• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಉಗ್ರರ ದಾಳಿಗೆ ನೂರಾರು ಮಕ್ಕಳು ಬಲಿ

By Kiran B Hegde
|

ಪೇಶಾವರ, ಡಿ. 16: ಒಸಾಮಾ ಬಿನ್ ಲಾಡನೆ ನಂತರ ಕಸುವು ಕಳೆದುಕೊಂಡು ಹೆಚ್ಚು ಕಡಿಮೆ ಮರೆಗೆ ಸರಿದಿದ್ದ ಅಲ್ ಖೈದಾ ಹಾಗೂ ತಾಲಿಬಾನ್ ತಮ್ಮ ಪಾಶವೀ ಕೃತ್ಯ ತೋರಿಸಿಲು ಚಿಕ್ಕ ಮಕ್ಕಳನ್ನು ಗುರಿ ಮಾಡಿವೆ.

ಸೈನಿಕರನ್ನು ನೇರವಾಗಿ ಎದುರಿಸಲಾಗದ ತೆಹ್ರೀಕ್ ಇ ತಾಲಿಬಾನ್ ಪಾತಕಿಗಳು ಮಂಗಳವಾರ ಪಾಕಿಸ್ತಾನದ ಪೇಶಾವರದ ವರ್ಸಾಕ್ ರಸ್ತೆಯಲ್ಲಿರುವ ಆರ್ಮಿ ಪಬ್ಲಿಕ್ ಶಾಲೆಗೆ ಮಂಗಳವಾರ ನುಗ್ಗಿ ನೂರಾರು ಮಕ್ಕಳು, ಶಿಕ್ಷಕರನ್ನು ಸಾಲಾಗಿ ನಿಲ್ಲಿಸಿ ಗುಂಡಿನ ಮಳೆಗರೆದಿದ್ದಾರೆ.

ಇಲ್ಲಿಯವರೆಗೆ ಬಂದ ಮಾಹಿತಿಯ ಪ್ರಕಾರ ವಿದ್ಯಾರ್ಥಿಗಳು, ಶಿಕ್ಷಕಿ ಹಾಗೂ ಸೇನಾ ಸಿಬ್ಬಂದಿ ಸೇರಿ 130 ಮಂದಿ ಬಲಿಯಾಗಿದ್ದಾರೆ. ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಗುಂಡಿ ಮಳೆಗರೆದಿದ್ದಲ್ಲದೆ, ಶಿಕ್ಷಕಿಯನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. [ವಾಘಾ ಗಡಿಯಲ್ಲಿ ಉಗ್ರರ ದಾಳಿ, ಮೋದಿ ಖಂಡನೆ]

ಶಾಲೆಯಲ್ಲಿರುವ ಸುಮಾರು 1,500 ವಿದ್ಯಾರ್ಥಿಗಳು ಹಾಗೂ 70 ಶಿಕ್ಷಕರು ಹಿಡಿತದಲ್ಲಿಟ್ಟುಕೊಂಡಿದ್ದ ಉಗ್ರರನ್ನು ಕೊನೆಗೂ ಪಾಕ್ ಭದ್ರತಾ ಪಡೆಗಳು ಹತ್ಯೆಗೈದಿವೆ.

ಉಗ್ರರು ಶಾಲೆ ಮೇಲೆ ದಾಳಿ ನಡೆಸುವ ಮೊದಲು ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ನಂತರ ಒಳನುಗ್ಗಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳನ್ನು ಹಿಡಿತಕ್ಕೆ ತೆಗೆದುಕೊಂಡರು. [ಸಿಡ್ನಿಯಲ್ಲಿ ಉಗ್ರರ ದಾಳಿ]

ಗಂಭೀರವಾಗಿ ಗಾಯಗೊಂಡಿರುವ 40 ವಿದ್ಯಾರ್ಥಿಗಳನ್ನು ಸಮೀಪದ ಲೇಡಿ ರೀಡಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ರಕ್ಷಣೆಗೆ ನುಗ್ಗಿರುವ ರಕ್ಷಣಾ ಪಡೆಗಳು ನಾಲ್ವರು ವಿದ್ಯಾರ್ಥಿಗಳನ್ನು ರಕ್ಷಿಸಿವೆ.

