ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೈಟ್ ಶಿಫ್ಟ್' ಬದುಕನ್ನು ಕತ್ತಲ ಕೂಪವಾಗಿಸುತ್ತಾ?

By Vanitha
|
Google Oneindia Kannada News

ಲಂಡನ್, ಜುಲೈ, 23 : ನೀವು ಉದ್ಯೋಗದಲ್ಲಿದ್ದೀರಾ? ನಿಮ್ಮ ಸಂಸ್ಥೆಯಲ್ಲಿ ಶಿಫ್ಟ್ ವೈಸ್ ಕೆಲಸ ಮಾಡಬೇಕಾ? ನೀವು ರಾತ್ರಿ ಶಿಫ್ಟ್ ಕೆಲಸ ಮಾಡುತ್ತೀರಾ? ಹಾಗಾದರೆ ಏನಾಗುತ್ತೆ ಅಂತ ಈ ಸುದ್ದಿ ಓದಿ ತಿಳಿದ್ಕೊಳ್ಳಿ..

ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದು ಎಲ್ಲರಿಗೂ ಕೊಂಚ ತ್ರಾಸದಾಯಕವಾದ ಸಂಗತಿ. ಆದರೂ ಸಂಸ್ಥೆಯ ನಿಯಮಗಳಿಗೆ ತಲೆಬಾಗಿ ಕೆಲಸ ನಿರ್ವಹಿಸಲೇಬೇಕಾದ ಅನಿವಾರ್ಯತೆ ನಿಮ್ಮ ಪಾಲಿಗೆ.[ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ!]

Night shifts increases cancer risk: Study in London

ರಾತ್ರಿ ಪಾಳಿ ಕೆಲಸ ಮಾಡುವುದರಿಂದ ಹಾರ್ಮೋನ್‌ ಗಳಲ್ಲಿ ಏರಿಳಿತವಾಗಿ ಸ್ತನ ಕ್ಯಾನ್ಸರ್ ಹಾಗೂ ಇನ್ನಿತರ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

Pompeu Fabra ವಿಶ್ವವಿದ್ಯಾಲಯ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 22 ರಿಂದ 64 ವಯೋಮಾನದ 75 ರಾತ್ರಿ ಪಾಳಿ ಹಾಗೂ 42 ಬೆಳಿಗ್ಗೆ ಪಾಳಿ ಕೆಲಸಗಾರರನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಲೈಂಗಿಕತೆಗೆ ಸಂಬಂಧಿಸಿದ ಈಸ್ಟ್ರೋಜನ್ ಹಾಗೂ ಇನ್ನಿತರ ಹಾರ್ಮೋನ್‌ಗಳಲ್ಲಿ ಆಗಿರುವ ವ್ಯತ್ಯಾಸಗಳು ಬೆಳಕಿಗೆ ಬಂದಿದೆ.[ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣ]

ರಾತ್ರಿ ಕೆಲಸಗಾರರಲ್ಲಿ ಪ್ರೊಸ್ಟೋಜನ್ಸ್ ಮತ್ತು ಆಂಡ್ರೋಜನ್ ಗಳ ಹೆಚ್ಚಳ ಬೆಳಗಿನ ಪಾಳಿ ಕೆಲಸಗಾರರಿಗೆ ಹೋಲಿಸಿದರೆ ರಾತ್ರಿ ಪಾಳಿ ಕೆಲಸಗಾರರಲ್ಲಿ ಬಹಳ ಕಡಿಮೆ ಇರುತ್ತದೆ. ಹಾರ್ಮೋನ್‌ಗಳು ಸರಿಯಾದ ಅವಧಿಯಲ್ಲಿ ಉತ್ಪಾದನೆ ಆಗದಿರುವುದರಿಂದ ಒತ್ತಡಗಳು ಹೆಚ್ಚಾಗುತ್ತದೆ. ಇದರಿಂದ ಕ್ಯಾನ್ಸರ್‌ಗೆ ಸಂಬಂಧಿಸಿದ ಹಾರ್ಮೋನ್‌ಗಳ ಉತ್ಪಾದನೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅಧ್ಯಯನದಿಂದ ದೃಢಪಟ್ಟಿದೆ.

English summary
People who work night shifts may be more at risk of breast or prostate cancer because of hormonal changes. Night workers were found to have significantly higher levels of sex hormones at the wrong time, such as testosterone peaking between 10 a.m. and 2 p.m., rather than between 6 a.m. and 10 a.m.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X