ನಿಮ್ಮ ಮಗಳಿಗೆ ವಿದೇಶಿ ವರನನ್ನು ಹುಡುಕುವ ಮುನ್ನ ಒಮ್ಮೆ ಯೋಚಿಸಿ!

ಬೆಂಗಳೂರು, ಫೆಬ್ರವರಿ 05: ಭಾರತದ ಬಹುತೇಕ ಪೋಷಕರಿಗೆ ಮಗಳಿಗೆ ವಿದೇಶಿ ವರನನ್ನು ಹುಡುಕುವ ಆಸೆ ಆದರೆ ಇದೀಗ ತಮ್ಮ ತಪ್ಪಿಗೆ ತಂದುಕೊಂಡ ವರನಿಂದಲೇ ಹೆಚ್ಚುಕಿರುಕುಳ ಉಂಟಾಗುತ್ತಿದೆ ಎಂಬ ಆಘಾತಕಾರಿ ಸುದ್ದಿ ಭಾರತೀಯ ಪೋಷಕರಿಗೆ ಬರಸಿಡಿಲಂತೆ ಎರಡಗಿದೆ.

ಎನ್ಆರ್ಐಗಳನ್ನು ಹುಡುಕಿಕೊಂಡು ಮದುವೆ ಮಾಡಿಕೊಂಡಿರುವ ಅನೇಕ ಗೃಹಣಿಯರು ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿ ಸಂಬಂಧಿಗಳಿಲ್ಲದೆ ಯಾರ ನೆರವು ದೊರೆಯದೆ ಪತಿಯಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೆ ಅತಿ ಹೆಚ್ಚು ತುತ್ತಾಗುತ್ತಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ವಿದೇಶಾಂಗ ವ್ಯವಹಾರಗಳ ಇಲಾಖೆ 2015ರ ಜನವರಿ ರಿಂದ 2017 ರ ನವೆಂಬರ್ 30 ರ ಅವಧಿಯಲ್ಲಿ 1068 ದೂರುಗಳನ್ನು ಈ ಸಂಬಂಧ ಸ್ವೀಕರಿಸಿದೆ. ಈ ವರೆಗೆ ಒಟ್ಟು 3328 ದೂರುಗಳು ಎನ್ ಆರ್ ಐ ಪತಿಯಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯರು ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ.

One NRI wife calls home for help every 8 hours

ಇದರಿಂದ ದಿನವೊಂದಕ್ಕೆ ಸರಾಸರಿ ಮೂರುಂತೆ ಪ್ರತಿ ಎಂಟು ತಾಸಿಗೆ ಒಂದು ಎನ್ ಅರ್ ಐ ಪತಿಯ ವಿರುದ್ಧ ದೂರು ದಾಖಲಾಗುತ್ತಿದೆ. ದೂರು ನೀಡಿರುವ ಬಹುತೇಕ ಎನ್ ಆರ್ ಐ ಪತ್ನಿಯರು ಪಂಜಾಬ್ ಆಂಧ್ರ ತೆಲಂಗಾಣಕ್ಕೆ ಸೇರಿದ್ದರೆ ನಂತರದ ಸ್ಥಾನದಲ್ಲಿ ಗುಜರಾತ್ ಗೆ ಸೇರಿದ ಪತ್ನಿಯರಾಗಿದ್ದಾರೆ.

ಈ ಕುರಿತು ವಕೀಲರು, ಸಾಮಾಜಿಕ ಹೋರಾಟಗಾರರು ಹಾಗೂ ವಿದೇಶದಲ್ಲಿ ನೆಲಸಿರುವ ಭಾರತೀಯರು ಈ ಮಹಿಳೆಯರ ರಕ್ಷಣೆಗಾಗಿ, ನೆರವಿಗಾಗಿ ಧಾವಿಸುತ್ತಿದ್ದಾರೆ. ದಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಕೋ-ಆಪರೇಷನ್ ಆಂಡ್ ಚೈಲ್ಡ್ ಡೆವಲಾಪ್ ಮೆಂಟ್ ನಡೆಸಿದ ಅಧ್ಯಯನದಲ್ಲಿ ಈ ರೀತಿಯ ನೆರವಿಗಾಗಿ ಎನ್ ಆರ್ ಐ ಪತ್ನಿಯರು ಕಿರುಕುಳವನ್ನು ಅನುಭವಿಸುತ್ತಿದ್ದಾರೆ ಎಂದು ಸಂಸ್ಥೆಯ ವರದಿಯಲ್ಲಿ ಕೆಲವರ್ಷಗಳ ಹಿಂದೆ ಬಹಿರಂಗವಾಗಿತ್ತು.

