Get Updates
Get notified of breaking news, exclusive insights, and must-see stories!

ಜಗತ್ತಿಗೇ ಗೊತ್ತಿರುವ ಸತ್ಯವನ್ನು ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ

ನಮ್ಮ ನೆಲದಲ್ಲಿ ಯಾವುದೇ ಉಗ್ರ ಸಂಘಟನೆಗಳು ಬೀಡುಬಿಟ್ಟಿಲ್ಲ ಎಂದು ಹಸಿಹಸಿ ಸುಳ್ಳು ಹೇಳುತ್ತಿದ್ದ ಪಾಕಿಸ್ತಾನ, ಎರಡು ಪ್ರಮುಖ ಉಗ್ರ ಸಂಘಟನೆಗಳು ಪಾಕಿಸ್ತಾನದಿಂದಲೇ ಕಾರ್ಯನಿರ್ವಹಿಸುತ್ತಿದೆ ಎಂದು ಒಪ್ಪಿಕೊಂಡಿದೆ.

ಲಾಹೋರ್, ಸೆ 6: ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲಿ, ಭಯೋತ್ಪಾದಕರ ತವರೂರು ಪಾಕಿಸ್ತಾನ ಕೊನೆಗೂ ಸತ್ಯವನ್ನು ಒಪ್ಪಿಕೊಂಡಿದೆ. ಬ್ರಿಕ್ಸ್ ಸಮ್ಮೇಳನದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ ಆಗುತ್ತಿದ್ದಂತೆಯೇ ವಿಶ್ವಕ್ಕೇ ಗೊತ್ತಿರುವ ಸತ್ಯವನ್ನು ಪಾಕ್ ವಿದೇಶಾಂಗ ಸಚಿವರು ಬಾಯ್ಬಿಟ್ಟಿರುವುದು ವಿಶೇಷ.

ನಮ್ಮ ನೆಲದಲ್ಲಿ ಯಾವುದೇ ಉಗ್ರ ಸಂಘಟನೆಗಳು ಬೀಡುಬಿಟ್ಟಿಲ್ಲ ಎಂದು ಹಸಿಹಸಿ ಸುಳ್ಳು ಹೇಳುತ್ತಿದ್ದ ಪಾಕಿಸ್ತಾನ, ಎರಡು ಪ್ರಮುಖ ಉಗ್ರ ಸಂಘಟನೆಗಳು ಪಾಕಿಸ್ತಾನದಿಂದಲೇ ಕಾರ್ಯನಿರ್ವಹಿಸುತ್ತಿದೆ ಎಂದು ಒಪ್ಪಿಕೊಂಡಿದೆ.

Pakistan admits that terror outfits Lashkar, Jaish are operating from its soil

ಜಗತ್ತಿಗೆ ಕಂಟಕವಾಗಿರುವ ಎಲ್ಇಟಿ (ಲಷ್ಕರ್ -ಇ-ತೊಯ್ಬಾ) ಮತ್ತು ಜೆಇಎಂ (ಜೈಶ್-ಇ-ಮೊಹಮ್ಮದ್) ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ತವರೂರು ಎಂದು ಅಲ್ಲಿನ ವಿದೇಶಾಂಗ ಖಾತೆಯ ಸಚಿವ ಕ್ವಾಜಾ ಆಸಿಫ್ ಹೇಳಿದ್ದಾರೆಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಮಿತ್ರ ರಾಷ್ಟ್ರ ಚೀನಾ ಪ್ರತೀ ಬಾರಿ ನಮ್ಮನ್ನು ಪರೀಕ್ಷಿಸಬಾರದು, ಇದರ ಬದಲು ಎರಡು ಉಗ್ರ ಸಂಘಟನೆಗಳ ಚಟುವಟಿಕೆಯ ಮೇಲೆ ಕೆಲವೊಂದು ನಿರ್ಬಂಧ ಹೇರಲಿ ಎಂದು ಕ್ವಾಜಾ ಆಸಿಫ್, ಚೀನಾಗೆ ಮನವಿ ಮಾಡಿದ್ದಾರೆ.

ಮಸೂದ್ ಅಜರ್ ನನ್ನು 'ಜಾಗತಿಕ ಉಗ್ರ; ಎಂದು ಒಪ್ಪಿಕೊಳ್ಳಲು ಈ ಹಿಂದೆ ಹಲವು ಬಾರಿ ತಯಾರಿಲ್ಲದ ಚೀನಾ, ಕ್ಸಿಯಾಮೆನ್ ನಲ್ಲಿ (ಸೆ 4) ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತದ ಪರವಾಗಿ ನಿಂತಿತ್ತು.

ಉಗ್ರರ ವಿರುದ್ದ ಒಗ್ಗಟ್ಟಿನ ಹೋರಾಟ ಅನಿವಾರ್ಯ ಎನ್ನುವುದನ್ನೂ ಕೊನೆಗೂ ಅರಿತ ಚೀನಾ, ತಾಲಿಬಾನ್, ಅಲ್ ಖೈದಾ, ಎಲ್ಇಟಿ, ಜೆಇಎಂ ಮುಂತಾದ ಉಗ್ರ ಸಂಘಟನೆಗಳ ವಿರುದ್ದ ಒಗ್ಗಟ್ಟಿನ ಹೋರಾಟದ ಘೋಷಣಾ ಪತ್ರಕ್ಕೆ ಬ್ರಿಕ್ಸ್ ಸಮ್ಮೇಳನದಲ್ಲಿ ಸಹಿಹಾಕಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+