ಕ್ಷಿಪಣಿ ಅಲ್ಲ ಕಸ ಕಳುಹಿಸಿದ ತಲೆಕೆಟ್ಟ ಸರ್ವಾಧಿಕಾರಿ!
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅದೆಷ್ಟು ತಲೆಕೆಟ್ಟು ನಿಂತಿದ್ದಾನೆ ಅಂದ್ರೆ, ಸುಮ್ಮನೆ ಇದ್ದರೂ ತನ್ನ ಅಕ್ಕಪಕ್ಕದ ದೇಶಗಳನ್ನು ಕೆಣಕುತ್ತಿದ್ದಾನೆ. ಹಾಗೇ ಅವರ ವಿರುದ್ಧವೇ, ಎಗರಿ ಎಗರಿ ಹೋಗುತ್ತಿದ್ದಾನೆ. ಇಷ್ಟುದಿನ ಕ್ಷಿಪಣಿಗಳ ಪರೀಕ್ಷೆ ಮೂಲಕ ಸದ್ದು ಮಾಡುತ್ತಿದ್ದವ ಈಗ ದಿಢೀರ್ ತನ್ನ ಶತ್ರು ದಕ್ಷಿಣ ಕೊರಿಯಾಗೆ ಕಸ ಕಳುಹಿಸಿದ್ದಾನೆ! ವಿಡಿಯೋ ನೋಡಲು, ಮುಂದೆ ಓದಿ.
ಹೌದು ಕೆಲವೇ ಗಂಟೆಗಳ ಹಿಂದೆ ಗೂಢಚಾರಿ ಉಪಗ್ರಹ ಪ್ರಯೋಗದಲ್ಲಿ ಸೋತು ಸುಣ್ಣವಾಗಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಇದೀಗ ಅದೇ ಕೋಪದಲ್ಲಿ ಮೆಂಟಲ್ ಆಗಿದ್ದಾನೆ ಅಂತಾ ಕಾಣಿಸುತ್ತೆ. ಯಾಕಂದ್ರೆ ಕಿಮ್ ಜಾಂಗ್ ಉನ್ ಇದೀಗ ತನ್ನ ಶತ್ರು ದೇಶ ದಕ್ಷಿಣ ಕೊರಿಯಾಗೆ ಕಸ ಕಳುಹಿಸಿದ್ದಾನೆ. ತಾನು ಉಪಗ್ರಹ ಹಾರಿಸುವಾಗ ಸೋತು ಹೋದ ಕಾರಣಕ್ಕೆ ಸಿಟ್ಟಾಗಿರುವ ಈತ ಹಿಂಗೆಲ್ಲಾ ಕಿರಿಕ್ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ದೊಡ್ಡ ದೊಡ್ಡ ಬೆಲೂನ್ ಮೂಲಕ ಉತ್ತರ ಕೊರಿಯಾ ಕಳುಹಿಸಿದ್ದ ಕಸ ದಕ್ಷಿಣ ಕೊರಿಯಾಗೆ ಬಂದು ಬಿದ್ದಿದೆ, ಆ ವಿಡಿಯೋ ನೋಡಲು ಮುಂದೆ ಓದಿ.

ಬೆಲೂನ್ ಮೂಲಕ ಕಸ ಲ್ಯಾಂಡಿಂಗ್!
ಅಂದಹಾಗೆ ಬೇಡ ಬೇಡ ಅಂದ್ರೂ ಮೇಲೆ ಬಿದ್ದು ಕಿರಿಕ್ ಮಾಡೋದು ಕಿಮ್ ಜಾಂಗ್ ಉನ್‌ಗೆ, ಈ ಮೊದಲಿನಿಂದ ಕೂಡ ಒಲಿದು ಬಂದಿರುವ ವಿದ್ಯೆ. ಇದೇ ಕಾರಣಕ್ಕೆ ತನ್ನ ಸುತ್ತಮುತ್ತ ಬರೀ ಶತ್ರುಗಳನ್ನೇ ಇಟ್ಟುಕೊಂಡಿರುವ ಕಿಮ್ ಜಾಂಗ್ ಉನ್, ಯಾವ ಕ್ಷಣದಲ್ಲಿ ಸತ್ತು ಹೋಗುತ್ತಾನೋ? ಅಂತಾ ಹೇಳ್ತಾರೆ ಅವನ ಶತ್ರುಗಳು.
