ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದರೂ ತಕ್ಕ ಪ್ರತ್ಯುತ್ತರ: ಪಾಕ್

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 14: ಭಾರತದ ಕಡೆಯಿಂದ ಇನ್ನು ಒಂದೇ ಒಂದು ಸರ್ಜಿಕಲ್ ಸ್ಟ್ರೈಕ್ ಆದರೂ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ಹತ್ತು ಸರ್ಜಿಕಲ್ ಸ್ಟ್ರೈಕ್ಸ್ ಮಾಡುವುದಾಗಿ ಪಾಕಿಸ್ತಾನ ಶನಿವಾರ ಹೇಳಿದೆ. ಈ ಹಿಂದೆ ಭಾರತದಿಂದ ಸರ್ಜಿಕಲ್ ಸ್ಟ್ರೈಕ್ ಆಗೇ ಇಲ್ಲ ಎಂದು ವಾದ ಮಾಡುತ್ತಾ ಬರುತ್ತಿದ್ದ ಪಾಕ್, ಹೀಗೆ ಹೇಳುವ ಮೂಲಕ ಅಂಥದ್ದೊಂದು ದಾಳಿ ನಡೆದಿರುವುದನ್ನು ಒಪ್ಪಿಕೊಂಡಂತಾಗಿದೆ.

ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ನಡೆಯುತ್ತಿರುವ ಮಾತಿನ ಹೊಸ ಸಮರ ಇದಾಗಿದೆ. ಪಾಕಿಸ್ತಾನ ಮಿಲಿಟರಿಯ ಇಂಟರ್ ಸರ್ವೀಸ್ ಸಾರ್ವಜನಿಕ ಸೇವೆಯ ವಕ್ತಾರ ಮೇಜರ್ ಜನರಲ್ ಅಸೀಫ್ ಘಫೂರ್ ಲಂಡನ್ ನಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಜತೆಗೆ ಅಲ್ಲಿಗೆ ಭೇಟಿ ನೀಡಿದ್ದಾರೆ.

ಚಿತ್ರ ಸಹಿತ ಮಾಹಿತಿ: ಹೀಗೆ ನಡೆದಿತ್ತು 'ಸರ್ಜಿಕಲ್ ಸ್ಟ್ರೈಕ್‌'ಗೆ ತಯಾರಿಚಿತ್ರ ಸಹಿತ ಮಾಹಿತಿ: ಹೀಗೆ ನಡೆದಿತ್ತು 'ಸರ್ಜಿಕಲ್ ಸ್ಟ್ರೈಕ್‌'ಗೆ ತಯಾರಿ

ಪಾಕಿಸ್ತಾನದೊಳಗೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಧೈರ್ಯವನ್ನೇನಾದರೂ ಭಾರತ ಮಾಡಿದರೆ ಅದಕ್ಕೆ ಪ್ರತಿಯಾಗಿ ಹತ್ತು ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇವೆ ಎಂದು ಹೇಳಿರುವುದಾಗಿ ರೇಡಿಯೋ ಪಾಕಿಸ್ತಾನ್ ವರದಿ ಮಾಡಿದೆ. ಇನ್ಯಾವುದೇ ದುಸ್ಸಾಹಸಕ್ಕೆ ಕೈ ಹಾಕಿದರೆ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ಮನಸಿನಲ್ಲಿ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ ಎಂದು ಘಪೂರ್ ಹೇಳಿದ್ದಾರೆ.

ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಪಾರದರ್ಶಕ ಚುನಾವಣೆ

ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಪಾರದರ್ಶಕ ಚುನಾವಣೆ

ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ನ ಐವತ್ತು ಬಿಲಿಯನ್ ಅಮೆರಿಕನ್ ಡಾಲರ್ ಯೋಜನೆಗೆ ಸೇನೆಯು ಕಸ್ಟೋಡಿಯನ್. ಈ ಮೆಗಾ ಯೋಜನೆಯಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿರುವ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದನ್ನು ಸೇನೆ ಬಯಸುತ್ತದೆ. ಕಳೆದ ಜುಲೈನಲ್ಲಿ ನಡೆದ ಚುನಾವಣೆ ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಪಾರದರ್ಶಕ ಚುನಾವಣೆ ಎಂದು ಹೇಳಿಕೊಂಡಿದ್ದಾರೆ.

