ನೇಪಾಳದಲ್ಲಿ ಬಸ್ ಅಪಘಾತ: 9 ಸಾವು, 34 ಮಂದಿಗೆ ಗಂಭೀರ ಗಾಯ
ನೇಪಾಳದ ಬೈತಡಿಯಲ್ಲಿ ಬಸ್ ಅಪಘಾತ ಸಂಭವಿಸಿದ್ದು, ಕನಿಷ್ಠ 9 ಮಂದಿ ಮೃತಪಟ್ಟು, 34 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದಶರಥ್ ಚಂದ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದರ್ಚುಲಾ ಜಿಲ್ಲೆಯ ಗನ್ನಾದಿಂದ ಮಹೇಂದ್ರ ನಗರಕ್ಕೆ ಬಸ್ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯಿಂದ 600 ಮೀಟರ್ ದೂರಹೋಗಿತ್ತು ಎಂದು ಡಿಎಸ್‌ಪಿ ನಾರಾಯಣ್ ಪ್ರಸಾದ್ ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಏಳು ಮಂದಿ ಪುರುಷರು, ಇಬ್ಬರು ಮಹಿಳೆಯರಾಗಿದ್ದರು.












Click it and Unblock the Notifications