Video: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಸ್ಫೋಟದ ಮರುದಿನವೇ ನೆರದ ಸಾವಿರಾರು ಜನ!

ಕಾಬೂಲ್, ಆಗಸ್ಟ್ 26: ಅಫ್ಘಾನ್ ರಾಜಧಾನಿ ಕಾಬೂಲ್ ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಣ ಸ್ಫೋಟದ ಘಟನೆ ನಡೆದು 24 ಗಂಟೆ ಕಳೆದಿಲಲ್ಲ. ಅದಾಗಲೇ ಸಾವಿರಾರು ಅಫ್ಘನ್ನರು ದೇಶ ತೊರೆದು ಹೋಗಲು ಮತ್ತದೇ ಏರ್‌ಪೋರ್ಟ್‌ನಲ್ಲಿ ನೆರೆದಿದ್ದಾರೆ.

ಏರ್‌ಪೋರ್ಟ್‌ನತ್ತ ಧಾವಿಸಿ ಬರುತ್ತಿರುವ ಅಫ್ಘನ್ನ ಮಹಿಳೆಯರು ಮತ್ತು ಪುರುಷರು ಎನ್ನದೇ ವಿಮಾನ ನಿಲ್ದಾಣ ಗೇಟ್ ಮತ್ತು ಗೋಡೆ ಏರಿ ಏರ್‌ಪೋರ್ಟ್‌ನೊಳಗೆ ಪ್ರವೇಶಿಸುತ್ತಿದ್ದಾರೆ. ಇದರ ಮಧ್ಯೆ ವಿಮಾನ ನಿಲ್ದಾಣದ ಸುತ್ತಮುತ್ತಲು ಪ್ರದೇಶದಲ್ಲಿ ಗಂಟೆಗಟ್ಟಲೇ ಕೊಳಚೆ ನೀರು ನಿಂತಿರುವುದು ವಿಡಿಯೋಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಗುರುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿ ಮರುದಿನವಾದ ಶುಕ್ರವಾರವೇ ಯುಎಸ್ ಸೇನೆಯು ತನ್ನ ಪ್ರಜೆಗಳ ಸ್ಥಳಾಂತರ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿದೆ. ಆಗಸ್ಟ್ 31ರೊಳಗೆ ಯುಎಸ್ ಸೇನೆಯು ಅಫ್ಘಾನಿಸ್ತಾನದಿಂದ ಜಾಗ ಖಾಲಿ ಮಾಡುವಂತೆ ತಾಲಿಬಾನ್ ಉಗ್ರರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ ಆಗಸ್ಟ್ 31ರೊಳಗೆ ಮತ್ತೊಂದು ಬಾರಿ ಸ್ಫೋಟ ಅಥವಾ ಗುಂಡಿನ ದಾಳಿ ನಡೆಯುವ ಅಪಾಯವಿದೆ ಎಂದು ಯುಎಸ್ ಅನುಮಾನ ವ್ಯಕ್ತಪಡಿಸಿದೆ.

ಕಾಬೂಲ್ ಏರ್‌ಪೋರ್ಟ್‌ನಲ್ಲಿ ಬದಲಾಗದ ಚಿತ್ರಣ

ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್ ಬಳಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟದ ಮರುದಿನವೇ ಪರಿಸ್ಥಿತಿಯ ಮೊದಲಿನಂತೆ ಆಗಿದೆ. ಸಾವಿರಾರು ಸಂಖ್ಯೆ ಜನರು ಏರ್‌ಪೋರ್ಟ್‌ ಗೇಟ್ ಬಳಿ ಸ್ಥಳಾಂತರದ ನಿರೀಕ್ಷೆಯಲ್ಲಿ ಸೇನಾ ವಿಮಾನಗಳತ್ತ ಮುಖ ಮಾಡಿ ನಿಂತಿದ್ದಾರೆ. ಗುರುವಾರ ರಾತ್ರಿ 9 ಗಂಟೆ ವೇಳೆಗೆ ಸಂಭವಿಸಿದ ಎರಡು ಸರಣಿ ಬಾಂಬ್ ಸ್ಫೋಟದ ಕರಿಛಾಯೆ ಮರೆಯಾಗುವ ಹೊತ್ತಿಗೆ ಏರ್‌ಪೋರ್ಟ್‌ನಲ್ಲಿ ನೂರಾರು ಜನರ ನೆತ್ತರು ಹರಿದಿತ್ತು. ಎರಡು ಸ್ಫೋಟದಲ್ಲಿ ಈವರೆಗೂ ಮೃತಪಟ್ಟವರ ಸಂಖ್ಯೆ 100 ಗಡಿ ದಾಟಿದ್ದು, 150ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸ್ಥಳಾಂತರ ಕಾರ್ಯಾಚರಣೆ ನಡೆಸುತ್ತಿದ್ದ 13 ಯುಎಸ್ ಸೇನಾ ಸಿಬ್ಬಂದಿ ಸಹ ಪ್ರಾಣ ಬಿಟ್ಟಿರುವುದು ಗೊತ್ತಾಗಿದೆ.

