North Korea: ದೊಡ್ಡಣ್ಣ ಅಮೆರಿಕ ವಿರುದ್ಧ ತೊಡೆತಟ್ಟಿದ ಉತ್ತರ ಕೊರಿಯಾ, ಮತ್ತಷ್ಟು ಪರಮಾಣು ಬಾಂಬ್ ರೆಡಿ?
ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಸುಮಾರು ಅರ್ಧ ಶತಮಾನದಿಂದ ದ್ವೇಷ ಇದೆ. ಎರಡೂ ದೇಶಗಳು ಒಬ್ಬರ ಮೇಲೆ ಮತ್ತೊಬ್ಬರು ಪರಮಾಣು ಬಾಂಬ್ ಹಾಕುವಷ್ಟು ಕೋಪ ಕಾಪಾಡಿಕೊಂಡು ಬಂದಿದ್ದಾರೆ. ಇಂತಹ ಸ್ಥಿತಿ ಇರುವಾಗ ಅಮೆರಿಕ ದಿಢೀರ್ ವೆನಿಜುಯೆಲಾ ಮೇಲೆ ದಾಳಿ ಅಲ್ಲಿನ ಅಧ್ಯಕ್ಷನ ಅರೆಸ್ಟ್ ಮಾಡಿ ಅಮೆರಿಕಗೆ ಕರೆದುಕೊಂಡು ಹೋಗಿದೆ. ಈ ಘಟನೆ ಬೆನ್ನಲ್ಲೇ ಅಮೆರಿಕದ ಶತ್ರುಗಳ ಎದೆಯಲ್ಲಿ ನಡುಕ ಶುರುವಾಗಿದೆ. ಅದರಲ್ಲೂ ಉತ್ತರ ಕೊರಿಯಾ ರೊಚ್ಚಿಗೆದ್ದು ಮತ್ತಷ್ಟು ಪರಮಾಣು ಬಾಂಬ್‌ಗಳನ್ನು ರೆಡಿ ಮಾಡಿಕೊಳ್ಳುತ್ತಿದೆ.
2024ರ ಹೊತ್ತಿಗೆ ಉತ್ತರ ಕೊರಿಯಾ ಬಳಿ ಬರೋಬ್ಬರಿ 50 ಪರಮಾಣು ಬಾಂಬ್‌ಗಳು ಇದ್ದು, ಇದೀಗ ಮತ್ತಷ್ಟು ಹೆಚ್ಚಾಗಿವೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಟ್ರಂಪ್ ನಡೆ ವಿರುದ್ಧ ಭಾರಿ ಆಕ್ರೋಶ ಹೊರ ಹಾಕಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ತಮ್ಮ ರಕ್ಷಣೆಗೆ ಮತ್ತಷ್ಟು ಬಾಂಬ್‌ಗಳ ಅಗತ್ಯತೆ ಇದೆ ಎಂಬುದನ್ನು ಪ್ರಸ್ತಾಪ ಮಾಡಿದ್ದಾನೆ.

ಉತ್ತರ ಕೊರಿಯಾ ಬಗ್ಗೆ ಟ್ರಂಪ್ ಸೈಲೆಂಟ್
ಅಲ್ಲದೇ ಉತ್ತರ ಕೊರಿಯಾದ ನ್ಯೂಕ್ಲಿಯರ್ ಪ್ಲಾಂಟ್‌ಗಳಲ್ಲಿ ಇನ್ನಷ್ಟು ಪರಮಾಣು ಬಾಂಬ್ ಸಿಡಿತಲೆ ಉತ್ಪಾದನೆ ಮಾಡಲಾಗುತ್ತಿದೆ ಎಂಬ ಮಾಹಿತಿ ತಲ್ಲಣ ಸೃಷ್ಟಿಸಿದೆ. ಇದರ ಜೊತೆಗೆ ನ್ಯೂಕ್ಲಿಯರ್ ಬಾಂಬ್ ಹೊತ್ತೊಯ್ಯುವ ಸಾಮರ್ಥ್ಯ ಇರುವ, ಹೊಸ ಕ್ಷಿಪಣಿಗಳನ್ನು ಕೂಡ ಅಭಿವೃದ್ಧಿಪಡಿಸಿ ದೊಡ್ಡದಾಗೇ ಉತ್ತರ ಕೊರಿಯಾ ಸಿದ್ಧತೆ ಆರಂಭ ಮಾಡಿದೆ. ಇಷ್ಟಾದರೂ ಅಮೆರಿಕ ಅಧ್ಯಕ್ಷ ಟ್ರಂಪ್ ಮಾತ್ರ ಉತ್ತರ ಕೊರಿಯಾ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಕುತೂಹಲ ಹೆಚ್ಚು ಮಾಡಿದೆ.
