ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿದ ದ್ವೀಪರಾಷ್ಟ್ರ ಶ್ರೀಲಂಕಾಗೆ ಬೆಳಕು ನೀಡಿದ್ದೇ ಭಾರತ
ನವದೆಹಲಿ, ಜೂನ್ 9: ಭಾರತವನ್ನು ಹೊರತುಪಡಿಸಿದಂತೆ ಬೇರೆ ಯಾವ ರಾಷ್ಟ್ರವೂ ಇಂಧನಕ್ಕಾಗಿ ತಮಗೆ ಆರ್ಥಿಕ ನೆರವು ನೀಡುತ್ತಿಲ್ಲ ಎಂದು ಶ್ರೀಲಂಕಾದ ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪರಾಷ್ಟ್ರಕ್ಕೆ ತ್ವರಿತವಾಗಿ ಸಹಾಯ ಮಾಡುವಂತಹ ಕಾರ್ಯಕ್ರಮವನ್ನು ರೂಪಿಸುವಂತೆ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಅನ್ನು ಒತ್ತಾಯಿಸಿದ್ದಾರೆ.
ಶ್ರೀಲಂಕಾ 1948 ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ವಾಷಿಂಗ್ಟನ್ ಮೂಲದ ಜಾಗತಿಕ ಸಾಲದಾತನ ಸಹಾಯವನ್ನು ಪಡೆಯಲು ನಿರ್ಧರಿಸಿದೆ. ಶ್ರೀಲಂಕಾ ಮತ್ತು IMF ನಡುವಿನ ಮಾತುಕತೆ ಏಪ್ರಿಲ್ 18 ರಂದು ಪ್ರಾರಂಭವಾಗಿದೆ.
ಏಪ್ರಿಲ್ 12 ರಂದು ಸರ್ಕಾರವು ಎಲ್ಲಾ ಬಾಹ್ಯ ಸಾಲ ಮರುಪಾವತಿಯನ್ನು ಸ್ಥಗಿತಗೊಳಿಸಿದ ನಂತರ ಶ್ರೀಲಂಕಾ ತನ್ನ ವಿದೇಶಿ ಸಾಲಗಳನ್ನು ಪುನರ್ ರಚಿಸಲು ಈಗಾಗಲೇ ಕ್ರಮಗಳನ್ನು ಪ್ರಾರಂಭಿಸಿದೆ ಎಂದು ತಿಳಿದು ಬಂದಿದೆ.

ದೇಶದ ಸಂಸತ್ ಉದ್ದೇಶಿಸಿ ವಿಕ್ರಮಸಿಂಘೆ ಭಾಷಣ
ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ, ವಿಕ್ರಮಸಿಂಘೆ ಅವರು ಮಂಗಳವಾರ ಜಾರ್ಜೀವಾ ಅವರೊಂದಿಗೆ ದೂರವಾಣಿ ಸಂಭಾಷಣೆಯನ್ನು ನಡೆಸಿದರು. ಈ ಸಮಯದಲ್ಲಿ ಶ್ರೀಲಂಕಾದ ಸೇತುವೆಯ ಹಣಕಾಸು ಅಗತ್ಯದ ಬಗ್ಗೆ ಅವರಿಗೆ ತಿಳಿಸಲಾಯಿತು. "ನಮಗೆ ಆರ್ಥಿಕತೆಯ ಸೇತುವೆ ಬೇಕಾಗಿರುವುದರಿಂದ ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾನು ಅವರನ್ನು ವಿನಂತಿಸಿದ್ದೇನೆ. ನಮಗೆ ಪರಿಚಯವಿಲ್ಲದ ನಮ್ಮ ವ್ಯವಸ್ಥೆ ಮತ್ತು ಸಾಲ ಪುನರ್ ರಚನಾ ಯೋಜನೆ ಸೇರಿದಂತೆ ಎರಡರ ಬಗ್ಗೆಯೂ ಚರ್ಚಿಸಲಾಗಿದೆ, "ಎಂದು ವಿಕ್ರಮಸಿಂಘೆ ಹೇಳಿದ್ದಾರೆ.
"ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಮತ್ತು ಸೆಪ್ಟೆಂಬರ್‌ನೊಳಗೆ ಇತ್ತೀಚಿನ ಹಣಕಾಸನ್ನು ಪಡೆಯಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ," ಎಂದು ಪ್ರಧಾನಮಂತ್ರಿ ವಿಕ್ರಮಸಿಂಘೆ ಹೇಳಿದ್ದಾರೆ.

