ಸೇನೆ ತಪ್ಪಿನಿಂದಾಗಿ ನೈಜೀರಿಯಾದಲ್ಲಿ 100ಕ್ಕೂ ಹೆಚ್ಚು ನಿರಾಶ್ರಿತರ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಕನೋ, ಜನವರಿ 18 : ನೈಜೀರಿಯಾದಲ್ಲಿ ಬೋಕೋ ಹರಾಮ್ ಉಗ್ರರ ಮೇಲೆ ಬಾಂಬ್ ದಾಳಿ ಮಾಡುವ ಬದಲು ನಿರಾಶ್ರಿತರ ತಾಣದ ಮೇಲೆ ಬಾಂಬ್ ದಾಳಿ ನಡೆಸಿದ್ದರಿಂದಾಗಿ ನೂರಕ್ಕೂ ಹೆಚ್ಚು ನಿರಾಶ್ರಿತರು ಬುಧವಾರ ಸಾವಿಗೀಡಾಗಿದ್ದಾರೆ.

ವಾಯು ಸೇನೆಯ ಈ ಪ್ರಮಾದದಿಂದಾಗಿ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಲ್ಲದೆ, ಹಲವಾರು ಸಹಾಯಕ ಸಿಬ್ಬಂದಿಗಳು ಕೂಡ ಗಾಯಗೊಂಡ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕ್ಯಾಮೆರೂನ್ ಗಡಿಯ ಬಳಿ ರನ್‌ನ ಈಶಾನ್ಯ ಭಾಗದಲ್ಲಿ ಈ ಆಕಸ್ಮಿಕ ಬಾಂಬ್ ದಾಳಿ ನಡೆದಿದೆ ಎಂದು ಮೇಜರ್ ಜನರಲ್ ಲಕ್ಕಿ ಇರಾಬೋರ್ ಖಚಿತಪಡಿಸಿದ್ದಾರೆ. ಇಂಥದೊಂದು ದೊಡ್ಡಮಟ್ಟದ ಪ್ರಮಾದ ಮೊದಲ ಬಾರಿಗೆ ನಡೆದಿದೆ ಎಂದು ಸೇನೆ ಖೇದ ವ್ಯಕ್ತಪಡಿಸಿದೆ.

Nigeria: Air attack error kills nearly 100 aid workers

ನುಸುಳುಕೋರರಿರಬಹುದು ಎಂದು ಅಂದಾಜಿಸಿ ನಿರಾಶ್ರಿತರ ತಾಣದ ಮೇಲೆ ಜೆಟ್ ಪೈಲಟ್ ಬಾಂಬ್ ದಾಳಿ ನಡೆಸಲಾಗಿದೆ. ಬೋಕೋ ಹರಾಮ್ ಉಗ್ರರು ಅಲ್ಲಿ ಸೇರಿರಬಹುದು ಎಂಬ ಗುಪ್ತಚರ ಮಾಹಿತಿಯ ಮೇರೆಗೆ ದಾಳಿ ನಡೆಸಲು ಆದೇಶಿಸಲಾಗಿತ್ತು.

ಗಾಯಾಳುಗಳಲ್ಲಿ ವೈದ್ಯರಿಗೆ ಸಹಾಯಕರಾಗಿ ದುಡಿಯುತ್ತಿದ್ದ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಗೆ ಸೇರಿದ ಸಿಬ್ಬಂದಿಗಳು ಸೇರಿದ್ದಾರೆ. ನೈಜೀರಿಯಾದ ಅಧ್ಯಕ್ಷ ಮುಹಮ್ಮಡು ಬುಹಾರಿ ಅವರು ಈ ದುರ್ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಜನರು ಶಾಂತಿಯಿಂದ ಇರಬೇಕಾಗಿ ವಿನಂತಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An Air Force fighter jet on a mission against Boko Haram extremists in Nigeria has mistakenly bombed a refugee camp, killing nearly 100 refugees and wounding aid workers on Wednesday.
Please Wait while comments are loading...