ಒಂದು ಬಾರಿ ಭೇಟಿ ಆಗಿದ್ದರು ಟ್ರಂಪ್
2016ರ ಅವಧಿಯಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್, ಆರಂಭದಲ್ಲಿ ಇದೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೊತೆಗೆ ಕಿರಿಕ್ ಮಾಡಿಕೊಂಡಿದ್ದರು. ಆ ನಂತರ ಇಬ್ಬರ ನಡುವೆ ಸಂಧಾನ ನಡೆದು ಭೇಟಿ ಕೂಡ ಮಾಡಿದ್ದರು. ಖುದ್ದು ಟ್ರಂಪ್ ದಕ್ಷಿಣ ಕೊರಿಯಾಗೆ ಹೋಗಿ, ಗಡಿಯಲ್ಲಿ ಕಿಮ್ ಜಾಂಗ್ ಉನ್ ಮೀಟ್ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ನಂತರ ಎರಡೂ ದೇಶಗಳ ದ್ವೇಷ ಸರಿಯಾಗಲಿದೆ ಎಂಬ ನಿರೀಕ್ಸೆ ಕೂಡ ಇತ್ತು. ಆದರೆ ಈಗ ತಿಕ್ಕಾಟ ಇನ್ನಷ್ಟು ಹೆಚ್ಚಾಗುತ್ತಿದೆ.
ಉತ್ತರ ಕೊರಿಯಾ ಮೇಲೆ ಮತ್ತಷ್ಟು ನಿರ್ಬಂಧ?
ಈಗಾಗಲೇ ನೂರಾರು ಆರ್ಥಿಕ ನಿರ್ಬಂಧ ಎದುರಿಸುತ್ತಿರುವ ಉತ್ತರ ಕೊರಿಯಾ ಸಂಕಷ್ಟಗಳ ಸರಮಾಲೆಗೆ ಸಿಲುಕಿದೆ. ರಷ್ಯಾ & ಚೀನಾ ಮಾಡುತ್ತಿರುವ ಸಹಾಯದ ಫಲವಾಗಿ ಉಸಿರಾಟ ನಡೆಸುತ್ತಿದೆ ಉತ್ತರ ಕೊರಿಯಾ. ಹೀಗಿದ್ದಾಗ ಪದೇ ಪದೇ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಮಾಡುತ್ತಿರುವ ಉತ್ತರ ಕೊರಿಯಾ ವಿರುದ್ಧ ಅಮೆರಿಕ ಈಗ ಇನ್ನಷ್ಟು ನಿರ್ಬಂಧದ ಅಸ್ತ್ರ ಪ್ರಯೋಗ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಇದಕ್ಕೆಲ್ಲಾ ಕಿಮ್ ಕೇರ್ ಮಾಡುವ ವ್ಯಕ್ತಿಯೇ ಅಲ್ಲ ಅನ್ನೋದು ಅಮೆರಿಕಗೆ ಕೂಡ ಚನ್ನಾಗಿಯೇ ಗೊತ್ತಿದೆ.












Click it and Unblock the Notifications