ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಕೊರೊನಾ 3ನೇ ಅಲೆ ನಿಯಂತ್ರಣದಲ್ಲಿ: 1 ಕೋಟಿ ಮಂದಿಗೆ ಲಸಿಕೆ

|
Google Oneindia Kannada News

ಇಸ್ಲಾಮಾಬಾದ್, ಜೂನ್ 09: ಪಾಕಿಸ್ತಾನದಲ್ಲಿ ಮೂರನೇ ಅಲೆ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ 10 ಮಿಲಿಯನ್ ಕೊರೊನಾ ಲಸಿಕೆ ನೀಡಲಾಗಿದೆ, ಮೂರನೇ ಅಲೆಯ ನಿಯಂತ್ರಣದಲ್ಲಿ ಯಶಸ್ಸು ಕಂಡಿದ್ದೇವೆ ಎಂದಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೇವಲ 1,118 ಹೊಸ ಪ್ರಕರಣಗಳು ಪತ್ತೆಯಾಗಿವೆ.ಇದರೊಂದಿಗೆ ಸೋಂಕಿತರ ಸಂಖ್ಯೆ 936,131ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳ ಸಚಿವಾಲಯ ವರದಿ ಮಾಡಿದೆ.

ಚೀನಾ ಸಹಕಾರದಲ್ಲಿ 'ಪಾಕ್‌ವಾಕ್' ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದ ಪಾಕಿಸ್ತಾನಚೀನಾ ಸಹಕಾರದಲ್ಲಿ 'ಪಾಕ್‌ವಾಕ್' ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದ ಪಾಕಿಸ್ತಾನ

ಕಳೆದ 24 ಗಂಟೆಗಳಲ್ಲಿ ಕನಿಷ್ಠ 77 ರೋಗಿಗಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 21,453ಕ್ಕೆ ತಲುಪಿದೆ. ಇಲ್ಲಿಯವರೆಗೆ 869,691 ಜನರು ಚೇತರಿಸಿಕೊಂಡಿದ್ದಾರೆ. ಸಕ್ರಿಯ ರೋಗಿಗಳ ಸಂಖ್ಯೆ 44,987 ರಷ್ಟಿದ್ದು ಸಕಾರಾತ್ಮಕ ದರ 2.55ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

 Pakistan Administers 10 Million Anti- Coronavirus Vaccinations

ಮುಂಚೂಣಿಯ ಆರೋಗ್ಯ ಕಾರ್ಯಕರ್ತರೊಂದಿಗೆ ಫೆಬ್ರವರಿ 2ರಂದು ಪಾಕಿಸ್ತಾನ ತನ್ನ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಆರಂಭಿಸಿತ್ತು. ನಂತರ 18 ವರ್ಷ ಮತ್ತು ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಪ್ರಕ್ರಿಯೆ ಕ್ರಮೇಣ ಹೆಚ್ಚಾಯಿತು. ಎಂದರು.

ಪಾಕಿಸ್ತಾನ ಕೊರೊನಾ ಮೂರನೇ ಅಲೆಗೆ ಸಾಕ್ಷಿಯಾಗಿದೆ. ದೇಶಾದ್ಯಂತ ಕೊರೋನಾವೈರಸ್ ಸೋಂಕಿನ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು ಎಲ್ಲಾ ವಯೋಮಾನದವರ ಸಾವಿಗೆ ಕಾರಣವಾಗಿದೆ.

ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸುತ್ತಿರುವ ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್(ಎನ್‌ಸಿಒಸಿ) ಮುಖ್ಯಸ್ಥ, ಯೋಜನಾ ಸಚಿವ ಅಸಾದ್ ಉಮರ್ 10 ಮಿಲಿಯನ್ ಡೋಸ್ ಲಸಿಕೆ ನೀಡುವಲ್ಲಿ ಯಶಸ್ಸು ಸಾಧಿಸಿರುವುದಾಗಿ ಘೋಷಿಸಿದರು.

ಅಲ್ಲದೆ 70 ಮಿಲಿಯನ್ ನಾಗರಿಕರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ 70 ಮಿಲಿಯನ್ ಜನರಿಗೆ ಲಸಿಕೆ ನೀಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ.

English summary
Pakistan has completed administering 10 million (one crore) anti-coronavirus vaccinations on Wednesday and claimed to have successfully contained the third wave of the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X