ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಕ್ಸ್ ಸಮ್ಮೇಳನಕ್ಕೆ ಆಗಮಿಸಿದ ಮೋದಿಗೆ ಅದ್ದೂರಿ ಸ್ವಾಗತ

|
Google Oneindia Kannada News

ರಷ್ಯಾ, ಜು. 09: ಬ್ರಿಕ್ಸ್ ಹಾಗೂ ಶಾಂಘೈ ಸಹಕಾರಿ ಸಂಘಟನೆ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಉಫಾಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಮಧ್ಯ ಏಷ್ಯಾದ ಉಜ್ಬೇಕಿಸ್ತಾನ್ ಮತ್ತುಚ ಕಝಕಿಸ್ತಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ವಿದೇಶಿ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದು ರಷ್ಯಾಕ್ಕೆ ತೆರಳಿದರು. ರಷ್ಯಾದಲ್ಲಿ ನಡೆಯಲಿರುವ ಶಾಂಘೈ ಸಹಕಾರಿ ಸಂಘಟನೆ ಸಭೆಯಲ್ಲಿ ರಷ್ಯಾ, ಚೀನಾ, ಕಝಕ್ ಸ್ತಾನ್,ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಿಕಿಸ್ತಾನ್ ಭಾಗವಹಿಸಲಿವೆ. ಈ ಸಾರಿ ಭಾರತವೂ ಗುಂಪಿನ ಸದಸ್ಯತ್ವ ಪಡೆಯುವ ಸಾಧ್ಯತೆಯಿದೆ.[ಮೋದಿ ಸರ್ಕಾರ ಉಗ್ರವಾದ ಮೆಟ್ಟಿ ನಿಂತಿದ್ದು ಹೇಗೆ?]

ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಮೋದಿ ಇದೇ ಸಂದರ್ಭದಲ್ಲಿ ಭೇಟಿ ಮಾಡಲಿದ್ದು ಎರಡು ದೇಶಗಳ ನಡುವಿನ ಸಂಬಂಧದಲ್ಲಿ ಬದಲಾವಣೆ ಕಾಣಬಹುದು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತನೆ ಆರಂಭವಾಗಿದೆ.

ಬ್ರೆಜಿಲ್ ಬ್ರಿಕ್ಸ್ ಶೃಂಗ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಈಗಾಗಲೇ ಸ್ಥಾಪನೆಯಾಗಿದ್ದು, ಸದಸ್ಯ ದೇಶಗಳಿಗೆ ಸ್ಥಳೀಯ ಕರೆನ್ಸಿಯಲ್ಲಿ ಸಾಲ ಸೌಲಭ್ಯ ನೀಡುವ ಬಗ್ಗೆಯೂ ಸಭೆ ಮಾತುಕತೆ ನಡೆಯುವ ಸಾಧ್ಯತೆ ಇದೆ.(ಪಿಟಿಐ ಚಿತ್ರಗಳು)

ನರೇಂದ್ರ ಮೋದಿ ಆಗಮನ

ನರೇಂದ್ರ ಮೋದಿ ಆಗಮನ

ಮೂರು ದಿನಗಳ ರಷ್ಯಾ ಪ್ರವಾಸಕ್ಕಾಗಿ ಉಫಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.

ಕಝಕಿಸ್ತಾನದಿಂದ ಹೊರಟ ಪ್ರಧಾನಿ

ಕಝಕಿಸ್ತಾನದಿಂದ ಹೊರಟ ಪ್ರಧಾನಿ

ರಷ್ಯಾಕ್ಕೆ ತೆರಳುವ ಮುನ್ನ ಕಝಕಿಸ್ತಾನದ ವಿಮಾನ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಧಾನಿಗೆ ಬೀಳ್ಕೊಡುಗೆ.

ಭಾರತೀಯ ಸಂಪ್ರದಾಯವೇ?

ಭಾರತೀಯ ಸಂಪ್ರದಾಯವೇ?

ರಷ್ಯಾಕ್ಕೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ವಿಶೇಷ ಸಂಪ್ರದಾಯದ ಮೂಲಕ ಬರಮಾಡಿಕೊಳ್ಳಲಾಯಿತು.

ದಿಗ್ಗಜರ ಸಮಾಗಮ

ದಿಗ್ಗಜರ ಸಮಾಗಮ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೈ ಕುಲುಕಿ ಸ್ವಾಗತ ಮಾಡಿದ ರಷ್ಯಾ ಅಧ್ಯಕ್ಷ ವಾಡ್ಲಿಮರ್ ಪುಟಿನ್.

