ಅಫ್ಘಾನಿಸ್ತಾನದಲ್ಲಿ ಆಹಾರವಿಲ್ಲದೆ ನರಳುತ್ತಿರುವವರು ಎಷ್ಟು ಮಂದಿ ಗೊತ್ತೇ?

ಕಾಬುಲ್, ಆಗಸ್ಟ್ 20: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸುಳಿಗೆ ಸಿಲುಕಿ ಕೋಟ್ಯಂತರ ಮಂದಿ ನರಳುತ್ತಿದ್ದಾರೆ.

ವಿಶ್ವಸಂಸ್ಥೆ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ತಾಲಿಬಾನಿಗಳ ಆಗಮನದಿಂದ ಸಾವಿರಾರು ಜನರು ನಿರಾಶ್ರಿತರಾಗುತ್ತಿದ್ದಾರೆ. ಅವರಿಗೆ ಆಹಾರ ಒದಗಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಮೇ ತಿಂಗಳಲ್ಲಿ 40 ಲಕ್ಷ ಜನರ ಹಸಿವನ್ನು ನೀಗಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ 90 ಲಕ್ಷ ಜನರಿಗೆ ಆಹಾರ ಕಲ್ಪಿಸಬೇಕಾದ ಸಮಸ್ಯೆ ಸೇರಿದಂತೆ ಇನ್ನೂ ಹಲವು ಸವಾಲುಗಳಿವೆ. ಈ ಹಸಿವಿನ ಬಿಕ್ಕಟು ನಿವಾರಿಸಲು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ತುರ್ತಾಗಿ 20 ಕೋಟಿ ಅಮೆರಿಕನ್‌ ಡಾಲರ್‌ ಅಗತ್ಯವಿದೆ ಎಂದು ಮೇರಿ ವಿವರಿಸಿದರು.

Recommended Video

      Afghanistanದಲ್ಲಿ ಈಗ ಪರಿಸ್ಥಿತಿ ಹೇಗಿದೆ , Taliban ಸುಧಾರಿಕೊಳ್ತಾ? | Oneindia Kannada
      Over 40 Percent Of Crops Lost: Food Agency Warns Of Hunger In Afghan Conflict

      ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಳ್ಳುವ ಮೂಲಕ ಉದ್ಭವವಾಗಿರುವ ಮಾನವೀಯ ಬಿಕ್ಕಟ್ಟಿನಿಂದಾಗಿ 1.4 ಕೋಟಿ ಮಂದಿಗೆ ತಿನ್ನಲು ಆಹಾರ ಕೂಡ ಲಭಿಸುತ್ತಿಲ್ಲ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

      ಕೊರೊನಾ ಸಾಂಕ್ರಾಮಿಕದಿಂದ ಬಳಲುತ್ತಿರುವ ಆ ದೇಶದಲ್ಲಿ ಈ ಹೊಸ ಬಿಕ್ಕಟ್ಟು, ಗಂಭೀರ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವಿಶ್ವ ಸಂಸ್ಥೆ ಆಹಾರ ಕಾರ್ಯಕ್ರಮಗಳ ಆಫ್ಘನ್ ನಿರ್ದೇಶಕಿ ಮೇರಿ ಎಲ್ಲೆನ್, ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಶೇ. 40 ಕ್ಕಿಂತಲೂ ಹೆಚ್ಚು ಬೆಳೆ ವಿಫಲವಾಗಿದ್ದು, ಸಂಗ್ರಹಿಸಿದ ಆಹಾರ ಧಾನ್ಯಗಳು ನಾಶವಾಗಿವೆ ಎಂದು ಅವರು ಹೇಳಿದ್ದಾರೆ.

      ಅಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

      ಈ ಕುರಿತಂತೆ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ NORC ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್‌ನ ಸಮೀಕ್ಷೆಯ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಅವರ ವಿದೇಶಿ ನೀತಿ ಮತ್ತು ರಾಷ್ಟ್ರೀಯ ಭದ್ರತೆಯ ನಿರ್ವಹಣೆಗೆ ಸಂಬಂಧಿಸಿದಂತೆ ಅಮೆರಿಕವು ಹೆಚ್ಚು ಭಿನ್ನಾಭಿಪ್ರಾಯ ಹೊಂದಿದ್ದರೂ ಸಹ, ಅಫ್ಘಾನಿಸ್ತಾನದಲ್ಲಿನ ಯುದ್ಧವು ಉಪಯುಕ್ತವಾಗಿದೆಯೆಂದು ಅಮೆರಿಕದ ಬಹುಪಾಲು ಜನರು ಅನುಮಾನಿಸಿದ್ದಾರೆ.

