• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೈಜರ್ ಲಸಿಕೆಯ ಒಂದೇ ಡೋಸ್ ಅತಿ ಪರಿಣಾಮಕಾರಿ; ಅಧ್ಯಯನ

|

ಇಸ್ರೇಲ್, ಫೆಬ್ರುವರಿ 16: ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದವರಲ್ಲಿ ಫೈಜರ್ ಬಯೋಂಟೆಕ್ ಕೊರೊನಾ ಲಸಿಕೆಯ ಒಂದೇ ಡೋಸ್ ಪ್ರತಿರೋಧಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿದೆ. ಕೊರೊನಾ ಲಸಿಕೆ ನಿರೀಕ್ಷೆಗಿಂತ ಉತ್ತಮ ಫಲಿತಾಂಶ ನೀಡಿದೆ ಎಂದು ಇಸ್ರೇಲ್‌ನಲ್ಲಿ ನಡೆಸಿದ ಅಧ್ಯಯನ ತಿಳಿಸಿದೆ.

ಕೊರೊನಾ ಸೋಂಕು ತಗುಲಿದ ಅವಧಿಯ ಹೊರತಾಗಿ ಕೊರೊನಾ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಒಂದೇ ಒಂದು ಡೋಸ್ ಪ್ರತಿರೋಧಕ ಶಕ್ತಿಯನ್ನು ಅಪಾರ ಪ್ರಮಾಣದಲ್ಲಿ ಹೆಚ್ಚಿಸಿದೆ ಎಂದು ತಿಳಿಸಿದೆ.

ಬೊಜ್ಜು ಹೊಂದಿರುವ ಕೊರೊನಾ ಸೋಂಕಿತರ ಮೇಲೆ ಲಸಿಕೆ ಪರಿಣಾಮ ಬೀರುವುದಿಲ್ಲ ನಿಜವೇ?

ಬಾರ್ ಇಲಾನ್ ವಿಶ್ವವಿದ್ಯಾಲಯ ಹಾಗೂ ಇಸ್ರೇಲ್‌ನ ಜಿವ್ ಮೆಡಿಕಲ್ ಸೆಂಟರ್ ಸಂಶೋಧಕರು ಈ ಅಧ್ಯಯನ ಕೈಗೊಂಡಿದ್ದು, ಈ ವಾದಕ್ಕೆ ಸಾಕ್ಷ್ಯ ದೊರೆತಿರುವುದಾಗಿ ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾಗಿದ್ದವರಲ್ಲಿ ಕೊರೊನಾ ಲಸಿಕೆ ಪರಿಣಾಮ ಹಾಗೂ ಪ್ರತಿಸ್ಪಂದನೆ ಕುರಿತು ಹಲವು ಅಧ್ಯಯನಗಳು ನಡೆದಿದ್ದು, ಇದರ ಬಗ್ಗೆ ಸ್ಪಷ್ಟನೆ ದೊರೆತಿಲ್ಲ. ಇಸ್ರೇಲ್ ನಲ್ಲಿ ಅಧ್ಯಯನ ನಡೆಸಿದ್ದು, ಯೂರೊಸರ್ವಿಲನ್ಸ್‌ನಲ್ಲಿ ಅಧ್ಯಯನ ಪ್ರಕಟಿತವಾಗಿದೆ. ಒಂದರಿಂದ ಹತ್ತು ತಿಂಗಳ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಹದಿನೇಳು ಮಂದಿಗೆ ಫೈಜರ್ ಲಸಿಕೆ ನೀಡಿ ಈ ಪ್ರಯೋಗಕ್ಕೆ ಒಳಪಡಿಸಲಾಗಿತ್ತು.

ಲಸಿಕೆ ನೀಡುವ ಮುನ್ನ ಹಾಗೂ ಲಸಿಕೆ ನೀಡಿದ ನಂತರ ಇವರ ದೇಹದಲ್ಲಿ ಪ್ರತಿರೋಧಕ ಶಕ್ತಿ ಪರೀಕ್ಷೆ ನಡೆಸಲಾಗಿದೆ. ಒಂದು ಡೋಸ್ ಲಸಿಕೆ ಪಡೆದ ನಂತರ ಪ್ರತಿಸ್ಪಂದನೆ ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದ ಎಲ್ಲರಲ್ಲೂ ಪ್ರತಿರೋಧಕ ಶಕ್ತಿ ಹೆಚ್ಚಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಈ ಅಧ್ಯಯನ ಹಲವು ದೇಶಗಳಿಗೆ ನೆರವಾಗಲಿದೆ. ಲಸಿಕೆ ನೀತಿ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಬಾರ್ ಇಲಾನ್ ವಿಶ್ವವಿದ್ಯಾಲಯದ ಪ್ರೊ. ಮೈಕಲ್ ಎಡೆಲ್ಸ್ಟೀನ್ ತಿಳಿಸಿದ್ದಾರೆ.

English summary
People previously infected with coronavirus respond very strongly to single dose of the Pfizer-BioNTech COVID-19 vaccine, according to study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X