One NRI wife calls home for help every 8 hours

ದಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಕೋ -ಆಪರೇಷನ್ ಅಂಡ್ ಚೈಲ್ಡ್ ಡೆವಲಾಪ್ ಮೆಂಟ್ ಸಂಸ್ಥೆ ಕೆಲವು ವರ್ಷಗಳ ಹಿಂದೆಯೇ ನಡೆಸಿದ್ದ ಅಧ್ಯಯನದಲ್ಲಿ ಎನ್ಆರ್ಐ ಪತ್ನಿಯರು ಈ ರೀತಿಯ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಅಂಶ ಬಹಿರಂಗಗೊಂಡಿತ್ತು.

ವರದಕ್ಷಿಣೆ ಕಿರುಕುಳ ಪ್ರಕರಣಗಳು ಹೆಚ್ಚು ಆಂಧ್ರ ತೆಲಂಗಾಣ ಪತ್ನಿಯರಿಗೆ: ಅಮೇರಿಕಾದ ವಾಷಿಂಗ್ ಟನ್ ಅಲ್ಲಿ ಭಾರತದ ರಾಯಭಾರಿ ಕಚೇರಿಯಲ್ಲಿ 16 ವರ್ಷಗಳಿಂದ ಕೆಲಸ ಮಾಡುತ್ತಿರುವ ಆರತಿ ರಾವ್ ಅವರ ಪ್ರಕಾರ ಬಹುತೇಕ ಮಹಿಳೆಯರು ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಿಂದ ಎನ್ ಆರ್ ಐ ವರನನ್ನು ಮದುವೆಯಾದ ಮಹಿಳೆಯರು ಅತಿ ಹೆಚ್ಚು ವರದಕ್ಷಿಣೆ ಕಿರುಕುಳವನ್ನು ಅನುಭವಿಸುತ್ತಿದ್ದಾರೆ.

ಮದುವೆಯಾಗುವ ವರನು ಭಾರತಕ್ಕೆ ತೆರಳಿ ತಮ್ಮ ಪೋಷಕರ ನೋಡಿದ ಯುವತಿಯರನ್ನು ಮದುವೆಯಾಗುತ್ತಾರೆ ನಂತರ ಅಮೇರಿಕಕಕ್ಕೆ ಕರೆದುಕೊಂಡು ಬಂದು ವರದಕ್ಷಿಣೆಗೆ ಸಂಬಂಧಿಸಿದಂತೆ ಕಿರುಕುಳ ನೀಡುತ್ತಾರೆ ಎಂದು ಆರತಿ ರಾವ್ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಕರಣವೊಂದರಲ್ಲಿ ವಿದೇಶಾಂಗ ವ್ಯವಹಾರ ಇಲಾಖೆಗೆ ದಾಖಲಾಗಿರುವ ದೂರಿನಲ್ಲಿ ಶಾಜಿಯಾ(ಹೆಸರು ಬದಲಿಸಲಾಗಿದೆ) ಎಂಬ ಪತ್ನಿಯು ಪತಿಯ ಕಿರುಕುಗಳದಿಂದ ಬೇಸತ್ತಿದ್ದು, ಪತ್ನಿಯ ವೀಸಾ ಹಾಗೂ ದಾಖಲೆಯನ್ನು ಹರಿದುಹಾಕಿದ್ದಾರೆ. ಭಾರತಕ್ಕೆ ವಾಪಾಸ್ ಬಾರದಂತೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರು ದಾಖಲಾಗಿದೆ.

ಈ ಸಂಬಂಧ ಎನ್ ಆರ್ ಐ ಪತಿಯಿಂದ ಎನ್ ಆರ್ ಐ ಪತ್ನಿಯನ್ನು ರಕ್ಚಿಸುವ ಸಂಬಂಧ 2007ರಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ ಎಂಡಿಎಡಿ ಎಂಬ ದೂರು ನೀಡಲು ಆನ್ ಲೈನ್ ಪೋರ್ಟಲ್ ಆರಂಭಿಸಿದ್ದು ಈ ವೆಬ್ ಸೈಟ್ ಗೆ ದೂರುಗಳು ಹರಿದುಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+