ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ: 3 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿಕೆ

|
Google Oneindia Kannada News

ಮಾಸ್ಕೋ, ಸೆಪ್ಟೆಂಬರ್ 28: ರಷ್ಯಾದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿ ಮಾಡಿವೆ.

ರಷ್ಯಾದಲ್ಲಿ 3 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರ ಮೇಲೆ ಕೊರೊನಾ ಲಸಿಕೆ ಪ್ರಯೋಗ ನಡೆಸಲಾಗಿದೆ. ಯಾರಿಗೂ ಕೂಡ ಯಾವುದೇ ಅಡ್ಡ ಪರಿಣಾಮ ಗೋಚರಿಸಿಲ್ಲ. ಲಸಿಕೆ ಕುರಿತು ಭರವಸೆ ಮೂಡಿದೆ ಎಂದು ಮಾಸ್ಕೋ ಮೇಯರ್ ಸೊಬ್ಯಾನಿನ್ ತಿಳಿಸಿದ್ದಾರೆ. ಆಗಸ್ಟ್ 11ರಂದು ರಷ್ಯಾದಲ್ಲಿ ವಿಶ್ವದ ಮೊದಲ ಕೊರೊನಾ ಲಸಿಕೆ ಸ್ಪುಟ್ನಿಕ್ v ನೋಂದಣಿ ಮಾಡಲಾಗಿತ್ತು.

ರಷ್ಯಾದಲ್ಲಿ ಅಕ್ಟೋಬರ್‌ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿರಷ್ಯಾದಲ್ಲಿ ಅಕ್ಟೋಬರ್‌ 15ರ ವೇಳೆಗೆ ಎರಡನೇ ಕೊರೊನಾ ಲಸಿಕೆ ನೋಂದಣಿ

'ನೋಡಿ ನಾನು ಕೂಡ ಕೊರೊನಾ ಲಸಿಕೆಯ ಪ್ರಯೋಗಕ್ಕೆ ಒಳಗಾಗಿದ್ದೆ, ತಿಂಗಳುಗಳೇ ಕಳೆದಿದೆ ನನಗೇನಾದರೂ ಆಗಿದೆಯೇ ಹೇಳಿ, ಆರೋಗ್ಯವಾಗಿಲ್ಲವೇ?' ಎಂದು ಮೇಯರ್ ತಿಳಿಸಿದ್ದಾರೆ.

Over 3,000 Vaccinated Against Coronavirus In Moscow

ಲಸಿಕೆ ಪ್ರಯೋಗಕ್ಕೆ ಒಳಗಾಗಲು 60 ಸಾವಿರ ಸ್ವಯಂ ಸೇವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ.ಇಡೀ ವಿಶ್ವದಲ್ಲೇ ಮೊದಲ ಕೊರೊನಾ ಲಸಿಕೆ ನೋಂದಣಿಯನ್ನು ರಷ್ಯಾ ಮಾಡಿತ್ತು. ಅದಕ್ಕೆ ಸ್ಪುಟ್ನಿಕ್ v ಎನ್ನುವ ನಾಮಕರಣವನ್ನೂ ಕೂಡ ಮಾಡಿತ್ತು.

ಆದರೆ ಮೂರನೇ ಹಂತದ ಲಸಿಕೆ ಪ್ರಯೋಗಕ್ಕೂ ಮುನ್ನವೇ ಲಸಿಕೆಯನ್ನು ನೋಂದಣಿ ಮಾಡಿರುವುದು ತಪ್ಪು, ಲಸಿಕೆಯ ಬಗ್ಗೆ ಭರವಸೆ ಹೊಂದಲು ಸಾಧ್ಯವಿಲ್ಲ ಎಂದು ಸಾಕಷ್ಟು ರಾಷ್ಟ್ರಗಳು ಅಪಸ್ವರ ಎತ್ತಿದ್ದವು.

Recommended Video

India China ಬಾರ್ಡರ್ ನಲ್ಲಿ ಏನೇನೆಲ್ಲ ಬೆಳವಣಿಗೆ | Oneindia Kannada

ಕೆಲವೇ ವಾರಗಳಲ್ಲಿ ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ಸ್ಪುಟ್ನಿಕ್ V ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯಲಿದೆ.ಹಾಗೆಯೇ ಅಕ್ಟೋಬರ್ 15 ರವೇಳೆಗೆ ಮತ್ತೊಂದು ಲಸಿಕೆಯನ್ನು ನೋಂದಣಿ ಮಾಡುತ್ತಿರುವುದು ಸಂತಸಕ್ಕೆ ಕಾರಣವಾಗಿದೆ.

English summary
More than 3,000 people in Moscow have been vaccinated against the novel coronavirus, the media has reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X