• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಕ್ರೇನ್ ವಿಮಾನದ ಬ್ಲ್ಯಾಕ್ ಬಾಕ್ಸ್‌ ನೀಡಲ್ಲ: ಯೂಟರ್ನ್ ಹೊಡೆದ ಇರಾನ್

|

ಟೆಹ್ರಾನ್, ಜನವರಿ 20: ಇತ್ತೀಚೆಗೆ ಇರಾನ್ ಹೊಡೆದುರಳಿಸಿದ ಉಕ್ರೇನಿನ ಬೋಯಿಂಗ್ 737-800 ವಿಮಾನದ ಬ್ಲ್ಯಾಕ್‌ ಬಾಕ್ಸ್‌ ನೀಡುವ ಬಗ್ಗೆ ಇರಾನ್ ಮತ್ತೆ ಯೂಟರ್ನ್ ಹೊಡೆದಿದೆ.

ಅಂತಾರಾಷ್ಟ್ರೀಯ ಒತ್ತಡದ ಹಿನ್ನೆಲೆಯಲ್ಲಿ ಕಣ್ತಪ್ಪಿನಿಂದ ವಿಮಾನ ಹೊಡೆದುರುಳಿಸಿರುವುದನ್ನು ಒಪ್ಪಿಕೊಂಡಿದ್ದ ಇರಾನ್ ಬ್ಲ್ಯಾಕ್‌ ಬಾಕ್ಸ್‌ನ್ನು ಕೂಡ ನೀಡಲು ಸಮ್ಮತಿಸಿತ್ತು. ಆದರೆ ಪ್ರಾಥಮಿಕ ತನಿಖೆಯ ಬಳಿಕ ಬ್ಲ್ಯಾಕ್‌ಬಾಕ್ಸ್‌ನ್ನು ಉಕ್ರೇನಿಗೆ ನೀಡಲು ಇರಾನ್ ಹಿಂಜರಿದಿದೆ.

ಉಕ್ರೇನ್ ವಿಮಾನ ಅಪಘಾತ ಪ್ರಕರಣಕ್ಕೆ ಹೊಸ ತಿರುವು: ಕ್ಷಿಪಣಿ ದಾಳಿಯ ಬಗ್ಗೆ ಶಂಕೆ

ತನಿಖೆಯ ಉಸ್ತುವಾರಿ ಹೊಂದಿರುವ ಹಸನ್ ರೆಜಿಫರ್ ಬ್ಲ್ಯಾಕ್‌ಬಾಕ್ಸನ್ನು ಇರಾನ್‌ನಿಂದ ಹೊರಗೆ ಕಳುಹಿಸುವ ಯಾವುದೇ ಪ್ರಸ್ತಾಪವಿಲ್ಲ ಹೀಗಾಗಿ, ಉಕ್ರೇನ್‌ಗೆ ಬ್ಲ್ಯಾಕ್‌ ಬಾಕ್ಸ್‌ ನೀಡುವ ಪ್ರಸ್ತಾಪವೇ ಇಲ್ಲ ಎಂದು ತಿಳಿಸಿದ್ದಾರೆ. ಆದರೆ ಕೆನಡಾ, ಫ್ರಾನ್ಸ್‌ ಹಾಗೂ ಅಮೆರಿಕದ ತನಿಖಾಧಿಕಾರಿಗಳಿಗೆ ಇರಾನ್‌ಗೆ ಪ್ರವೇಶಿಸಿ ಬ್ಲ್ಯಾಕ್ ಬಾಕ್ಸ್ ಪರಿಶೀಲನೆ ನಡೆಸಲು ಇರಾನ್ ಅವಕಾಶ ನೀಡಲಿದೆಯೇ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ.

ಉಕ್ರೇನ್‌ನ ವಿಮಾನ ಪತನವಾಗಿ 180 ಜನ ಮೃತಪಟ್ಟ ಕ್ಷಣದಿಂದಲೇ ಇರಾನ್‌ ಮೇಲೆ ಗುಮಾನಿ ಎದ್ದಿತ್ತು. ಆರಂಭದಲ್ಲಿ ತಾಂತ್ರಿಕ ವೈಫಲ್ಯದ ನೆಪ ನೀಡಿದ್ದರು. ಬಳಿಕ ತನ್ನ ಕಣ್ತಪ್ಪಿನಿಂದ ವಿಮಾನ ಪತನವಾಗಿರುವುದನ್ನು ಇರಾನ್ ಒಪ್ಪಿಕೊಂಡಿತ್ತು.

ಆದರೆ ಈಗ ಬ್ಲ್ಯಾಕ್‌ ಬಾಕ್ಸ್‌ ನೀಡಲು ನಿರಾಕರಿಸುತ್ತಿರುವುದು ಇರಾನ್ ಮೇಲೆ ಇನ್ನಷ್ಟು ಗುಮಾನಿಗೆ ಕಾರಣವಾಗುತ್ತಿದೆ. ಕಣ್ತಪ್ಪಿನಿಂದ ವಿಮಾನ ಪತನವಾಗಿದೆಯೇ ಅಥವಾ ಉದ್ದೇಶಪೂರ್ವಕವಾಗಿಯೇ ಹೊಡೆದುರುಳಿಸಲಾಗಿದೆಯೇ ಎನ್ನುವುದು ಈಗ ಉತ್ತರ ಸಿಗದ ಪ್ರಶ್ನೆಯಾಗಿದೆ.

ಬ್ಲ್ಯಾಕ್ ಬಾಕ್ಸ್‌ ನೀಡಲು ಹಿಂದೇಟು ಹಾಕುತ್ತಿರುವುದು ಈ ಗುಮಾನಿಗೆ ಕಾರಣವಾಗಿದೆ. ಒಂದೊಮ್ಮೆ ಬ್ಲ್ಯಾಕ್ ಬಾಕ್ಸ್‌ ನೀಡದಿರಲು ಇರಾನ್ ಒಂದೊಮ್ಮೆ ಹಠ ಹಿಡಿದು ಕುಳಿತರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ ವಿರುದ್ಧ ಇನ್ನಷ್ಟು ನಿರ್ಬಂಧ ಹೆಚ್ಚಾಗುವ ಸಾಧ್ಯತೆ ಇದೆ.

English summary
Apparently reversing a previous decision, Iran currently has no plans to send the black box from a passenger plane downed by Iranian missiles on Jan. 8 to any other country, said local media reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X