ದಯವಿಟ್ಟು ಕತ್ತಲು ಆವರಿಸುವಂತೆ ಮಾಡಬೇಡಿ ಎಂದ ಪ್ರಧಾನಿ
ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ (ಸಿಇಬಿ)ಯ ಇಂಜಿನಿಯರ್‌ಗಳ ಯೋಜಿತ ಮುಷ್ಕರವನ್ನು ಉಲ್ಲೇಖಿಸಿದ ವಿಕ್ರಮಸಿಂಘೆ, "ದಯವಿಟ್ಟು ಕತ್ತಲನ್ನು ಉಂಟು ಮಾಡಬೇಡಿ, ನೀವು ಫಲಕಗಳನ್ನು ಹಿಡಿದು ಮುಷ್ಕರ ಮಾಡಬಹುದು," ಎಂದು ಹೇಳಿದರು. "ನೀವು ಹಾಗೆ ಮಾಡಿದರೆ, ಭಾರತದಿಂದ ಸಹಾಯ ಕೇಳಲು ನನ್ನನ್ನು ಕೇಳಬೇಡಿ. ಯಾವ ದೇಶವೂ ನಮಗೆ ಇಂಧನ ಮತ್ತು ಕಲ್ಲಿದ್ದಲಿಗೆ ಹಣ ನೀಡುತ್ತಿಲ್ಲ. ಹಾಗೆ ಹಣ ನೀಡುತ್ತಿರುವುದು ಭಾರತ ಮಾತ್ರ. ನಮ್ಮ ಭಾರತೀಯ ಕ್ರೆಡಿಟ್ ಲೈನ್ ಈಗ ಅದರ ಅಂತ್ಯದ ಸಮೀಪದಲ್ಲಿದೆ. ಅದನ್ನು ವಿಸ್ತರಿಸುವ ಬಗ್ಗೆ ಮಾತನಾಡುತ್ತಿದ್ದೇವೆ,'' ಎಂದು ಹೇಳಿದರು.

ಭಾರತದ ಸಹಾಯಕ್ಕೂ ಮುನ್ನ ನಮಗೆ ನಮ್ಮ ಸಹಾಯ ಮುಖ್ಯ
ಶ್ರೀಲಂಕಾಕ್ಕೆ ಭಾರತದಿಂದ ನೆರವು ನೀಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ವಿಕ್ರಮಸಿಂಘೆ ಹೇಳಿದ್ದಾರೆ. "ಏಕೆಂದರೆ ಭಾರತದಲ್ಲಿ ಕೆಲವರು ನಮಗೆ ಏಕೆ ಸಹಾಯ ಮಾಡಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅವರು ನಮಗೆ ಸಹಾಯ ಮಾಡುವುದಕ್ಕೂ ಪೂರ್ವದಲ್ಲಿ, ನಮಗೆ ನಮ್ಮ ಸಹಾಯದ ಅಗತ್ಯವಿದೆ. ನಮಗೆ ನಾವು ಮೊದಲು ಸಹಾಯ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ ಎಂದು ಉಲ್ಲೇಖಿಸಿದರು.

ಸಿಇಬಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಷ್ಕರ
ಸಿಇಬಿ ಕಾಯ್ದೆಗೆ ತಿದ್ದುಪಡಿ ತರುವ ಸರ್ಕಾರದ ಯೋಜನೆಯನ್ನು ವಿರೋಧಿಸಿ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಿಇಬಿ ಎಂಜಿನಿಯರ್‌ಗಳು ಬುಧವಾರ ಘೋಷಿಸಿದ್ದು, ಈ ಕುರಿತು ಗುರುವಾರ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಿದರು. ಹೊಸ ಕಾಯಿದೆಯು ಖಾಸಗಿ ಮೂಲಗಳಿಂದ ವಿದ್ಯುತ್ ಖರೀದಿಯಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ಅನ್ನು ನಿಲ್ಲಿಸುತ್ತದೆ ಎಂದು CEB ಎಂಜಿನಿಯರ್‌ಗಳ ಒಕ್ಕೂಟಗಳು ಹೇಳುತ್ತವೆ. "ಈ ತಿದ್ದುಪಡಿಯನ್ನು ನಿಲ್ಲಿಸಲು ನಾವು ಕೈಗಾರಿಕಾ ಕ್ರಮವನ್ನು ಆಶ್ರಯಿಸುತ್ತೇವೆ" ಎಂದು ಸಿಇಬಿ ಎಂಜಿನಿಯರ್‌ಗಳ ಒಕ್ಕೂಟದ ರಂಜಿತ್ ಇಂಡುವಾರ ಹೇಳಿದ್ದಾರೆ.
ಇತ್ತ ಸಂಸತ್ತಿನಲ್ಲಿ ಅದೇ ವಿಷಯವನ್ನು ಪ್ರಸ್ತಾಪಿಸಿದ ಇಂಧನ ಸಚಿವ ಕಾಂಚನಾ ವಿಜೆಸ್ಕರ, ಹೊಸ ಕಾಯಿದೆಯು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯನ್ನು ತೊಡೆದುಹಾಕುವುದಿಲ್ಲ, ಆದರೆ ಸುಸ್ಥಿರ ಇಂಧನ ಪ್ರಾಧಿಕಾರದಿಂದ ಅನುಮೋದಿಸಲಾದ ಸುಸ್ಥಿರ ಇಂಧನ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದ ಮಾಹಿತಿ ನೀಡಿದ್ದಾರೆ.

ಸಂಕಷ್ಟದ ಸಮಯದಲ್ಲಿ ಶ್ರೀಲಂಕಾಗೆ ನೆರವಾಗಿದ್ದು ಭಾರತ
ಭಾರತವು ಶ್ರೀಲಂಕಾಕ್ಕೆ ಸಾವಿರಾರು ಟನ್‌ಗಳಷ್ಟು ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಬಿಕ್ಕಟ್ಟಿನ ಪೀಡಿತ ದೇಶಕ್ಕೆ ಸಹಾಯ ಮಾಡಿದೆ. ಆಹಾರ ಮತ್ತು ವೈದ್ಯಕೀಯ ಸರಬರಾಜುಗಳ ಹೊರತಾಗಿಯೂ ಸಾಲದ ಸುಳಿಯಲ್ಲಿ ಮುಳುಗಿರುವ ದ್ವೀಪ ರಾಷ್ಟ್ರದಲ್ಲಿ ತೀವ್ರವಾದ ಇಂಧನ ಕೊರತೆಯನ್ನು ನಿವಾರಿಸಲು ಭಾರತವು ಸಹಾಯ ಮಾಡಿದೆ ಎಂದು ಸ್ಮರಿಸಿಕೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ವಿದೇಶಿ ವಿನಿಮಯ ಮೀಸಲು ತೀವ್ರವಾಗಿ ಕುಸಿದ ನಂತರ ಆಮದುಗಳಿಗೆ ಪಾವತಿಸಲು ಹೆಣಗಾಡುವಂತ ಪರಿಸ್ಥಿತಿ ಸೃಷ್ಟಿಯಾಗಿತ್ತು. ನೆರೆಯ ರಾಷ್ಟ್ರದ ಇಂಧನವನ್ನು ಆಮದು ಮಾಡಿಕೊಳ್ಳಲು ಭಾರತವು ಕಳೆದ ತಿಂಗಳು ಶ್ರೀಲಂಕಾಕ್ಕೆ ಹೆಚ್ಚುವರಿ 500 ಮಿಲಿಯನ್ ಡಾಲರ್ ಸಾಲವನ್ನು ವಿಸ್ತರಿಸಿತು.
ಆರ್ಥಿಕ ಬಿಕ್ಕಟ್ಟು ಮತ್ತು ವಿದೇಶೀ ವಿನಿಮಯದ ಕೊರತೆಯೊಂದಿಗೆ ಅಲ್ಲಿ ಜನರು ಇಂಧನ, ಅಡುಗೆ ಅನಿಲ ಮತ್ತು ಅಗತ್ಯವಸ್ತುಗಳಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದರ ಮಧ್ಯೆ ಇಂಧನ ಆಮದುಗಳಿಗಾಗಿ 500 ಮಿಲಿಯನ್ ಡಾಲರ್ ಭಾರತೀಯ ಕ್ರೆಡಿಟ್ ಲೈನ್ ದ್ವೀಪ ರಾಷ್ಟ್ರಕ್ಕೆ ಜೀವಸೆಲೆಯನ್ನು ಒದಗಿಸಿದೆ.












Click it and Unblock the Notifications