ಅಫ್ಘಾನಿಸ್ತಾನ ತೊರೆದು ಹೊರಟವರೇ ಉಗ್ರರ ಮುಖ್ಯ ಗುರಿ

ಅಫ್ಘಾನಿಸ್ತಾನ ತೊರೆದು ಹೊರಟವರೇ ಉಗ್ರರ ಮುಖ್ಯ ಗುರಿ

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸುತ್ತಿದ್ದಂತೆ ಇಡೀ ದೇಶದಲ್ಲಿ ನರಕ ಸದೃಶ್ಯ ವಾತಾವರಣ ಸೃಷ್ಟಿಯಾಗಿದೆ. ಇಡೀ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ಕೈವಶವಾಗಿದ್ದು, ವಿಮಾನ ನಿಲ್ದಾಣವೊಂದು ಮಾತ್ರ ಅಮೆರಿಕಾ ಸೇನಾ ಪಡೆಯ ನಿಯಂತ್ರಣದಲ್ಲಿದೆ. ಇದೇ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31ರವರೆಗೂ ಯುಎಸ್ ಸೇನೆಯು ರಕ್ಷಣೆ ಮತ್ತು ಸ್ಥಳಾಂತರ ಕಾರ್ಯಾಚರಣೆ ನಡೆಸುತ್ತದೆ. ಈ ಹಿನ್ನೆಲೆ ತಾಲಿಬಾನ್ ಕ್ರೌರ್ಯಕ್ಕೆ ಬೆದರಿದ ಸಾವಿರಾರು ಅಫ್ಘಾನ್ ಪ್ರಜೆಗಳು ದೇಶ ತೊರೆದು ಹೋಗಲು ಹಾತೊರೆಯುತ್ತಿದ್ದಾರೆ. ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ನೆರೆದಿರುವುದನ್ನು ಸಹಿಸದ ಉಗ್ರರು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಈ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಬೂಲ್ ಸರಣಿ ಸ್ಫೋಟದ ಹಿಂದೆ ಐಸಿಸ್ ಉಗ್ರರ ಕರಿಛಾಯೆ

ಕಾಬೂಲ್ ಸರಣಿ ಸ್ಫೋಟದ ಹಿಂದೆ ಐಸಿಸ್ ಉಗ್ರರ ಕರಿಛಾಯೆ

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಂಭವಿಸಿದ ಸ್ಫೋಟಗಳನ್ನು ತಾಲಿಬಾನ್ "ಭಯೋತ್ಪಾದಕ ಕೃತ್ಯ" ಎಂದು ಕರೆದಿದೆ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಫೋಟದ ಕುರಿತು ಅಮೆರಿಕಾಗೆ ಮಾಹಿತಿ ನೀಡಿದ್ದು, ದಾಳಿ ಹಿಂದೆ ಐಸಿಸ್(ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ) ಉಗ್ರರು ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ತಾಲಿಬಾನ್ ಜಾಗತಿಕ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಲು ಬದ್ಧವಾಗಿದೆ. ಅಫ್ಘಾನಿಸ್ತಾನದ ನೆಲದಲ್ಲಿ ಯಾವುದೇ ಭಯೋತ್ಪಾದಕರಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ," ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

ಅಫ್ಘಾನಿಸ್ತಾನ ಹೇಗಿತ್ತು, ಹೇಗಾಯ್ತು?

ಅಫ್ಘಾನಿಸ್ತಾನ ಹೇಗಿತ್ತು, ಹೇಗಾಯ್ತು?

ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿತು. ಅದಾಗಿ 10 ದಿನದಲ್ಲಿ ಇಡೀ ದೇಶದ ಸಂಪೂರ್ಣ ಚಿತ್ರಣವೇ ಬದಲಾಯಿತು. ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮ ಕ್ರೌರ್ಯ ಪ್ರದರ್ಶಿಸಲು ಶುರು ಮಾಡಿದರು. ತಾಲಿಬಾನ್ ಉಗ್ರರ ಮುಷ್ಠಿಯಲ್ಲಿ ಸಿಲುಕಿದ ಪ್ರಜೆಗಳು ಪ್ರತಿನಿತ್ಯ ಭಯದ ನೆರಳಿನಲ್ಲೇ ಬದುಕುತ್ತಿದ್ದು, ದೇಶ ತೊರೆಯಲು ಹವಣಿಸುತ್ತಿದ್ದಾರೆ. ಇದಕ್ಕೂ ಮೊದಲು 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+