ರಕ್ಷಣಾ ಕಾರ್ಯ : ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಕಮಾಂಡೋಗಳು ಹಾಗೂ ರಕ್ಷಣಾ ಪಡೆಗಳು ಮಕ್ಕಳ ರಕ್ಷಣೆಗೆ ಶಕ್ತಿಮೀರಿ ಯತ್ನಿಸುತ್ತಿವೆ. ಶಾಲೆ ಕಟ್ಟಡದ ಮೇಲೆ ಸೈನ್ಯದ ಹೆಲಿಕಾಪ್ಟರ್ ಹಾರಾಡುತ್ತಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.

"ನಾವು ಪರೀಕ್ಷೆ ಬರೆಯುತ್ತಿದ್ದಾಗ ಕೋಣೆಗೆ ಬಂದ ಪ್ರಾಂಶುಪಾಲರು ತಕ್ಷಣ ಮಕ್ಕಳನ್ನು ಖಾಲಿ ಮಾಡಿಸಬೇಕೆಂದು ಶಿಕ್ಷಕರಿಗೆ ಸೂಚಿಸಿದರು. ಆಗ ನಮಗೆ ಸೈನಿಕರು ಬರುತ್ತಿರುವುದು ಕಾಣಿಸಿತು" ಎಂದು ತಪ್ಪಿಸಿಕೊಂಡು ಬಂದಿರುವ ಬಾಲಕನೋರ್ವ ಹೇಳಿದ್ದಾನೆ. [ಮೆಹದಿ ಬಿಡುಗಡೆ ಮಾಡಿ: ಐಎಸ್ಐಎಸ್ ಎಚ್ಚರಿಕೆ]

"ತಪ್ಪಿಸಿಕೊಂಡ ಲ್ಯಾಬ್ ಅಸಿಸ್ಟಂಟ್ ಉದಯ್ ಮಾತನಾಡಿ, ನಾವು ಸುಮಾರು 1 ಗಂಟೆಗಳ ಕಾಲ ಅಡಗಿ ಕುಳಿತಿದ್ದೆವು. ಭಯೋತ್ಪಾದಕರು 6-7 ಸಂಖ್ಯೆಯಲ್ಲಿದ್ದರು. ಅವರ ಕೈಯಲ್ಲಿ ಭಾರೀ ಗಾತ್ರದ ರೈಫಲ್‌ಗಳಿದ್ದವು" ಎಂದು ತಿಳಿಸಿದ್ದಾರೆ.

ಹೊಣೆ ಹೊತ್ತ ತಾಲಿಬಾನ್ : ಶಾಲೆ ಮೇಲಿನ ದಾಳಿಯ ಹೊಣೆಯನ್ನು ಪಾಕಿಸ್ತಾನದ ತೆಹ್ರೀಕ್ ಇ ತಾಲಿಬಾನ್ ಹೊತ್ತುಕೊಂಡಿದೆ. ದಾಳಿ ನಡೆಸಿರುವ ಆರು ಭಯೋತ್ಪಾದಕರು ಆತ್ಮಾಹುತಿ ದಳದವರು ಎಂದು ತಾಲಿಬಾನ್ ಹೇಳಿದೆ.

ದಾಳಿಕೋರರಲ್ಲಿ ಓರ್ವ ಶಾಲೆಯ ಸಭಾಂಗಣದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಆಗ ಓರ್ವ ಶಿಕ್ಷಕ ಹಾಗೂ ಓರ್ವ ಸೈನಿಕ ಸಾವನ್ನಪ್ಪಿದ್ದು, 40 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್, "ಒಬ್ಬ ದಾಳಿಕೋರನನ್ನೂ ಹೊರಹೋಗಲು ಬಿಡುವುದಿಲ್ಲ" ಎಂದಿದ್ದಾರೆ.

ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ : ಒಮ್ಮೆಲೇ 40 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿರುವ ಕಾರಣ ಅಲ್ಲಿನ ಬೆಡ್ ಖಾಲಿಯಾಗಿವೆ. ಉಳಿದವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿ... ಮಧ್ಯಾಹ್ನ

5.45 : ಪೇಶಾವರದಲ್ಲಿ ಬುಧವಾರ ಸರ್ವಪಕ್ಷ ಸಭೆ ಕರೆದ ಪ್ರಧಾನಿ ಷರೀಫ್

5.30 : ಇದು ಜಗತ್ತು ಕಂಡ ಕರಾಳ ದಿನ ಎಂದ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ

5.15 : ತನ್ನನ್ನು ಸ್ಫೋಟಿಸಿಕೊಂಡು ಸಾವನ್ನಪ್ಪಿದ 6ನೇ ಉಗ್ರ. ಅಂತಿಮ ಕಾರ್ಯಾಚರಣೆಗೆ ಸಿದ್ಧವಾದ ಪಾಕ್ ಸೈನ್ಯ

5.05 : ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ

5.00 : ಸಾವಿನ ಸಂಖ್ಯೆ 130ಕ್ಕೆ ಏರಿಕೆ. 5ನೇ ಉಗ್ರನ ಹತ್ಯೆ

4.45 : ವಜಿರಿಸ್ತಾನದಲ್ಲಿ ಕಾರ್ಯಾಚರಣೆ ಮುಂದುವರಿಸುವುದಾಗಿ ಘೋಷಣೆ

4.50 : ಪೇಶಾವರ ತಲುಪಿದ ಪ್ರಧಾನಿ ನವಾಜ್ ಷರೀಫ್. ದೇಶಾದ್ಯಂತ ಮೂರು ದಿನ ಶೋಕಾಚರಣೆ ಘೋಷಿಸಿದ ಷರೀಫ್.

4.45 : ನಾಲ್ಕನೇ ಉಗ್ರನ ಹತ್ಯೆ. ಕಾರ್ಯಾಚರಣೆ ಮುಂದುವರಿಕೆ

4.40 : 19ನೇ ಬಾಂಬ್ ಸ್ಫೋಟ, ಹೆಚ್ಚಿದ ಗುಂಡಿನ ಮೊರೆತ

4.33 : "ಇಂದು ಮಾನವ ಜನಾಂಗ ಎದುರಿಸಿದ ಅತ್ಯಂತ ಕರಾಳ ದಿನ. ಕೊಲೆಯಾದವರೆಲ್ಲ ನಮ್ಮ ಮಕ್ಕಳು" - ನೊಬೆಲ್ ವಿಜೇತ ಭಾರತೀಯ ಕೈಲಾಶ್ ಸತ್ಯಾರ್ಥಿ ಹೇಳಿಕೆ

4.30 : ಶಾಲೆಯೊಳಗಿಂದ 5 ಗುಂಡುಗಳು ಸಿಡಿದ ಶಬ್ದ

4.15 : ಮಕ್ಕಳ ಮೇಲೆ ಉಗ್ರರ ದಾಳಿಯನ್ನು ಖಂಡಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ. ಇದೊಂದು ಮೂರ್ಖತನದ, ಪ್ರತಿಕ್ರಿಯೆ ನೀಡಲಾಗದಂತಹ ಕ್ರೌರ್ಯಕ್ಕೆ ನೂರಾರು ಮಕ್ಕಳು ಬಲಿಯಾಗಿದ್ದಾರೆ ಎಂದ ಮೋದಿ.

4.10 : ಮಾಧ್ಯಮ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, "ನಾವು ಬಲಿಯಾದ ಮಕ್ಕಳ ಪಾಲಕರ ಪರ ನಿಲ್ಲುತ್ತೇವೆ" ಎಂದರು.

4.05 : "ಈ ದಾಳಿ ಕುರಿತು ಏನು ಹೇಳಬೇಕೆಂದು ತಿಳಿಯುತ್ತಿಲ್ಲ" ಎಂದ ಎಂಇಎ ವಕ್ತಾರ ಸೈಯದ್ ಅಕ್ಬರುದ್ದೀನ್.

4.00 : ಸಾವಿನ ಸಂಖ್ಯೆ 126ಕ್ಕೆ

3.40 : ಗಾಯಗೊಂಡವರಿಗೆ ರಕ್ತ ನೀಡಲು ಸಿಎಂಎಚ್ ಆಸ್ಪತ್ರೆಗೆ ತೆರಳಿದ 85 ಮಕ್ಕಳು

3.35 : ಶಾಲೆಯೊಳಗಿಂದ ಮತ್ತೆರಡು ಸ್ಫೋಟದ ಶಬ್ದ

3.30 : ಶಾಲೆ ಮೇಲಿನ ದಾಳಿ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಹೈ ಅಲರ್ಟ್ ಘೋಷಣೆ

3.25 : ಪ್ರವಾಸ ರದ್ದುಪಡಿಸಿ ಪೇಶಾವರಕ್ಕೆ ಹೊರಟ ಪಾಕಿಸ್ತಾನ ಸೇನಾ ಮುಖ್ಯಸ್ಥ ರಹೀಲ್ ಷರೀಫ್

3.20 : ಪೇಶಾವರಕ್ಕೆ ಹೊರಟ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್

3.15 : ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಹತ್ಯೆಗೈದ ಉಗ್ರರು 18 ರಿಂದ 24 ವರ್ಷ ವಯಸ್ಸಿನವರೆಂಬುದು ಪತ್ತೆ

