ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ವಿಮಾನ ಪತನ, 16 ಮೃತದೇಹಗಳು ಪತ್ತೆ

|
Google Oneindia Kannada News

ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ನೇಪಾಳದ ತಾರಾ ಏರ್ ಸಂಸ್ಥೆಗೆ ಸೇರಿದ ವಿಮಾನ ಭಾನುವಾರ ನಾಪತ್ತೆಯಾಗಿತ್ತು.

ವಿಮಾನ ದುರಂತದಲ್ಲಿ ಬದುಕುಳಿದವರ ಸಾಧ್ಯತೆಗಳು ತೀರ ಕಡಿಮೆ. ಇದುವೆರೆಗೂ ವಿಮಾನ ಪ್ರಯಾಣಿಕರಲ್ಲಿ ಯಾರು ಜೀವಂತವಾಗಿ ಪತ್ತೆಯಾಗಿಲ್ಲ. ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಪೋಖರಾ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ನೇಪಾಳ ತಾರಾ ಏರ್ ಸಂಸ್ಥೆ ವಿಮಾನ ಪತ್ತೆ!ನಾಪತ್ತೆಯಾಗಿದ್ದ ನೇಪಾಳ ತಾರಾ ಏರ್ ಸಂಸ್ಥೆ ವಿಮಾನ ಪತ್ತೆ!

ಬದುಕುಳಿಯುವ ಸಾಧ್ಯತೆಗಳು ತೀರ ಕಡಿಮೆ:
"ತಾರಾ ಏರ್ 9ಎನ್-ಎಇಟಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿರುವ ಸಾಧ್ಯತೆಗಳು ದಟ್ಟವಾಗಿದೆ. ಪ್ರಾಥಮಿಕ ಪರಿಶೀಲನೆಯ ಪ್ರಕಾರ ವಿಮಾನ ಅಪಘಾತದಲ್ಲಿ ಯಾರೊಬ್ಬರೂ ಬದುಕುಳಿಯುವ ಸಾಧ್ಯತೆ ಕ್ಷೀಣವಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ,'' ಎಂದು ನೇಪಾಳ ಗೃಹ ಸಚಿವಾಲಯದ ವಕ್ತಾರ ಫದೀಂದ್ರ ಮಣಿ ಪೋಖ್ರೆಲ್ ಮಾಹಿತಿ ನೀಡಿದ್ದಾರೆ.

No survivors found at Nepal Tara Air plane crash

ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ:
"15 ಮಂದಿ ನೇಪಾಳಿ ಯೋಧರ ತಂಡವನ್ನು ಹೆಲಿಕಾಪ್ಟರ್ ಮೂಲಕ ವಿಮಾನ ಅವಶೇಷ ಪತ್ತೆಯಾದ ಸ್ಥಳಕ್ಕೆ ರವಾನಿಸಲಾಗಿದೆ. ಅವರು ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿಮಾನದ ಅವಶೇಷಗಳ ಸ್ಥಳವು ಸುಮಾರು 14,500 ಅಡಿ ಎತ್ತರದಲ್ಲಿದೆ,'' ಎಂದು ನೇಪಾಳ ಸೇನೆಯ ವಕ್ತಾರ ಬ್ರಿಗೇಡಿಯರ್‌ ಜನರಲ್ ನಾರಾಯಣ್ ಸಿಲ್ವಾಲ್ ತಿಳಿಸಿದ್ದಾರೆ.

ನೇಪಾಳದಲ್ಲಿ 19 ಜನರಿದ್ದ ವಿಮಾನ ನಾಪತ್ತೆನೇಪಾಳದಲ್ಲಿ 19 ಜನರಿದ್ದ ವಿಮಾನ ನಾಪತ್ತೆ

ನಾಲ್ವರು ಮುಂಬೈ ನಿವಾಸಿಗಳು ಸೇರಿದಂತೆ 22 ಮಂದಿ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನವು ಭಾನುವಾರ ನೇಪಾಳದ ಪ್ರವಾಸಿ ತಾಣ ಪೋಖರಾ ನಗರದಿಂದ ಜೋಮ್ ಸಮ್ ನಗರಕ್ಕೆ ಹೊರಟಿತ್ತು.

ಮುಂಬೈ ಮೂಲದ ಕುಟುಂಬ ಸದಸ್ಯರು ಮೃತಪಟ್ಟಿರುವ ಶಂಕೆ:
ಈ ವಿಮಾನದಲ್ಲಿ ಮುಂಬೈನ ಥಾಣೆಯ ನಿವಾಸಿಗಳಾದ ಅಶೋಕ್ ತ್ರಿಪಾಠಿ, ಧನುಶ್ ತ್ರಿಪಾಠಿ, ರಿತಿಕಾ ತ್ರಿಪಾಠಿ ಮತ್ತು ವೈಭವಿ ತ್ರಿಪಾಠಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು. ಅಲ್ಲದೇ ಇಬ್ಬರು ಜರ್ಮನ್‌ ಪ್ರಜೆಗಳು ಮತ್ತು 13 ಮಂದಿ ನೇಪಾಳಿ ಪ್ರಯಾಣಿಕರು ಹಾಗೂ ಮೂವರು ನೇಪಾಳಿ ವಿಮಾನ ಸಿಬ್ಬಂದಿ ವಿಮಾನದಲ್ಲಿದ್ದರು. ದುರಂತದಲ್ಲಿ ಮುಂಬೈ ಮೂಲದ ಕುಟುಂಬ ಸದಸ್ಯರು ಮೃತಪಟ್ಟಿರುವ ಶಂಕೆ ದಟ್ಟವಾಗಿದೆ.

No survivors found at Nepal Tara Air plane crash

ಪೋಖರಾ ನಗರದ ವಿಮಾನ ನಿಲ್ದಾಣದಿಂದ ತಾರಾ ಏರ್ ಸಂಸ್ಥೆಗೆ ಸೇರಿದ 9ಎನ್-ಎಇಟಿ ವಿಮಾನವು ಭಾನುವಾರ ಬೆಳಗ್ಗೆ 9.50ಕ್ಕೆ ಟೇಕಾಫ್ ಆಗಿದೆ. ನಂತರ ಕಣಿವೆಗಳಿಂದ ಕೂಡಿದ ಮುಸ್ತಾಂಗ್ ಪ್ರದೇಶದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಸಂಪರ್ಕ ಕಡಿತಗೊಂಡಿದೆ. ವಿಮಾನ ಟೇಕ್ ಆಫ್ ಆದ 15 ನಿಮಿಷದಲ್ಲೇ ನಿಯಂತ್ರಣಾ ಕೊಠಡಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
No survivors found at Nepal Tara Air plane crash. 16 dead bodies vacated so far from Nepal army,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X