ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಬರ್ ವಿರುದ್ಧ ತೊಡೆತಟ್ಟಿದ ಒಲಾ ತಂತ್ರ ಕೇಳಿದ್ರೇ ದಂಗು ಬೀಳ್ತಿರಾ!

|
Google Oneindia Kannada News

ನವದೆಹಲಿ, ಡಿಸೆಂಬರ್, 04: ಒಲಾ ಕ್ಯಾಬ್ ಇದೀಗ ಮಾರುಕಟ್ಟೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ತಂಡ ಕಟ್ಟಿಕೊಳ್ಳಲು ಮುಂದಾಗಿದೆ. ಉಬರ್ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಒಲಾ ಭಾರತ, ಚೀನಾ, ಯುಎಎಸ್ ಗಮನದಲ್ಲಿಟ್ಟುಕೊಂಡು ಹೊಸ ತಂತ್ರಕ್ಕೆ ಮುಂದಾಗಿದೆ.

ಡೀಡಿ ಕುದಾಯಿ, ಲೈಫ್ಟ್, ಗ್ರಾಬ್ ಟ್ಯಾಕ್ಸಿ ಮತ್ತು ಒಲಾ ಒಂದು ಗೂಡಿ ಒಂದೇ ಅಪ್ಲಿಕೇಶನ್ ಸಿದ್ಧಮಾಡುತ್ತಿವೆ. ಇದೊಂದೆ ಆಪ್ ನಲ್ಲಿ ನೀವು ಎಲ್ಲ ದೇಶಗಳಲ್ಲಿ ಸುತ್ತಲೂ ಸಾಧ್ಯವಾಗುತ್ತದೆ.[ಇನ್ಫೋಸಿಸ್ ತೊರೆದ ಬನ್ಸಾಲ್ ಈಗ ಓಲಾ ಸಿಎಫ್ಒ]

Ola joins forces with Didi, Lyft and GrabTaxi to take on Uber

ಮತ್ತೊಂದು ವಿಶೇಷ ಎಂದರೆ ಈ ಅಪ್ಲಿಕೇಶನ್ ಪ್ರಪಂಚದ ಅರ್ಧದಷ್ಟು ಜನರನ್ನು ತಲುಪಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2016ರ ಜನವರಿ ವೇಳೆಗೆ ಅಪ್ಲಿಕೇಶನ್ ನಿಮ್ಮ ಅಂಗೈ ಮೇಲಿರಲಿದೆ.

ಭಾರತದ 102 ನಗರಗಳಲ್ಲಿ ಒಲಾ ಸದ್ಯ ಸೇವೆ ನೀಡುತ್ತಿದೆ. ಡಿಡಿಸ್ ಚೀನಾದ 360 ನಗರಗಳಲ್ಲಿ ಸೇವೆ ನೀಡುತ್ತಿದ್ದು 7 ಜನರನ್ನು ತಲುಪುತ್ತಿದೆ.[ಬೆಂಗಳೂರಲ್ಲಿ ಕಾರು ಪೂಲಿಂಗ್ ಸೇವೆ ಆರಂಭಿಸಿದ ಊಬರ್]

ಲೈಫ್ಟ್ ಅಮೆರಿಕದ 190 ನಗರಗಳಲ್ಲಿ ಸೇವೆ ನೀಡುತ್ತಿದೆ. ಇಳಿದಂತೆ ಗ್ರಾಬ್ ಟ್ಯಾಕ್ಸಿ 1.5 ಮಿಲಿಯನ್ ಜನರನ್ನು ಹಿಡಿದಿಡುತ್ತಿದೆ. ಮಲಷಿಯಾ,ಸಿಂಗಪುರ, ಇಂಡೋನೇಷಿಯಾ, ಫಿಲಿಫೈನ್ಸ್, ಥೈಲ್ಯಾಂಡ್ ನಲ್ಲಿ ಸೇವೆ ನೀಡುತ್ತಿದೆ.

ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡೆ ಕಂಪನಿಗಳು ಒಟ್ಟಾಗಿ ತಮ್ಮ ವ್ಯವಹಾರ ಅಭಿವೃದ್ಧಿಪಡಿಸಿಲು ಹೊಸ ಕ್ರಮಕ್ಕೆ ಮುಂದಾಗಿವೆ. ಒಂದು ವೇಳೆ ಈ ಅಪ್ಲಿಕೇಶನ್ ಜಾರಿಗೆ ಬಂದರೆ ಟ್ಯಾಕ್ಸಿ ಸೇವೆಯಲ್ಲಿ ಹೊಸ ಕ್ರಾಂತಿ ಆಗುವುದೆಂತೂ ನಿಶ್ಚಿತ.

English summary
Indian taxi aggregator app Ola has inked a pact with global peers -- Didi, Lyft and GrabTaxi -- that will allow users of these ridesharing apps to seamlessly travel across India, China, the US and Southeast Asia. The partnership will enable the companies to jointly compete with US-based Uber that has a presence across 67 countries. The new alliance will cover nearly all of Southeast Asia, India, China and the US, reaching nearly 50 per cent of the world's population, a joint statement said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X