ಆಡಳಿತ ಹಾಗೂ ವಿರೋಧ ಪಕ್ಷಗಳು ಒಂದಾಗಿ ಖಂಡಿಸಿವೆ. ಬಾಂಗ್ಲಾದಲ್ಲಿ ಹಿಂದೂ ದೇವಾಲಯಗಳು ಹಾಗೂ ಹಿಂದೂಗಳ ಮೇಲೆ ಆಗುತ್ತಿರುವ ದಾಳಿಯ ವಿರುದ್ಧ ದನಿ ಎತ್ತುವಂತೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಗ್ರಹಿಸಿವೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಬಾಂಗ್ಲಾದೇಶದ ಪ್ರಧಾನಿ ಮುಹಮ್ಮದ್ ಯೂನಸ್ ಭೇಟಿ ಚರ್ಚೆ ಮಾಡುತ್ತಿದ್ದಾರೆ. ಪಾಕಿಸ್ತಾನದೊಂದಿಗೆ ಸಂಬಂಧ ಸುಧಾರಣೆ ಮಾಡುವುದೇ ನಮ್ಮ ಮೊದಲ ಆದ್ಯತೆ ಅಂತ ಬಾಂಗ್ಲಾ ಹೇಳಿಕೊಂಡಿರುವುದು ಭಾರತಕ್ಕೆ ಶಾಕ್‌ ನೀಡಿದೆ. ಪಾಕಿಸ್ತಾನ ಹಾಗೂ ಚೀನಾದೇಶಗಳೊಂದಿಗೆ ಭಾರತದ ಸಂಬಂಧ ಮೊದಲಿನಿಂದಲೂ ಹೇಳಿಕೊಳ್ಳುವಂತಿಲ್ಲ. ಈ ಎರಡೂ ದೇಶಗಳೊಂದಿಗೆ ಭಾರತ ಯುದ್ಧ ಮಾಡಿದೆ.

Pakistan and Bangladesh unite India faces a new challenge

ಈ ಯುದ್ಧಗಳಲ್ಲಿ ಭಾರತದ ಸಾವಿರಾರು ಜನ ಯೋಧರು ವೀರ ಮರಣ ಹೊಂದಿದ್ದಾರೆ. ಚೀನಾದೊಂದಿಗೆ ಸಂಬಂಧ ಸುಧಾರಿಸುತ್ತಿದೆಯಾದರೂ ಅದು ಕೇವಲ ವಾಣಿಜ್ಯ ಹಾಗೂ ವ್ಯವಹಾರದ ಉದ್ದೇಶದಿಂದ ಮಾತ್ರ. ಆದರೆ, ಪಾಕಿಸ್ತಾನದೊಂದಿಗೆ ಭಾರತವು ಮಾತುಕತೆ ಪುನರಾರಂಭಿಸುವ ಬಗ್ಗೆ ಯಾವುದೇ ಪ್ರಸ್ತಾವನೆಯು ಇಲ್ಲ ಎನ್ನಲಾಗುತ್ತಿದೆ.

ಈಗಾಗಲೇ ಭಾರತ ಗಡಿಯಲ್ಲಿ ಎರಡು ಶತ್ರು ರಾಷ್ಟ್ರಗಳ ಜೊತೆ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದೆ. ಇದರ ನಡುವೆ ಬಾಂಗ್ಲಾದೇಶವೂ ಈ ರಾಷ್ಟ್ರಗಳೊಂದಿಗೆ ಕೈಜೋಡಿಸುತ್ತಿರುವುದು ಭಾರತಕ್ಕೆ ನುಂಗಲಾದ ತುಪ್ಪ ಆಗುತ್ತಿದೆ ಅಂತಲೇ ವಿಶ್ಲೇಷಿಸಲಾಗುತ್ತಿದೆ. ಭಾರತ ಸ್ವಾತಂತ್ರ್ಯ ಹಾಗೂ ವಿಭಜನೆಯ ನಂತರ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಒಂದೇ ರಾಷ್ಟ್ರವಾಗಿತ್ತು. ಭಾಷೆ ವಿಚಾರವಾಗಿ ನಡೆದ ಸಂಘರ್ಷದಲ್ಲಿ ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಗಳು ಬೇರೆಯಾಗಿ ಪಾಕಿಸ್ತಾನ್‌ ಹಾಗೂ ಬಾಂಗ್ಲಾದೇಶ ಉದಯವಾಯಿತು. 1971ರ ಯುದ್ಧಕ್ಕೆ ಮುಂದಾಳತ್ವ ವಹಿಸಿದ್ದೇ ಭಾರತ. ಬಾಂಗ್ಲಾ ಉದಯಕ್ಕೆ ಕಾರಣವಾದ ಭಾರತವನ್ನೇ ಬಾಂಗ್ಲಾ ಈಗ ಮರೆತಂತಿದೆ.