ಸಮ್ಮೇಳನಕ್ಕೆ ಆಗಮಿಸಿದ ಮುಖ್ಯಸ್ಥರು

ಸಮ್ಮೇಳನಕ್ಕೆ ಆಗಮಿಸಿದ ಮುಖ್ಯಸ್ಥರು

ಬ್ರಿಕ್ಸ್ ಸಮ್ಮೇಳನಕ್ಕೆ ಹೆಜ್ಜೆ ಹಾಕಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್, ಬ್ರೆಜಿಲ್ ಅಧ್ಯಕ್ಷ ಡುಲ್ಮಾ ರಿಸೆಫ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೊಬ್ ಜುಮಾ.

ದೇಶಗಳ ಭಾಂಧವ್ಯ ವೃದ್ಧಿ

ದೇಶಗಳ ಭಾಂಧವ್ಯ ವೃದ್ಧಿ

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೇರಿದಂತೆ ಹಲವು ದೇಶದ ನಾಯಕರನ್ನು ಭೇಟಿ ಮಾಡಿದ ಮೋದಿ ವಿದೇಶಿ ಸಂಬಂಧಗಳ ಕುರಿತು ಚರ್ಚೆ ನಡೆಸಿದರು.

ನೂತನ ನಾಯಕನ ಜಯದ ಯೋಚನೆ

ನೂತನ ನಾಯಕನ ಜಯದ ಯೋಚನೆ

ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಅಂಜಿಕ್ಯ ರಹಾನೆ ಗುರುವಾರ ಕ್ಯಾಮರಾ ಕಣ್ಣಿಗೆ ಕಂಡು ಬಂದಿದ್ದು ಹೀಗೆ.

ತಂಡಕ್ಕೆ ಮರಳಿದ ಸ್ಪಿನ್ ಮಾಂತ್ರಿಕ

ತಂಡಕ್ಕೆ ಮರಳಿದ ಸ್ಪಿನ್ ಮಾಂತ್ರಿಕ

ವರ್ಷಗಳ ನಂತರ ಏಕದಿನ ಕ್ರಿಕೆಟ್ ಗೆ ಮರಳಿರುವ ಹರ್ಭಜನ್ ಸಿಂಗ್ ಗುರುವಾರ ಹರಾರೆಯಲ್ಲಿ ಅಭ್ಯಾಸ ಮಾಡಿದರು.

ಏನು ಮಾತನಾಡಿತ್ತಿರಬಹುದು?

ಏನು ಮಾತನಾಡಿತ್ತಿರಬಹುದು?

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಕೇಂದ್ರ ಐಟಿ ಸಚಿವ ಹರ್ಷವರ್ಧನ್ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜತೆಯಾಗಿ ಕಾಣಿಸಿಕೊಂಡರು. ಕ್ಪಿಪಣಿ ವಿಜ್ಞಾನಿ ಸಚಿವರಿಗೆ ಏನು ಸಲಹೆ ಕೊಟ್ಟರೋ ಗೊತ್ತಿಲ್ಲ. ಇಸ್ರೋ ಶುಕ್ರವಾರ ಮತ್ತೊಂದು ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡ್ಡಯನ ಮಾಡಲಿದೆ.

ಎಲ್ಲಿಗೆ ಪಯಣ, ಯಾವುದು ದಾರಿ?

ಎಲ್ಲಿಗೆ ಪಯಣ, ಯಾವುದು ದಾರಿ?

ದೇಶದಲ್ಲಿ ಮುಂಗಾರು ಕುಂಠಿತವಾಗಿದ್ದರೂ ಅಲ್ಲಲ್ಲಿ ತನ್ನ ಅಬ್ಬರವನ್ನು ಮುಂದುವರಿಸಿಯೇ ಇದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ತನ್ನ ದ್ವಿಚಕ್ರ ವಾಹನವನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಹರಸಾಹಸ ಪಡುತ್ತಿದ್ದವ ಮಿರ್ಜಾಪುರದಲ್ಲಿ ಕಂಡಿದ್ದು ಹೀಗೆ.

ಪವಿತ್ರ ರಂಜಾನ್ ಬಂತು

ಪವಿತ್ರ ರಂಜಾನ್ ಬಂತು

ದೇಶಾದ್ಯಂತ ರಂಜಾನ್ ಹಬ್ಬಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಉಪವಾಸ ತಿಂಗಳು ಮುಗಿಯುತ್ತ ಬಂದಿದ್ದು ಜುಲೈ 18 ರಂದು ದೇಶಾದ್ಯಂತ ರಂಜಾನ್ ಆಚರಣೆ ಮಾಡಲಾಗುತ್ತದೆ. ಕಾಶ್ಮೀರದಲ್ಲಿ ಪ್ರಾರ್ಥನೆ ನಂತರ ಕಂಡು ಬಂದ ದೃಶ್ಯ.

English summary
News in Pics: After visiting two Central Asian countries, Prime Minister Narendra Modi arrived Russian city of Ufa on Wednesday on a three-day trip during which he will attend the BRICS and Shanghai Cooperation Organisation summits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X