ಲ್ಯಾಡೆನ್ ಪಾಕಿಸ್ತಾನದ ಹೀರೋ: ಪರ್ವೇಜ್ ಮುಷರಫ್
ಇಸ್ಲಾಮಾಬಾದ್, ನವೆಂಬರ್ 14: "ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ ಆಲ್ ಖೈದಾ ಉಗ್ರ ಸಂಘಟನೆಯ ಸ್ಥಾಪಕ ಒಸಾಮಾ ಬಿನ್ ಲ್ಯಾಡೆನ್ ಪಾಕಿಸ್ತಾನದ ಹೀರೋ" ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.
ಚಾಲೆಲ್ ವೊಂದಕ್ಕೆ ಸಂದರ್ಶನ ನೀಡುತ್ತಿದ್ದ ಮುಷರಫ್, "ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತೀಯ ಸೇನೆಯ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿತ್ತು" ಎಂದು ಸಹ ಇದೇ ಸಂದರ್ಭದಲ್ಲಿ ಅವರು ಒಪ್ಪಿಕೊಂಡರು.
1979 ರಲ್ಲಿ ನಾವೇ ಪಾಕಿಸ್ತಾನದ ಲಾಭಕ್ಕಾಗಿ ಅಫಘಾನಿಸ್ತಾನದಲ್ಲಿ ಧಾರ್ಮಿಕ ಉಗ್ರಗಾಮಿತ್ವವನ್ನು ಪರಿಚಯಿಸಿದವು. ಇಡೀ ಜಗತ್ತಿನಿಂದ ಮಿಜಾಹಿದ್ದೀನ್ ಗಳನ್ನು ಕರೆತಂದು ಅವರಿಗೆ ಪಾಕಿಸ್ತಾನದಲ್ಲಿ ಶಸ್ತಾಸ್ತ್ರ ಮತ್ತು ತರಬೇತಿಯನ್ನು ನೀಡಿದೆವು. ಅವರೆಲ್ಲರೂ ನಮ್ಮ ಹೀರೋಗಳು ಎಂದು ಪರ್ವೇಜ್ ಮುಷರಫ್ ನೇರಾನೇರವಾಗಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಎಂದಿಗೂ ಪ್ರಯತ್ನಿಸುತ್ತಿಲ್ಲ ಎಂಬ ಪಾಕಿಸ್ತಾನದ ಮಾತಿಗೆ ಮುಷರಫ್ ಮಾತು ತದ್ವಿರುದ್ಧವಾಗಿದ್ದು, ಕಣಿವೆ ರಾಜ್ಯದಲ್ಲಿ ಶಾಂತಿ ಕದಡಲು ಪಾಕಿಸ್ತಾನವೇ ಉಗ್ರರಿಗೆ ತರಬೇತಿ ನೀಡುತ್ತಿದೆ ಎಂಬ ಮಾತು ಸತ್ಯವಾಗಿದೆ.












Click it and Unblock the Notifications