ಭಾರತದಲ್ಲಿ ಅಣ್ವಸ್ತ್ರ ಚಟುವಟಿಕೆಗೆ ರಹಸ್ಯ ನಗರ: ಪಾಕ್ ಆರೋಪ

Posted By:
Subscribe to Oneindia Kannada

ಇಸ್ಲಾಮಾಬಾದ್, ಫೆಬ್ರವರಿ 10: ಭಾರತವು ರಹಸ್ಯವಾಗಿ ಅಣ್ವಸ್ತ್ರ ನಗರವೊಂದನ್ನು ನಿರ್ಮಿಸುತ್ತಿದೆ ಎಂದು ಪಾಕಿಸ್ತಾನ ಶುಕ್ರವಾರ ಹೇಳಿದೆ. ಥರ್ಮೋ ನ್ಯೂಕ್ಲಿಯರ್ ಶಸ್ತ್ರಾಸ್ತ್ರ ಉತ್ಪಾದನೆ, ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿ ಮತ್ತು ರಹಸ್ಯವಾಗಿ ಅಣ್ವಸ್ತ್ರ ತಯಾರಿಗೆ ಬೇಕಾದ ವಸ್ತುಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಭಾರತ, 'ಇದು ಪಾಕಿಸ್ತಾನದ ಕಪೋಲ ಕಲ್ಪಿತ ಭ್ರಮೆ' ಎಂದಿದ್ದು, ಭಯೋತ್ಪಾದನೆ ಬೆಂಬಲಿಸುತ್ತಿರುವ ಪಾಕಿಸ್ತಾನದ ಮೇಲಿನ ವಿಶ್ವದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಹೀಗಳೆದಿದೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರಾದ ನಫೀಸ್ ಝಕಾರಿಯಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ.[ಹಫೀಜ್ ನಿಂದ ಹೊಸ ಸಂಘಟನೆ ತೆಹ್ರೀಕ್ ಆಜಾದಿ ಜಮ್ಮು ಅಂಡ್ ಕಾಶ್ಮೀರ್]

Pak Says 'Secret Nuclear City In India'

ಇಡೀ ಜಗತ್ತಿಗೆ ಇರುವ ನಿಯಮಗಳನ್ನು ಭಾರತ ಅನುಸರಿಸುತ್ತದೆ. ಇದು ಪಾಕಿಸ್ತಾನದ ಭ್ರಮೆ ಎಂದು ಭಾರತ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ದೇಶವು ಎನ್ ಎಸ್ ಜಿಯಲ್ಲಿ ಸದಸ್ಯತ್ವ ಪಡೆಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನವು ಇಂಥ ಆರೋಪ ಮಾಡಿದೆ. ಆದರೆ ಪಾಕಿಸ್ತಾನದ ಬಗ್ಗೆ ಅಣ್ವಸ್ತ್ರ ವಿಚಾರದಲ್ಲಿ ಹಲವು ಅಪಸವ್ಯವಾಗಿದೆ.['ಭಯೋತ್ಪಾದನೆ ಪ್ರಾಯೋಜಿತ ದೇಶ ಪಾಕಿಸ್ತಾನ' ಮಸೂದೆ ಮಂಡಿಸಿದ ರಾಜೀವ್ ಚಂದ್ರಶೇಖರ್]

ಅ ದೇಶದ ಅಣ್ವಸ್ತ್ರದ ಪಿತಾಮಹ ಎನಿಸಿಕೊಂಡ ವ್ಯಕ್ತಿಯೇ ತನ್ನ ಅಣ್ವಸ್ತ್ರ ರಹಸ್ಯಗಳನ್ನು ಉತ್ತರ ಕೊರಿಯಾ ಹಾಗೂ ಇರಾನ್ ಗೆ ಹಸ್ತಾಂತರಿಸಿದ ಇತಿಹಾಸ ಕಣ್ಣೆದುರಿಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistan today said India is building a "secret nuclear city" to produce thermonuclear weapons as well as developing intercontinental missiles and secretly stockpiling nuclear material.
Please Wait while comments are loading...