ಚಿತ್ರಗಳಲ್ಲಿ: ನೆಹರೂಗೆ ನಮನ, ಕೋರ್ಟ್ ಗೆ ಸನ್ನಿ ಲಿಯೋನ್

ನವದೆಹಲಿ,

ಮೇ
27:
ದೇಶಾದ್ಯಂತ
ಭಾರತದ
ಮೊದಲ
ಪ್ರಧಾನಿ
ದಿವಂಗತ
ಜವಾಹರ್
ಲಾಲ್
ನೆಹರೂ
ಅವರಿಗೆ
ಗೌರವ
ಸಮರ್ಪಣೆ
ಮಾಡಲಾಯಿತು.
ಕರ್ನಾಟಕ
ಮುಖ್ಯಮಂತ್ರಿ
ಸಿದ್ದರಾಮಯ್ಯ
ನೆಹರೂ
ಪುಣ್ಯತಿಥಿ
ಪ್ರಯುಕ್ತ
ಅವರ
ಭಾವಚಿತ್ರಕ್ಕೆ
ಪುಷ್ಪ
ನಮನ
ಸಲ್ಲಿಸಿದರು.
ನವದೆಹಲಿಯಲ್ಲಿ
ನಡೆದ
ಕಾರ್ಯಕ್ರಮದಲ್ಲಿ
ಕಾಂಗ್ರೆಸ್
ಅಧಿನಾಯಕಿ
ಸೋನಿಯಾ
ಗಾಂಧಿ,
ಮಾಜಿ
ಪ್ರಧಾನಿ
ಮನಮೋಹನ್
ಸಿಂಗ್
ಸೇರಿದಂತೆ
ಹಲವರು
ಭಾಗವಹಿಸಿದ್ದರು.

id="toptextpromo">
id='are-slot-1'
class='oiad
oi-axt
oiadv'>

ಪಾಕಿಸ್ತಾನ

ಮತ್ತು
ಜಿಂಬಾಬ್ವೆ
ನಡುವಿನ
ಏಕದಿನ
ಪಂದ್ಯದಲ್ಲಿ
ಶತಕ
ಸಿಡಿಸಿ
ಸಂಭ್ರಮಿಸಿದ
ಜಿಂಬಾಬ್ವೆಯ
ಎಲ್ಟಿನ್
ಚಿಗುಂಬರಾ.
ಮುಂಬೈ
ನ್ಯಾಯಾಲಯಕ್ಕೆ
ಬುಧವಾರ
ಹಾಜರಾದ
ನಟಿ
ಸನ್ನಿ
ಲಿಯೋನ್.
ಪ್ಯಾರಿಸ್
ನಲ್ಲಿ
ಆರಂಭವಾಗಿರುವ
ಫ್ರೆಂಚ್
ಒಪನ್
ಟೂರ್ನಿಯಲ್ಲಿ
ಸೆರೆನಾ
ವಿಲಿಯಮ್ಸ್,
ಮರಿಯಾ
ಶೇರಪೋವಾ
ಹೋರಾಟದ
ಭಂಗಿ...
ರಾಷ್ಟ್ರ
ಮತ್ತು
ಅಂತಾರಾಷ್ಟ್ರೀಯ
ಮಟ್ಟದ
ಮತ್ತಷ್ಟು
ಸುದ್ದಿಗಳು
ಚಿತ್ರಗಳಲ್ಲಿ...(ಪಿಟಿಐ
ಚಿತ್ರಗಹಳು)

id='are-slot-2'
class='oiad
oi-axt
oiadv'>

ನೆಹರೂಗೆ ಗೌರವ ಸೂಚಿಸಿದ ಸೋನಿಯಾ

ನೆಹರೂಗೆ ಗೌರವ ಸೂಚಿಸಿದ ಸೋನಿಯಾ

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 51 ನೇ ಪುಣ್ಯತಿಥಿ(ನವೆಂಬರ್14, 1889 ರಿಂದ ಮೇ 27, 1964) ನಿಮಿತ್ತ ನವದೆಹಲಿಯ ಶಾಂತಿ ವನದಲ್ಲಿ ನೆಹರೂ ಅವರಿಗೆ ನಮನ ಸಲ್ಲಿಸಿದ ಸೋನಿಯಾ ಗಾಂಧಿ. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರೂ ಸೋನಿಯಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ

ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ

ದಿವಂಗತ ಪ್ರಧಾನಿ ಜವಾಹಾರ್ ಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪ ನಮನ ಸಲ್ಲಿಸಿದರು. ಲಾಟರಿ ಹಗರಣ ಕರ್ನಾಟಕದಲ್ಲಿ ಸುದ್ದಿ ಮಾಡುತ್ತಿದ್ದು ನಿನ್ನೆಯಷ್ಟೆ ಪ್ರಕರಣವನ್ನು ಸಿದ್ದರಾಮಯ್ಯ ಸಿಬಿಐ ಗೆ ಒಪ್ಪಿಸಿದ್ದರು. ಜನರಿಗೆ ಯಾವ ಗೊಂದಲ ಉಳಿಯಬಾರದು ಎಂದು ಇಂಥ ಕ್ರಮ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದರು.

ಯುವ ಕಾಂಗ್ರೆಸ್ ಸಂಘಟನೆ?

ಯುವ ಕಾಂಗ್ರೆಸ್ ಸಂಘಟನೆ?

ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಯುವ ಕಾಂಗ್ರೆಸ್ ಅಧ್ಯಕ್ಷ ರೋಜಿ ಜಾನ್ ಜತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಪಕ್ಷ ಸಂಗಟನೆ ಬಗ್ಗೆ ಎರಡು ತಲೆಮಾರಿನ ನಡುವೆ ಚರ್ಚೆ ನಡೆದಂತೆ ಕಂಡುಬಂತು.

ನ್ಯಾಯಾಲಯಕ್ಕೆ ಹಾಜರಾದ ಸನ್ನಿ ಲಿಯೋನ್

ನ್ಯಾಯಾಲಯಕ್ಕೆ ಹಾಜರಾದ ಸನ್ನಿ ಲಿಯೋನ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಂಬೈನ ನ್ಯಾಯಾಲಯಕ್ಕೆ ಬುಧವಾರ ಹಾಜರಾದರು. ಈಕೆ ಒಡೆತನ ಮತ್ತು ಹೆಸರಿನಲ್ಲಿರುವ ವೆಬ್ ತಾಣವೊಂದರಲ್ಲಿ ಅಶ್ಲೀಲ ದೃಶ್ಯಾವಳಿಗಳು ಮತ್ತು ಫೋಟೋ ಇದೆ. ಇದು ಸಮಾಜದ ಶಾಂತಿ ಭಂಗಕ್ಕೆ ಕಾರಣವಾಗುತ್ತದೆ ಎಂದು ಗೃಹಿಣಿಯೊಬ್ಬರು ಸಲ್ಲಿಸಿದ್ದ ಅರ್ಜಿ ಸಂಬಂಧ ಸನ್ನಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಮದುವೆಗೆ ಹಾಜರಿ ಇತ್ತ ಮಧ್ಯಪ್ರದೇಶ ಸಿಎಂ

ಮದುವೆಗೆ ಹಾಜರಿ ಇತ್ತ ಮಧ್ಯಪ್ರದೇಶ ಸಿಎಂ

ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮಗನ ಮದುವೆ ಸಂಭ್ರಮದಲ್ಲಿ ಭಾಗಿಯಾದರು.

ಹಣಕಾಸು ಸಚಿವರನ್ನು ಬಿಡದ ಬಿಸಿಲ ಧಗೆ

ಹಣಕಾಸು ಸಚಿವರನ್ನು ಬಿಡದ ಬಿಸಿಲ ಧಗೆ

ದೇಶಾದ್ಯಂತ ಬಿಸಿಲಿನ ಪ್ರತಾಪ ಜೋರಾಗುತ್ತಿದ್ದು ಆಂಧ್ರ ಮತ್ತು ತೆಲಂಗಾಣದಲ್ಲಿನ ಸಾವಿರಾರು ಜೀವಗಳು ಬಲಿಯಾಗಿವೆ. ರಾಜಸ್ಥಾನದಲ್ಲಿ 50 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಉಷ್ಣತೆ ದಾಖಲಾಗಿದೆ. ಅಹಮದಾಬಾದ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಎಳೆನೀರು ಸೇವಿಸಿ ದಣಿವಾರಿಸಿಕೊಂಡ ಪರಿ.

