ಅಣ್ಣಾ ಬಂದ.. ಅಣ್ಣಾ ಬಂದ.. ಮಿಸೈಲ್ ತಂದ.. ಮಿಸೈಲ್ ತಂದ..!
ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ಈ ಜಗತ್ತು ಸರ್ವನಾಶ ಮಾಡುವ ತನಕ ನೆಮ್ಮದಿ ಇಲ್ಲ ಅಂತಾ ಕಾಣುತ್ತೆ. ಈ ಕಾರಣಕ್ಕೆ ಪದೇ ಪದೇ ವಿನಾಶಕಾರಿ ಅಸ್ತ್ರ ಹೊರಗೆ ತೆಗೆಯುತ್ತಿದ್ದಾನೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಿರಿಕಿರಿ ಮುಂದುವರಿದಿದ್ದು, ತನ್ನ ಬಳಿ ಇರುವ ಮಿಸೈಲ್ ಇದೀಗ ಮತ್ತೆ ಹೊರಗೆ ತೆಗೆದು ಶತ್ರುಗಳಿಗೆ ವಾರ್ನಿಂಗ್ ಕೊಟ್ಟಿದ್ದಾನೆ. ಹಾಗಾದ್ರೆ ಈ ಬಾರಿ ಕಿಮ್ ಜಾಂಗ್ ಉನ್ ಮಾಡಿದ ಕೃತ್ಯ ಏನು? ಇದರಿಂದ ಭಯಪಟ್ಟಿರುವ ದೇಶಗಳು ಯಾವುವು? ಬನ್ನಿ ತಿಳಿಯೋಣ.
ಕಿಮ್ ಜಾಂಗ್ ಉನ್ ಮಾತು ಎತ್ತಿದರೆ ಸಾಕು, ಕ್ಷಿಪಣಿಗಳನ್ನ ಹೊರಗೆ ತಂದು ಪೋಸ್ ಕೊಟ್ಟು ಬೆದರಿಕೆ ಹಾಕುತ್ತಾನೆ. ಅದರಲ್ಲೂ ತನ್ನ ಪಕ್ಕದಲ್ಲೇ ಇರುವ ದಕ್ಷಿಣ ಕೊರಿಯಾ ವಿರುದ್ಧವೇ ಪದೇ ಪದೇ ಗುಟುರು ಹಾಕುತ್ತಾನೆ. ಹೀಗಿದ್ದಾಗ ಜಪಾನ್ ಕೂಡ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಾಟಕ್ಕೆ ಬೆಚ್ಚಿ ಬಿದ್ದಿದೆ. ಇಷ್ಟೆಲ್ಲಾ ನಡೆಯುವ ಸಮಯದಲ್ಲೇ ಮತ್ತೆ ಉತ್ತರ ಕೊರಿಯಾದ ಮೆಂಟಲ್ ಅಧ್ಯಕ್ಷ & ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ಗಂಭೀರ ಆರೋಪ ಈಗ ಕೇಳಿಬಂದಿದೆ. ಹಾಗಾದ್ರೆ ಏನದು ಆರೋಪ? ಬನ್ನಿ ತಿಳಿಯೋಣ.

ಪರಮಾಣು ದಾಳಿ ಮಾಡುವ ಎಚ್ಚರಿಕೆ!
ಅಷ್ಟಕ್ಕೂ ಕಿಮ್ ಜಾಂಗ್ ಉನ್ ಇದೀಗ ಮತ್ತೆ ಮಿಸೈಲ್ ಟೆಸ್ಟ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಮುದ್ರದತ್ತ ಉತ್ತರ ಕೊರಿಯಾ, ಅಲ್ಪ-ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿ ಪರೀಕ್ಷೆ ನಡೆಸಿದೆ. ಈ ಮೂಲಕ, ಭಯದ ವಾತಾವರಣ ನಿರ್ಮಾಣ ಆಗುತ್ತಿದೆ ಎಂದು ಇದೀಗ ದಕ್ಷಿಣ ಕೊರಿಯಾ ಮಿಲಿಟರಿ ಗಂಭೀರ ಆರೋಪ ಮಾಡಿದೆ. ಯುದ್ಧ ಸಿದ್ಧತೆ ಕಾರಣಕ್ಕೆ ಪರಮಾಣು ಬಲವನ್ನ ಸಂಪೂರ್ಣವಾಗಿ ಸಜ್ಜುಗೊಳಿಸುತ್ತೇವೆ ಅಂತಾ ಇತ್ತೀಚೆಗೆ ಈ ಸರ್ವಾಧಿಕಾರಿ ಗುಡುಗಿದ್ದ. ಹೀಗೆ, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ಬೆದರಿಕೆ ಹಾಕುವ ಹೇಳಿಕೆ ನೀಡಿದ ಬೆನ್ನಲ್ಲೇ ಈ ರೀತಿ ಕ್ಷಿಪಣಿ ಪರೀಕ್ಷೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಯುದ್ಧಕ್ಕೆ ಸಿದ್ಧವಾದ ಜಪಾನ್ ಸೇನೆ?
ಮತ್ತೊಂದು ಕಡೆ ಉತ್ತರ ಕೊರಿಯಾ ಉಡಾಯಿಸಿರುವ ಖಂಡಾಂತರ ಕ್ಷಿಪಣಿಗಳು ಕೊರಿಯನ್ ಕರಾವಳಿ & ಜಪಾನ್ ಮಧ್ಯ ಸಮುದ್ರ ಪ್ರದೇಶದಲ್ಲಿ ಅಪ್ಪಳಿಸಿವೆ ಎಂದು ಆರೋಪಿಸಲಾಗಿದೆ. ಈ ಮೂಲಕ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂಬ ಆರೋಪಕ್ಕೆ ಇದೀಗ ಸಾಕ್ಷ್ಯ ಸಿಕ್ಕಂತೆ ಆಗಿದೆ. ದಕ್ಷಿಣ ಕೊರಿಯಾ ಚೀಫ್ ಆಫ್ ಸ್ಟಾಫ್ ಜಂಟಿ ಮುಖ್ಯಸ್ಥರು, ಈ ಕುರಿತು ಈಗ ಹೇಳಿಕೆ ನೀಡಿದ್ದಾರೆ. ಮತ್ತೊಂದು ಕಡೆ, ಹಡಗು & ಯುದ್ಧ ವಿಮಾನ ಸಜ್ಜಾಗಿರುವಂತೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೂಚನೆ ನೀಡಿದ್ದಾರೆ. ಉತ್ತರ ಕೊರಿಯಾ ಕ್ಷಿಪಣಿಗಳು ಸುಮಾರು 360 ಕಿಲೋ ಮೀಟರ್ ದೂರ ಹಾರಿ ಬಂದಿವೆ ಎಂದು ಆರೋಪ ಮಾಡಲಾಗಿದೆ.












Click it and Unblock the Notifications