ಏರ್ ಇಂಡಿಯಾದಲ್ಲೂ ನಿಮಗೆ ಬೇಕಾದ ಊಟ ಆರ್ಡರ್ ಮಾಡಿ

ನವದೆಹಲಿ, ಡಿಸೆಂಬರ್, 11: ಇನ್ನು ಮುಂದೆ ಏರ್ ಇಂಡಿಯಾದಲ್ಲಿ ಸಂಚಾರ ಮಾಡುವವರು ತಮಗೆ ಬೇಕಾದ ಊಟವನ್ನು ಮೊದಲೇ ಆರ್ಡರ್ ಮಾಡಿ ತರಿಸಿಕೊಂಡು ಹೊಟ್ಟೆತುಂಬ ಸವಿಯಬಹುದು. ಆಯ್ಕೆ ಮಾಡಿಕೊಂಡಿರುವ ಕೆಲ ಅಂತಾರಾಷ್ಟ್ರೀಯ ವಿಮಾನ ಯಾನದ ವೇಳೆ ಹೊಸ ಸೌಲಭ್ಯ ನೀಡಲಾಗುವುದು ಎಂದು ಏರ್ ಇಂಡಿಯಾ ಗುರುವಾರ ತಿಳಿಸಿದೆ.

'ಆರ್ಡರ್ ಟು ಚೆಫ್' ಹೆಸರಿನಲ್ಲಿ ಯೋಜನೆ ಕಾರ್ಯಗತವಾಗಲಿದೆ. ಏರ್ ಇಂಡಿಯಾ ಹೊಸ ಯೋಜನೆಗೆ ತಾಜ್ ಸಂತ್ಸ್ ಮತ್ತು ಸ್ಕೈ ಗೌರ್ಮೆಂಟ್ ಸಹಕಾರ ಪಡೆದುಕೊಳ್ಳಲಿದ್ದು ಮೊದಲಿಗೆ ಪ್ರೀಮಿಯಂ ದರ್ಜೆ ಪ್ರಯಾಣಿಕರಿಗೆ ಊಟ ನೀಡಲಿದೆ.[ಬೆಂಗಳೂರು-ಮೈಸೂರು ನಡುವೆ ಏರ್ ಇಂಡಿಯಾ ಹಾರಾಟ]

Now, Air India offers personalised meals

ಯಾವ ಯಾವ ಮಾರ್ಗಕ್ಕಿದೆ ಹೊಸ ಸೇವೆ?

ಸದ್ಯ ದೆಹಲಿ-ಚಿಕಾಗೊ, ದೆಹಲಿ-ನ್ಯೂಯಾರ್ಕ್ ಮತ್ತು ದೆಹಲಿ-ಲಂಡನ್ ಮಾರ್ಗಕ್ಕೆ ಊಟದ ಸೇವೆ ನೀಡಲಾಗುತ್ತಿದೆ. ಆದರೆ ಒಂದು ಮೆನು ಸಿದ್ಧಮಾಡಲಾಗಿದ್ದು ಅದಕ್ಕೆ ಅನುಗುಣವಾಗಿ ಆಯ್ಕೆ ಮಾಡಬೇಕು.[ಬೆಂಗಳೂರು-ಮೈಸೂರು ವಿಮಾನದ ವೇಳಾಪಟ್ಟಿ ಬದಲು]

ಉಳಿದ ವಿಮಾನಯಾನ ಸೇವೆಗಳಿಗೂ ಈ ಸೌಲಭ್ಯ ವಿಸ್ತರಣೆ ಮಾಡಲಾಗುವುದು. ಸದ್ಯ ನಾಗರಿಕರ ಪ್ರತಿಕ್ರಿಯೆ ಉತ್ತಮವಾಗಿದೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+