ಈ ನಗುವಿನಲ್ಲಿ ಅಂಥಾದ್ದೇನಿದೆ?

ಈ ನಗುವಿನಲ್ಲಿ ಅಂಥಾದ್ದೇನಿದೆ?

ಪ್ಯಾರೀಸ್ ನಲ್ಲಿ ಆರಂಭವಾಗಿರುವ ಫ್ರೆಂಚ್ ಒಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ತಮ್ಮ ರಾಕೆಟ್ ಹಾರಿ ಬಿದ್ದ ಸಂದರ್ಭ ಮುಖ ಕೆಳಗೆ ಹಾಕಿ ನಕ್ಕ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್. ಪಂದ್ಯಾವಳಿಯಲ್ಲಿ ವಿಶ್ವದ ಅಗ್ರಗಣ್ಯ ಆಟಗಾರರು ಪ್ರಶಸ್ತಿಗಾಗಿ ಸೆಣೆಸಲಿದ್ದಾರೆ.

ಶತಕ ಸಂಭ್ರಮ

ಶತಕ ಸಂಭ್ರಮ

ಪಾಕಿಸ್ತಾನ ನೆಲದಲ್ಲಿ ಅನೇಕ ವರ್ಷದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಯುತ್ತಿದೆ. ಶ್ರೀಲಂಕಾ ಆಟಗಾರರ ಮೇಲೆ ಗುಂಡಿನ ದಾಳಿಯಾದ ನಂತರ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆದಿರಲಿಲ್ಲ. ಪಾಕ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಶತಕ ದಾಖಲಿಸಿದ ಎಲ್ಟಿನ್ ಚಿಗುಂಬರಾ ಸಂಭ್ರಮಿಸಿದರು.

ಜಾಕಿ ಚಾನ್ ಮಾತು

ಜಾಕಿ ಚಾನ್ ಮಾತು

ಪ್ರಪಂಚದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ಜಾಕಿ ಚಾನ್ ಬೀಜಿಂಗ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ಮಾತನಾಡಿದರು. ಮಾಧ್ಯಮವೊಂದು ಇತ್ತೀಚೆಗೆ ಜಾಕಿ ಚಾನ್ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ವರದಿ ಮಾಡಿ ಗೊಂದಲಕ್ಕೆ ಕಾರಣವಾಗಿತ್ತು.

ಮರಿಯಾ ಶರಪೋವಾ ಮೋಡಿ

ಮರಿಯಾ ಶರಪೋವಾ ಮೋಡಿ

ಪ್ಯಾರಿಸ್ ಒಪನ್ ಟೆನ್ನಿಸ್ ಪಂದ್ಯಾವಳಿಯ ಎರಡನೇ ರೌಂಡ್ ನಲ್ಲಿ ಚೆಂಡನ್ನು ಹಿಂದಿರುಗಿಸುತ್ತಿರುವ ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ. ಮರಿಯಾ ಶರಪೋವಾ, ವಿಟಾಲಿಯಾ ಡಿಯಾಚಿಂಕೋ ವಿರುದ್ಧ ಸುಲಭ ಜಯ ದಾಖಲಿಸಿದ್ದಾರೆ.

ಸಲ್ಮಾನ್ ಖಾನ್ ಹಾಜರಿ

ಸಲ್ಮಾನ್ ಖಾನ್ ಹಾಜರಿ

ತಮ್ಮ ಅಭಿಮಾನಿಗಳತ್ತ ಕೈ ಬೀಸಿ ಮಂಡಿಯಿಂದ ತೆರಳಿದ ಬಾಲಿವುಡ್ ನಟ ಸಲ್ಮಾನ್ ಖಾನ್. ಗುದ್ದೊಡು ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಸಲ್ಮಾನ್ ಗೆ ವಿದೇಶಕ್ಕೆ ತರಳಲು ಅನುಮತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+