      ಅಲ್ಲದೆ ಆಫ್ಘಾನಿಸ್ತಾನದಲ್ಲಿನ ಯುದ್ಧದಲ್ಲಿ ಅಮೆರಿಕ ಸೇನೆ ಪಾಲ್ಗೊಳ್ಳುವಿಕೆ ಅರ್ಥಹೀನ ಅಥವಾ ಮೌಲ್ಯ ರಹಿತವಾದದ್ದು ಎಂದು 2/3ರಷ್ಟು ಅಮೆರಿಕನ್ನರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

      ಏತನ್ಮಧ್ಯೆ, ಬೈಡನ್ ಅವರ ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ವಹಣೆಯನ್ನು ಶೇಕಡಾ 47 ರಷ್ಟು ಜನರು ಅನುಮೋದಿಸಿದರೆ, ರಾಷ್ಟ್ರೀಯ ಭದ್ರತೆಗಾಗಿ ಬೈಡನ್ ಅವರನ್ನು ಶೇ.52ರಷ್ಟು ಜನರು ಅನುಮೋದಿಸಿದ್ದಾರೆ. ಆಗಸ್ಟ್ 12 ರಿಂದ 16 ರ ಅವಧಿಯಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ.

      ಅಫ್ಘಾನಿಸ್ತಾನದಲ್ಲಿ ಎರಡು ದಶಕಗಳ ಯುದ್ಧವು ತಾಲಿಬಾನ್ ಅಧಿಕಾರಕ್ಕೆ ಮರಳುವುದರೊಂದಿಗೆ ಮತ್ತು ಕಾಬೂಲ್ ರಾಜಧಾನಿಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಅಂತ್ಯವಾಗಿದ್ದು, ಸೇನೆಯನ್ನು ಹಿಂಪಡೆಯುವ ಅಮೆರಿಕ ಅಧ್ಯಕ್ಷರ ನಿರ್ಧಾರದ ಬಳಿಕ ತಾಲಿಬಾನಿಗರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದಾರೆ.

      ಇದೇ ಕಾರಣಕ್ಕೆ ಅಮೆರಿಕದಲ್ಲಿ ಬೈಡನ್ ದ್ವಿಪಕ್ಷೀಯ ಖಂಡನೆಯನ್ನು ಎದುರಿಸುತ್ತಿದ್ದು, ಅದಾಗ್ಯ ಆಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ ನಿರ್ಧಾರಕ್ಕೆ ಅಮೆರಿಕ ಅಧ್ಯಕ್ಷರು ಬದ್ಧರಾಗಿದ್ದಾರೆ. ಯುದ್ಧವನ್ನು ಅನಿರ್ದಿಷ್ಟವಾಗಿ ಮುಂದುವರಿಸಲು ಅನುಮತಿಸುವುದಿಲ್ಲ. ತಮ್ಮ ಈ ನಿರ್ಧಾರಕ್ಕೆ ಅಮೆರಿಕನ್ನರು ಬೆಂಬಲ ನೀಡುತ್ತಾರೆ ಎಂದು ಬೈಡನ್ ಹೇಳಿದ್ದಾರೆ.

      ಅಫ್ಘಾನಿಸ್ತಾನದಲ್ಲಿನ ಅವ್ಯವಸ್ಥೆಗಳಿಂದಾಗಿ ಅಮೆರಿಕನ್ನರು ಜೀವ ಕಳೆದುಕೊಳ್ಳುವುದು ಸೂಕ್ತವಲ್ಲ. ಸತತ 20 ವರ್ಷಗಳ ಬಳಿಕ ಆಫ್ಘಾನಿಸ್ತಾನ ತನ್ನ ಅವ್ಯವಸ್ಥೆ ಸರಿಪಡಿಸಿಕೊಳ್ಳಲು ಅನ್ಯಮಾರ್ಗವನ್ನು ಯೋಚಿಸಬೇಕು ಎಂದು ಅಮೆರಿಕದ ಪ್ರಜೆ ಸೆಬಾಸ್ಟಿಯನ್ ಗಾರ್ಸಿಯಾ ಹೇಳಿದ್ದಾರೆ.ರಾಜಧಾನಿ ಕಾಬುಲ್ ವಶಪಡಿಸಿಕೊಂಡ ಬೆನ್ನಲ್ಲೇ ತಾಲಿಬಾನ್ ಬಂಡುಕೋರರು ಇದೀಗ ಅಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಗೆ ನುಗ್ಗಿದ್ದಾರೆ.

      ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸ ಎಲೆ ಮೀರುತ್ತಿದ್ದು, ಆಫ್ಘಾನಿಸ್ತಾನದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ದೇಶದ ಸಂಪೂರ್ಣ ಆಡಳಿತವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ.

      ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ರಾಜಧಾನಿ ಕಾಬುಲ್ ಪ್ರಮುಖ ಕಟ್ಟಡಗಳಗಿ ನುಗ್ಗಿರುವ ತಾಲಿಬಾನಿಗಳು ಇದೀಗ ಆಫ್ಘನ್ ಕ್ರಿಕೆಟ್ ಮಂಡಳಿ ಕಚೇರಿಗೆ ನುಗ್ಗಿದ್ದಾರೆ. ಅಚ್ಚರಿ ಎಂದರೆ ತಾಲಿಬಾನಿಗಳೊಂದಿಗೆ ಆಫ್ಘಾನಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ಮಜಾರಿ ಕೂಡ ಸಾಥ್ ನೀಡಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+