ಯುರೋಪಿಗೂ ಲಗ್ಗೆ ಇಟ್ಟ ಕನ್ನಡದ ಏಕೈಕ ಆನ್ಲೈನ್ ರೇಡಿಯೋ!

ಕನ್ನಡದ ಮೊಟ್ಟ ಮೊದಲ ಹಾಗು ಏಕೈಕ ಆನ್ ಲೈನ್ ರೇಡಿಯೋ ಆಗಿರುವ 'ನಮ್ ರೇಡಿಯೋ' ಕಳೆದ 2016ನೇ ಇಸ್ವಿ ಫೆಬ್ರವರಿಯಿಂದ ಯಶಸ್ವಿಯಾಗಿ ಭಾರತ, ಯುಎಸ್ಎ ಹಾಗು ಗಲ್ಫ್ ಈ ಚಾನಲ್ ಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.

ವಿದೇಶಿ ಕನ್ನಡಿಗರ ಅಚ್ಚು ಮೆಚ್ಚಿನ 'ನಮ್ ರೇಡಿಯೋ' ಈಗ ಯುರೋಪ್ ನ ವಿವಿಧ ದೇಶಗಳಲ್ಲಿ ನೆಲೆಸಿರುವ ನಮ್ಮ ಕನ್ನಡ ಬಂಧುಗಳ ಒತ್ತಾಯದ ಮೇರೆಗೆ ಈಗ ನಾಲ್ಕನೆಯದಾಗಿ ಮತ್ತೊಂದು ಹೊಸ ಚಾನಲ್ 'ನಮ್ ರೇಡಿಯೋ' "ಯುರೋಪ್"ಅನ್ನು ಪ್ರಾರಂಭಿಸಿದೆ.

Online Kannada Radio channel Namma Radio Enters Europe

ಲಂಡನ್ನಿನಲ್ಲಿರುವ ಕನ್ನಡಿಗರ ಸಂಘಟನೆಯಾದ "ಕನ್ನಡಿಗರು ಯುಕೆ" ಆಚರಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಹೊಸ " EUROPE " ಚಾನಲ್ ನ್ನು "ಕನ್ನಡಿಗರು ಯುಕೆ" ಸಂಘಟನೆಯ ಅಧ್ಯಕ್ಷರಾದ ಪವನ್ ಮೈಸೂರುರವರು ಅವರು ನವೆಂಬರ್ 03ರಂದು ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ "ನಮ್ ರೇಡಿಯೋ"ದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಗಿರಿಧರರಾವ್ ಹವಲ್ದಾರ್, ಸಿಇಒ ಅವನಿಧರ ಹವಲ್ದಾರ್ ಹಾಗು ಜನರಲ್ ಮ್ಯಾನೇಜರ್ ಪೂಜಾ ಉಪೇಂದ್ರ ಹಾಜರಿದ್ದರು.

"ಕನ್ನಡಿಗರು ಯುಕೆ"ಪದಾಧಿಕಾರಿಗಳಾದ ಯೋಗೇಶ್ ಹಾಗು ಗಣಪತಿ ಭಟ್ ಮತ್ತಿತರರು "ನಮ್ ರೇಡಿಯೋ"ದ ಈ ಉಧ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಈ ವಿಷಯವನ್ನು ತಮ್ಮ ಜನಪ್ರಿಯ ಮಾಧ್ಯಮವಾದ ಟಿವಿ ಯಲ್ಲಿ ಪ್ರಸಾರ ಮಾಡುವುದಕ್ಕಾಗಿ/ಪತ್ರಿಕೆಯಲ್ಲಿ ಪ್ರಕಟಿಸುವುದಕ್ಕಾಗಿ ಈಗ ವೀಡಿಯೋ/ಫೋಟೋಗಳೊಡನೆ ನೀಡುತ್ತಾ ಕನ್ನಡ ಕಟ್ಟುವ, ಬೆಳೆಸುವ ಹಾಗು ಉಳಿಸುವ ಈ ಕೆಲಸಕ್ಕೆ ತಾವು ಸಹಕಾರ ನೀಡಬೇಕೆಂದು ಅವನಿಧರ ಹವಲ್ದಾರ್ ಕೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+