ಮಾಧ್ಯಮಗಳಿಗೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ

ಮಾಧ್ಯಮಗಳಿಗೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ

ಚುನಾವಣೆ ಅಕ್ರಮ ನಡೆದಿರುವ ಬಗ್ಗೆ ಯಾರೇ ಆಗಲಿ ಸಾಕ್ಷ್ಯಾಧಾರ ಒದಗಿಸಿದರೆ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂಬ ವರದಿಯನ್ನು ನಿರಾಕರಿಸಿದ ಅವರು, ದೇಶದಲ್ಲಿ ಸಂಪೂರ್ಣವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಹೇಳಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ನ ಆ ರೋಚಕ ದಿನಕ್ಕೆ ಇಂದಿಗೆ ಎರಡು ವರುಷ...ಸರ್ಜಿಕಲ್ ಸ್ಟ್ರೈಕ್ ನ ಆ ರೋಚಕ ದಿನಕ್ಕೆ ಇಂದಿಗೆ ಎರಡು ವರುಷ...

ಒಳ್ಳೆಯ ವಿಚಾರಗಳನ್ನೂ ಜಗತ್ತಿನ ಮುಂದೆ ತೋರಿಸಬೇಕು

ಒಳ್ಳೆಯ ವಿಚಾರಗಳನ್ನೂ ಜಗತ್ತಿನ ಮುಂದೆ ತೋರಿಸಬೇಕು

ಪಾಕಿಸ್ತಾನದಲ್ಲಿ ಒಳ್ಳೆ ಬೆಳವಣಿಗೆಗಳು ಸಹ ಆಗುತ್ತಿವೆ. ಆದರೆ ಅಂತರರಾಷ್ಟ್ರೀಯ ಮಾಧ್ಯಮಗಳು ಕೆಟ್ಟದನ್ನಷ್ಟೇ ಹೆಚ್ಚು ಪ್ರಚಾರ ಮಾಡುತ್ತಾ, ಒಳ್ಳೆಯದರ ನಿರ್ಲಕ್ಷ್ಯ ಮಾಡುತ್ತಿವೆ. ಆದ್ದರಿಂದ ಪಾಕಿಸ್ತಾನದಲ್ಲಿನ ಒಳ್ಳೆ ವಿಚಾರಗಳ ಬಗ್ಗೆಯೂ ಜಗತ್ತಿಗೆ ತಿಳಿಸಬೇಕು ಎಂದು ಘಫೂರ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಸರ್ಜಿಕಲ್ ಸ್ಟ್ರೈಕ್: ಮತ್ತೆರಡು ರೋಚಕ ವಿಡಿಯೋ ಬಿಡುಗಡೆಸರ್ಜಿಕಲ್ ಸ್ಟ್ರೈಕ್: ಮತ್ತೆರಡು ರೋಚಕ ವಿಡಿಯೋ ಬಿಡುಗಡೆ

2016ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್

2016ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್

2016ರ ಸೆಪ್ಟೆಂಬರ್ ನಲ್ಲಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಉಗ್ರಗಾಮಿಗಳ ನೆಲೆಗಳನ್ನು ಧ್ವಂಸಗೊಳಿಸಿ, ಭಯೋತ್ಪಾದಕರನ್ನು ಕೊಂದು ಹಾಕಿತ್ತು. ಆದರೆ ಇಂಥದ್ದೊಂದು ದಾಳಿಯೇ ನಡೆದಿಲ್ಲ ಎಂದು ಪಾಕಿಸ್ತಾನ ಹೇಳಿಕೊಂಡು ಬಂದಿತ್ತು. ಇನ್ನು ಇತ್ತೀಚೆಗೆ ಸರ್ಜಿಕಲ್ ಸ್ಟ್ರೈಕ್ಸ್ ಗೆ ಸಂಬಂಧಿಸಿದಂತೆ ವಿಡಿಯೋಗಳನ್ನು ಸಹ ಬಿಡುಗಡೆ ಮಾಡಿತ್ತು.

ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆ ಮಲ-ಮೂತ್ರ ಬಳಕೆ, ಲೆ.ಜನರಲ್ ರೋಚಕ ಮಾಹಿತಿ

English summary
Pakistan on Saturday warned of "10 surgical strikes" against India in response to a single such attack, in the latest war of words between the two estranged nuclear-armed neighbours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X