ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಪ್ಪೀನ್ಸ್ ನಲ್ಲಿ ಭೂಕುಸಿತಕ್ಕೆ 180ಕ್ಕೂ ಹೆಚ್ಚು ಬಲಿ

By Sachhidananda Acharya
|
Google Oneindia Kannada News

ಮನಿಲಾ, ಡಿಸೆಂಬರ್ 24: ಫಿಲಿಪ್ಪೀನ್ಸ್ ನಲ್ಲಿ ನಡೆದ ಭೀಕರ ಭೂ ಕುಸಿತಕ್ಕೆ 180ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ದಕ್ಷಿಣ ಫಿಲಿಪ್ಪೀನ್ಸ್ ನ ಮಿಂಡಾನಾವೋ ದ್ವೀಪದಲ್ಲಿ ಚಂಡ ಮಾರುತದಿಂದ ಫ್ಲಾಶ್ ಫ್ಲಡ್ ಮತ್ತು ಭೂ ಕುಸಿತ ಉಂಟಾಗಿದ್ದು ಹಲವಾರು ಜನರು ನಾಪತ್ತೆಯಾಗಿದ್ದಾರೆ.

ಕ್ರಿಸ್ ಮಸ್ ಗೂ ಕೆಲವೇ ದಿನ ಮೊದಲು ಈ ಘಟನೆ ನಡೆದಿದ್ದು ಫಿಲಿಪ್ಪೀನ್ಸ್ ಜನರನ್ನು ದುಃಖಕ್ಕೆ ತಳ್ಳಿದೆ. ಈ ಘಟನೆ ನಮ್ಮ ನಿಯಂತ್ರಣ ಮೀರಿದೆ ಎಂದು ಸ್ಥಳೀಯ ಅಧಿಕಾರಿ ಹೇಳಿದ್ದಾರೆ. ಎಲ್ಲಾ ಸಂಪರ್ಕ ವ್ಯವಸ್ಥೆ ನೆಲಸಮವಾಗಿದ್ದು ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.

ಫಿಲಿಪ್ಪೀನ್ಸ್‌ನಲ್ಲಿ ಸಂತ್ರಸ್ತರಿಗೆ ನಾವೆಲ್ಲರೂ ನೆರವಾಗುವಾಫಿಲಿಪ್ಪೀನ್ಸ್‌ನಲ್ಲಿ ಸಂತ್ರಸ್ತರಿಗೆ ನಾವೆಲ್ಲರೂ ನೆರವಾಗುವಾ

 Over 180 killed in Philippines landslides

ಇಲ್ಲಿನ ಸುಲು ಸಮುದ್ರದ ಮೇಲೆ ಚಂಡ ಮಾರುತ ಸೃಷ್ಟಿಯಾಗಿದ್ದು ದೇಶದಲ್ಲಿ ನರಕ ಯಾತನೆ ಸೃಷ್ಟಿಸಿದೆ. ತುರ್ತು ಕಾರ್ಯಾಚರಣೆ ಪಡೆ, ಸೈನಿಕರು, ಪೊಲೀಸರು ಮತ್ತು ಸ್ವಯಂ ಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಣ್ಣಿನಡಿಯಲ್ಲಿ ಸಿಲುಕಿರುವವರಿಗಾಗಿ ಹುಡುಕಾಡುತ್ತಿದ್ದಾರೆ.

ಕುಸಿದಿರುವ ಮಣ್ಣನ್ನು ತೆರವು ಮಾಡಬೇಕಾಗಿದ್ದು ಸಂವಹನ ಮತ್ತು ಸಂಪರ್ಕ ವ್ಯವಸ್ಥೆಯನ್ನು ಮರು ಸ್ಥಾಪಿಸಬೇಕಾಗಿದೆ.

English summary
Over 180 people have been killed and scores of others have been missing in southern Philippines after Tropical Storm Tembin triggered mud slides and flash floods on the country's second largest island, Mindanao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X