ಚೀನಾಗೆ ಎಂಟ್ರಿ ಕೊಡಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್ & ಸರ್ವಾಧಿಕಾರಿ ಕಿಮ್!
ಪ್ರಪಂಚ ಮತ್ತೆ ಯುದ್ಧ & ಘರ್ಷಣೆ ಹಾದಿ ಹಿಡಿಯುತ್ತಿದ್ದು, ಯುದ್ಧಗಳು ಮತ್ತೊಮ್ಮೆ ಶುರುವಾಗುತ್ತಿವೆ. ಒಂದು ಕಡೆ ಇನ್ನೇನು ಎಲ್ಲಾ ಸರಿ ಹೋಯ್ತು ಅಂತಾ ಅನ್ನುವಾಗಲೇ ಮತ್ತೆ ಮತ್ತೆ ತಿಕ್ಕಾಟ ಕೂಡ ನಡೆಯುತ್ತಿದ್ದು, ರಷ್ಯಾ & ಉಕ್ರೇನ್ ವಾರ್ ಬೆನ್ನಲ್ಲೇ ಹಲವು ಯುದ್ಧ ಶುರುವಾಗಿವೆ. ಇದು ಸಾಲದು ಎನ್ನುವಂತೆ ಮಧ್ಯಪ್ರಾಚ್ಯ ಒಡೆದ ಮನೆಯಾಗಿದೆ. ಈ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಯುದ್ಧ ಸಾರಿದ್ದು, ಭಾರತ & ಅಮೆರಿಕ ಸಂಬಂಧ ಹಳಸಿ ಹೋಗುತ್ತಿದೆ. ಈ ಪರಿಸ್ಥಿತಿ ಎದುರಾಗಿರುವ ಸಮಯದಲ್ಲೇ, ಅಮೆರಿಕದ ಎದೆ ನಡುಗಿಸುವ ಸುದ್ದಿ ಇದೀಗ ಸಿಕ್ಕಿದೆ.
ಆಗಸ್ಟ್ 27 ಬುಧವಾರದಿಂದ ಭಾರತದ ವಿರುದ್ಧ ಭಾರಿ ದೊಡ್ಡ ಪ್ರಮಾಣದ ತೆರಿಗೆ ಹೇರಿಕೆ ಆದೇಶ ಜಾರಿಗೆ ತಂದಿದೆ ಅಮೆರಿಕ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಭಾರತ & ಅಮೆರಿಕದ ನಡುವಿನ ಸಂಬಂಧ ಹಾಳು ಮಾಡುವ ಜೊತೆ ಭಾರತದಲ್ಲಿ ಇರುವ ಅನೇಕ ಉದ್ಯಮಗಳನ್ನೂ ಸಂಕಷ್ಟಕ್ಕೆ ನೂಕಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿಕೆ ಮಾಡಿದ್ದ ಶೇ. 25 ಹೆಚ್ಚುವರಿ ಸುಂಕವೂ ಸೇರಿ ಒಟ್ಟು 50 ಪರ್ಸಂಟ್ ಟ್ಯಾಕ್ಸ್ ಅನ್ನ ಭಾರತ ರಫ್ತು ಮಾಡುವ ವಸ್ತುಗಳ ಮೇಲೆ ಈಗ ವಿಧಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಕಿಲಾಡಿ ಚೀನಾ & ರಷ್ಯಾ ಸೇರಿ ಅಮೆರಿಕಗೆ ಶಾಕ್ ಕೊಡಲು ಮುಂದಾಗಿವೆ.

ಚೀನಾ ನೆಲಕ್ಕೆ ಪುಟಿನ್ ಭರ್ಜರಿ ಎಂಟ್ರಿ!
ಹೌದು, ಅಮೆರಿಕ ವಿರುದ್ಧ ತೊಡೆತಟ್ಟಿ ನಿಂತಿರುವ ರಷ್ಯಾ, ಚೀನಾ, ಉತ್ತರ ಕೊರಿಯಾ ದೇಶಗಳು ಈ ಸಮಯದಲ್ಲಿ ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿವೆ. ಅದರಲ್ಲೂ ಚೀನಾದಲ್ಲಿ ನಡೆಯುವ ಸೇನಾ ಪರೇಡ್ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಶಾಕ್ ಸಿಗುವುದು ಗ್ಯಾರಂಟಿ ಆಗಿದೆ. ಯಾಕೆ ಅಂದ್ರೆ ಇದೇ ವೇಳೆ ಪುಟಿನ್ ಕೂಡ ಹಾಜರ್ ಇರಲಿದ್ದು, ಜೊತೆಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೂಡ ಅಮೆರಿಕಗೆ ಆಘಾತ ನೀಡುವುದು ಗ್ಯಾರಂಟಿ ಆಗುತ್ತಿದೆ.












Click it and Unblock the Notifications