ಚೀನಾ ಹಾಗೂ ಪಾಕಿಸ್ತಾನ್‌ ದೇಶಗಳು ಮೊದಲಿನಿಂದಲೂ ಒಂದಾಗಿವೆ. ಚೀನಾದ ಮುಂದೆ ಪಾಕಿಸ್ತಾನ್‌ ಮಂಡಿಯೂರಿಯಾಗಿದೆ. ಅದಕ್ಕೆ ಪಾಕ್‌ನ ಆರ್ಥಿಕ ಪರಿಸ್ಥಿತಿ ಕಾರಣ. ಚೀನಾದಿಂದ ಪಾಕ್‌ ಸಾಲ ಪಡೆದುಕೊಂಡಿದೆ. ಅದಕ್ಕಾಗಿ ಚೀನಾದೊಂದಿಗೆ ಒಳ್ಳೆಯ ಸಂಬಂಧ ಬೆಳೆಸಿದೆ. ಇದೀಗ ಬಾಂಗ್ಲಾ ಸಹ ಅದೇ ಹಾದಿಯಲ್ಲಿ ಸಾಗುತ್ತಿದೆ. ಇದರೊಂದಿಗೆ ಇಲ್ಲಿ ಇಸ್ಲಾಮಿಕ್‌ ವಿಚಾರ ಪ್ರಭಾವ ಬೀರುತ್ತಿದೆ ಎನ್ನಲಾಗಿದೆ. ಬಾಂಗ್ಲಾದ ಹೊಸ ತಲೆಮಾರಿಗೆ ಭಾರತ ಸಹಾಯ ಹಸ್ತದ ಪರಿಚಯ ಇಲ್ಲದೆ ಇರುವುದು ಸಹ ಇದಕ್ಕೆ ಕಾರಣವಾಗಿದೆ. ಜನರ ಮನಸ್ಥಿತಿ ಹಾಗೂ ಅಭಿಪ್ರಾಯಕ್ಕೆ ತಕ್ಕಂತೆ ಬಾಂಗ್ಲಾ ದೇಶದ ತಾತ್ಕಾಲಿಕ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.

ಬಾಂಗ್ಲಾ - ಪಾಕ್‌ ಹಾಗೂ ಚೀನಾ ಒಂದು

ಈ ಹಿಂದೆ ಪಾಕ್‌ ಹಾಗೂ ಚೀನಾ ಮಾತ್ರ ಒಂದಾಗಿದ್ದವು. ಇದೀಗ ಬಾಂಗ್ಲಾ ಸಹ ಕೈಜೋಡಿಸಿರುವುದು ತಲೆನೋವಿಗೆ ಕಾರಣವಾಗಿದೆ. ಒಂದು ಪಕ್ಷ ಪಾಕ್‌ನ ಬೇಕಾದರೂ ನಂಬಿಬಿಡಬಹುದು. ಆದರೆ, ಚೀನಾ ನಮಗೆ ಎಂದೆಂದಿಗೂ ತಲೆನೋವು ಕೊಡುವ ರಾಷ್ಟ್ರ ಎಂದು ಮೊದಲಿನಿಂದಲೂ ಮಾತಿದೆ. ಇದೀಗ ಈ ಎಲ್ಲಾ ರಾಷ್ಟ್ರಗಳು ಕೈಜೋಡಿಸುತ್ತಿದ್ದು, ಭಾರತ ಇದಕ್ಕೆ ಯಾವ ರೀತಿ ರಿಯಾಕ್ಟ್‌ ಮಾಡಲಿದೆ ಎನ್ನುವ ಕುತೂಹಲ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+