3.10 : ಬಿಬಿಸಿಗೆ ಪ್ರತಿಕ್ರಿಯೆ ನೀಡಿದ ತಾಲಿಬಾನ್ ವಕ್ತಾರ "ಉತ್ತರ ವಜಿರಿಸ್ತಾನ್ ಮತ್ತು ಖೈಬರ್ ಪ್ರದೇಶಗಳಲ್ಲಿ ನಡೆಯುತ್ತಿರುವ ದಾಳಿಗೆ ಇದು ಪ್ರತಿಕ್ರಿಯೆ" ಎಂದ

3.05 : ಪೇಶಾವರಕ್ಕೆ ತೆರಳಲು ತೀರ್ಮಾನಿಸಿದ ಪಾಕ್ ಪ್ರಧಾನಿ ನವಾಜ್ ಷರೀಫ್. ಒಬ್ಬ ಉಗ್ರರನ್ನೂ ಜೀವಂತ ಬಿಡುವುದಿಲ್ಲ ಎಂದು ಭರವಸೆ ನೀಡಿದ ಷರೀಫ್

3.00 : ಉಗ್ರರ ದಾಳಿಯಲ್ಲಿ 100ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದ ಖೈಬರ್ ಪಕ್ತುಂಖ್ವಾ ಮುಖ್ಯಮಂತ್ರಿ ಪರ್ವೇಜ್ ಖಟಕ್

2.45 : ಸಾವಿನ ಸಂಖ್ಯೆ 26ಕ್ಕೇರಿಕೆ, ಇವರಲ್ಲಿ 24 ಮಕ್ಕಳು. ಸಮಾ ಟಿವಿ ವರದಿ

2.35 : ಇಬ್ಬರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ

2.30 : ದಾಳಿಕೋರರು ಅರೆಬಿಕ್ ಮಾತನಾಡುತ್ತಿದ್ದಾರೆ : ಸಾಕ್ಷಿಯ ಹೇಳಿಕೆ

2.15 : ಮೂವರು ಆತ್ಮಾಹುತಿ ದಾಳಿಕೋರರ ಹತ್ಯೆ

2.00 : ಶಾಲೆಗೆ ಬಂದ 25ಕ್ಕೂ ಹೆಚ್ಚು ಆಂಬುಲೆನ್ಸ್

1.45 : ಮಕ್ಕಳ ಕಾಲು, ಕೈಗೆ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ ಉಗ್ರರು

1.30 : ಪಾಕಿಸ್ತಾನ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರಿಗೆ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಸೂಚಿಸಿದ ಪ್ರಧಾನಿ ಷರೀಫ್

1.10 : ಶಾಲೆ ಕಟ್ಟಡದ ಮೇಲೆ ಹಾರಲಾರಂಭಿಸಿದ ಎರಡು ಹೆಲಿಕ್ಯಾಪ್ಟರ್. ಶಾಲೆ ಸುತ್ತ ಭದ್ರತಾ ಪಡೆಗಳ ಜಮಾವಣೆ.

ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆ ಎಂದ ಪಾಕ್ ಸೈನ್ಯ.

ಒಬ್ಬ ಉಗ್ರರನ್ನೂ ಜೀವಸಹಿತ ಬಿಡುವುದಿಲ್ಲ ಎಂದ ಪಾಕ್ ಪ್ರಧಾನಿ ನವಾಜ್ ಷರೀಫ್.

ಗಾಯಗೊಂಡ ಮಕ್ಕಳನ್ನು ದಾಖಲಿಸಿರುವ ಲೇಡಿ ರೀಡಿಂಗ್ ಆಸ್ಪತ್ರೆ

ಮೃತ ಮಕ್ಕಳ ಆತ್ಮಕ್ಕೆ ಶಾಂತಿ ಕೋರಿದ ಭಾರತದ ಪ್ರಧಾನಿ ನರೇಂದ್ರ ಮೋದಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A group of heavily-armed terrorists on Tuesday targeted an Army Public school in Peshawar of Pakistan. Paksitan's Tehreek-e-Taliban has claimed the responsibility behind the terror attack at the Peshawar Army school. The six terrorists are said to be suicide bombers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more