ಹೀಗೆ ಕಿರಿಕಿರಿ ನಡುವೆ ಇದೀಗ ಕಿಮ್ ಜಾಂಗ್ ಉನ್ ಕಸದ ರಾಶಿಯನ್ನೇ ತನ್ನ ಶತ್ರು ದೇಶದ ಮೇಲೆ ಸುರಿದಿದ್ದಾನೆ. ಉತ್ತರ ಕೊರಿಯಾ ಬೃಹತ್ ಬಲೂನ್ ಬಳಸಿಕೊಂಡು, 'ಕಸ' ತುಂಬಿದ ಚೀಲಗಳನ್ನ ದಕ್ಷಿಣ ಕೊರಿಯಾ ಗಡಿಯುದ್ದಕ್ಕೂ ಬಿಸಾಡಿದೆ ಎಂಬ ಆರೋಪ ಕೇಳಿಬಂದಿದೆ. ಹೀಗೆ ಉ.ಕೊರಿಯಾ ಕಸ ಬಿಸಾಡಿದ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ.
🇰🇵🇰🇷 North Korea has launched hundreds of balloons filled with trash and waste across the border, Seoul's military reported on Wednesday.
— DD Geopolitics (@DD_Geopolitics) May 29, 2024
This action follows a warning from the North of retaliatory measures in response to anti-Pyongyang leaflets sent by South Korean activists. pic.twitter.com/28f5eoQwMK
ಕಸದಲ್ಲಿ ತುಂಬಿದೆಯಾ ಬಾಂಬ್?
ಉತ್ತರ ಕೊರಿಯಾ ಹೀಗೆ ಕಸ ತುಂಬಿದ ಬಲೂನ್‌ಗಳ ರಾಶಿಯನ್ನೇ ತನ್ನ ಮೇಲೆ ಸುರಿದಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆಗಿತ್ತು ದಕ್ಷಿಣ ಕೊರಿಯಾ. ಕೂಡಲೇ ಆ ಕಸದಲ್ಲಿ ಇರುವ ವಸ್ತುಗಳನ್ನ ಪರಿಶೀಲನೆ ಮಾಡಲಾಗಿದೆ. ಆದ್ರೆ ಮೇಲ್ನೋಟಕ್ಕೆ ಕಸದ ಚೀಲಗಳಲ್ಲಿ ಹಾನಿಗೊಳಗಾದ ವಸ್ತು, ಪೇಪರ್ ಪೀಸ್, ಪ್ಲಾಸ್ಟಿಕ್ ಬಾಟಲಿ, ಬ್ಯಾಟರಿ, ಗೊಬ್ಬರ, ಶೂಗಳ ಬಿಡಿಭಾಗ ಸೇರಿದಂತೆ ಬೇಡವಾದ ವಸ್ತುಗಳೇ ಕಂಡುಬಂದಿವೆ. ಹೀಗಿದ್ದರೂ ಎಲ್ಲಾ ವಸ್ತುಗಳನ್ನ ಸಂಗ್ರಹ ಮಾಡಿರುವ ದಕ್ಷಿಣ ಕೊರಿಯಾ, ಅದನ್ನ ಪರಿಶೀಲನೆ ಮಾಡುತ್ತಿದೆ. ಯಾಕಂದ್ರೆ ಮೆಂಟಲ್ ಸರ್ವಾಧಿಕಾರಿಯ ಬುದ್ಧಿ ನಂಬೋದಕ್ಕೆ ಆಗಲ್ಲ ನೋಡಿ ಅದಕ್ಕೆ!
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications