ಕಿಮ್ ಜಾಂಗ್ ಉನ್ ಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯ ಯಾರು?

ಪ್ಯೋಗ್ಯಾಂಗ್, ಏಪ್ರಿಲ್ 24: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. 36 ವರ್ಷ ವಯಸ್ಸಿನ ಕಿಮ್ ಜಾಂಗ್ ಉನ್ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಮೇರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದರು.

ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಈಗ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅವರು ಶಸ್ತ್ರಚಿಕಿತ್ಸೆಗೆ ಒಳಗಾದ ಆಸ್ಪತ್ರೆ ಬಗ್ಗೆ ವೈದ್ಯರ ಬಗ್ಗೆ ಡೈಲಿ ಎನ್.ಕೆ ಆನ್ ಲೈನ್ ಪತ್ರಿಕೆ ಮಾಹಿತಿ ನೀಡಿದೆ.

ಉತ್ತರ ಕೊರಿಯಾದ ಹ್ಯಾಂಗ್ ಸ್ಯಾನ್ ನಲ್ಲಿರುವ ಅತ್ಯಾಧುನಿಕ ಹೃದ್ರೋಗ ಆಸ್ಪತ್ರೆಯಲ್ಲಿ ಕಿಮ್ ಜಾಂಗ್ ಉನ್ ರವರ ಹೃದಯ ಶಸ್ತ್ರಚಿಕಿತ್ಸೆ ನೆರವೇರಿದೆ. ಅಂದ್ಹಾಗೆ, ಈ ಆಸ್ಪತ್ರೆ ಕಿಮ್ ಜಾಂಗ್ ಉನ್ ಕುಟುಂಬಕ್ಕೆ ಮಾತ್ರ ಮೀಸಲು ಎಂಬುದು ನಿಮಗೆ ಗೊತ್ತೇ.?

ಆಸ್ಪತ್ರೆ ಕಟ್ಟಿಸಿದ ಹಿಂದಿನ ಕಥೆ

ಆಸ್ಪತ್ರೆ ಕಟ್ಟಿಸಿದ ಹಿಂದಿನ ಕಥೆ

1994 ರಲ್ಲಿ ಹ್ಯಾಂಗ್ ಸ್ಯಾನ್ ನಲ್ಲಿ ಹೃದ್ರೋಗ ಆಸ್ಪತ್ರೆಯನ್ನು ಕಟ್ಟಿಸಲಾಯ್ತು. ಇದರ ಹಿಂದೆ ಒಂದು ಕಾರಣ ಇದೆ. ಅದೇನಪ್ಪಾ ಅಂದ್ರೆ, ಅಂದಿನ ಉತ್ತರ ಕೊರಿಯಾದ ಅಧ್ಯಕ್ಷ (ಈಗಿನ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ರವರ ಅಜ್ಜ) ಕಿಮ್ ಸಂಗ್ 1994 ರಲ್ಲಿ ಹ್ಯಾಂಗ್ ಸ್ಯಾನ್ ನಲ್ಲಿ ನಿಧನರಾದರು. ರಾಜಧಾನಿ ಪ್ಯೋಗ್ಯಾಂಗ್ ನಿಂದ 150 ಕಿ.ಮೀ ದೂರದಲ್ಲಿರುವ ಹ್ಯಾಂಗ್ ಸ್ಯಾನ್ ನಲ್ಲಿ ಒಂದು ಆಸ್ಪತ್ರೆ ಇದ್ದಿದ್ದರೆ, ಕಿಮ್ ಸಂಗ್ ಬದುಕುಳಿಯುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತವಾಯ್ತು. ಈ ಹಿನ್ನಲೆಯಲ್ಲಿ ಹ್ಯಾಂಗ್ ಸ್ಯಾನ್ ನಲ್ಲೇ ಕಿಮ್ ಕುಟುಂಬ ಆಸ್ಪತ್ರೆ ನಿರ್ಮಿಸಿತು. ಸಾಲದಕ್ಕೆ, ಎಲ್ಲಾ ರೀತಿಯ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಜಧಾನಿ ಪ್ರೋಗ್ಯಾಂಗ್ ನಿಂದ ದೂರದಲ್ಲಿರುವ ಹ್ಯಾಂಗ್ ಸ್ಯಾನ್ ನಲ್ಲಿ ಕಿಮ್ ಕುಟುಂಬ ಆಸ್ಪತ್ರೆ ಕಟ್ಟಿಸಿತು.

ಸುಸಜ್ಜಿತ ಆಸ್ಪತ್ರೆ

ಸುಸಜ್ಜಿತ ಆಸ್ಪತ್ರೆ

ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹ್ಯಾಂಗ್ ಸ್ಯಾನ್ ಆಸ್ಪತ್ರೆ ಸುಸಜ್ಜಿತವಾಗಿದೆ. ಜಪಾನ್ ಮತ್ತು ಜರ್ಮನಿಯಿಂದ ಅತ್ಯಾಧುನಿಕ ಉಪಕರಣಗಳನ್ನು ಇಲ್ಲಿ ಆಮದು ಮಾಡಿಕೊಳ್ಳಲಾಗಿದೆ. ಇಲ್ಲಿನ ಆಸ್ಪತ್ರೆ ವೈದ್ಯರು ಕೂಡ ಪರಿಣಿತಿ ಹೊಂದಿದ್ದಾರೆ ಎಂದು ಡೈಲಿ ಎನ್.ಕೆ ವರದಿ ಮಾಡಿದೆ.

ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಯಾರು.?

ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಯಾರು.?

ಕಿಮ್ ಜಾಂಗ್ ಉನ್ ಗೆ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯ ಕಿಮ್ ಮನ್ ಯು ಆಸ್ಪತ್ರೆಯ ವೈದ್ಯ ಎಂದು ತಿಳಿದುಬಂದಿದೆ. ಆದರೆ, ಅವರ ಹೆಸರು ಮತ್ತು ಗುರುತನ್ನು ಬಹಿರಂಗ ಪಡಿಸಿಲ್ಲ. ಪ್ಯೋಗ್ಯಾಂಗ್ ನಲ್ಲಿರುವ ಕಿಮ್ ಮನ್ ಯು ಹೃದ್ರೋಗಕ್ಕೆ ಸಂಭಂದಿಸಿದ ಆಸ್ಪತ್ರೆಯಾಗಿದ್ದು, ಅಲ್ಲಿರುವ ವೈದ್ಯರೆಲ್ಲರೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಪರಿಣಿತರು.

ತರಬೇತಿ ನಂತರ ಶಸ್ತ್ರಚಿಕಿತ್ಸೆ

ತರಬೇತಿ ನಂತರ ಶಸ್ತ್ರಚಿಕಿತ್ಸೆ

ಕಿಮ್ ಜಾಂಗ್ ಉನ್ ಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಕಿಮ್ ಮನ್ ಯು ಆಸ್ಪತ್ರೆಯ ಸರ್ಜನ್ ಜರ್ಮನಿಗೆ ಹೋಗಿ ವಿಶೇಷ ತರಬೇತಿ ಪಡೆದುಕೊಂಡು ಬಂದಿದ್ದರಂತೆ. ಹೃದ್ರೋಗ ಚಿಕಿತ್ಸೆಯಲ್ಲಿ ಹೆಚ್ಚಿನ ತರಬೇತಿ ಪಡೆದ ನಂತರ ಕಿಮ್ ಜಾಂಗ್ ಉನ್ ಗೆ ಆ ವೈದ್ಯ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ ಎಂದು ಡೈಲಿ ಎನ್.ಕೆ ವರದಿ ಮಾಡಿದೆ.

ಶಸ್ತ್ರಚಿಕಿತ್ಸೆ ಮಾಡಿದ ವೈದ್ಯನಿಗೆ ಭದ್ರತೆ

ಶಸ್ತ್ರಚಿಕಿತ್ಸೆ ಮಾಡಿದ ವೈದ್ಯನಿಗೆ ಭದ್ರತೆ

ಕಿಮ್ ಜಾಂಗ್ ಉನ್ ರವರ ಆರೋಗ್ಯ ಸ್ಥಿತಿ ಈಗ ಹೇಗಿದೆ ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ಆದ್ರೆ, ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯನಿಗೆ ಭದ್ರತೆ ಒದಗಿಸಲಾಗಿದ್ದು, ಅಂಗರಕ್ಷಕನೊಂದಿಗೆ ಆ ವೈದ್ಯ ಓಡಾಡುತ್ತಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+