ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಯುದ್ಧದಲ್ಲಿ ಗೆಲುವು ಸಾಧಿಸಿದ ನ್ಯೂಜಿಲೆಂಡ್

|
Google Oneindia Kannada News

ಆಕ್ಲೆಂಡ್, ಜೂನ್ 8: ಕೋವಿಡ್-19 ಪಾಸಿಟಿವ್ ಪ್ರಕರಣಗಳು ಒಂದಂಕಿಗೆ ಇಳಿದಿದೆ. 'ಕೊರೊನಾ ವೈರಸ್ ದೇಶದಿಂದ ಹೊರ ಹಾಕಿದ್ದೇವೆ' ಎಂದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಕಚೇರಿ ತಿಳಿಸಿದೆ.

Recommended Video

ಚಿರಂಜೀವಿಯನ್ನು ನೋಡಿ ಭಾವುಕರಾದ ಯಶ್ | Chiranjeevi Sarja | Yash | | Oneindia Kannada

ಆಕ್ಲೆಂಡ್ ಪ್ರಾದೇಶಿಕ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಐಸೋಲೇಷನ್ ಚಿಕಿತ್ಸೆಯಲ್ಲಿದ್ದ ವ್ಯಕ್ತಿಯನ್ನು ಮನೆಗೆ ಕಳಿಸಲಾಗಿದ್ದು, ಈ ಮೂಲಕ ಯಾವುದೇ ರೋಗದ ಲಕ್ಷಣವುಳ್ಳವರು ಸದ್ಯಕ್ಕೆ ಯಾವುದೇ ಆರೋಗ್ಯ ಕೇಂದ್ರಗಳಲ್ಲಿಲ್ಲ ಎಂಬ ಮಾಹಿತಿ ಹೊರ ಬಂದಿದೆ.

ಫೆಬ್ರವರಿ 28 ರಂದು ನ್ಯೂಜಿಲೆಂಡ್ ನಲ್ಲಿ ಮೊಟ್ಟಮೊದಲ ಕೋವಿಡ್-19 ಪಾಸಿಟಿವ್ ಕೇಸ್ ಪತ್ತೆಯಾಯ್ತು. ಮಾರ್ಚ್ 14 ರ ವೇಳೆಗೆ ಆರು ಪ್ರಕರಣಗಳು ನ್ಯೂಜಿಲೆಂಡ್ ನಲ್ಲಿ ದೃಢಪಟ್ಟಿತ್ತು. ಆಗ ''ನ್ಯೂಜಿಲೆಂಡ್ ಗೆ ಬರುವ ಜನರು ಕಡ್ಡಾಯವಾಗಿ ಎರಡು ವಾರಗಳ ಕಾಲ ಸೆಲ್ಫ್-ಐಸೋಲೇಟ್ ಆಗಬೇಕು'' ಎಂಬ ನಿಯಮವನ್ನು ಪ್ರಧಾನಿ ಜಾರಿಗೆ ತಂದರು. ಮಾರ್ಚ್ 20 ರಂದು ವಿದೇಶಿಯರ ಪ್ರವೇಶಕ್ಕೆ ನ್ಯೂಜಿಲೆಂಡ್ ನಿರ್ಬಂಧ ಹೇರಲಾಗಿತ್ತು

ಮಾರ್ಚ್ 25 ರಿಂದ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ಬಂತು. ಇದರ ಅನುಸಾರ, ಅಗತ್ಯ ವಿಚಾರಕ್ಕೆ ಹೊರತುಪಡಿಸಿದಂತೆ ಮನೆಯಿಂದ ಯಾರೂ ಹೊರಗೆ ಕಾಲಿಡುವಂತಿರಲಿಲ್ಲ. 5 ಮಿಲಿಯನ್ ಜನಸಂಖ್ಯೆ ಹೊಂದಿರುವ ನ್ಯೂಜಿಲ್ಯಾಂಡ್ ನಲ್ಲಿ ಇಲ್ಲಿಯವರೆಗೂ 123,920 ಜನರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. 1504 ಪ್ರಕರಣಗಳ ಪೈಕಿ 22 ಮಂದಿ ಮೃತಪಟ್ಟಿದ್ದಾರೆ. ಕಳೆದ 17 ದಿನಗಳಲ್ಲಿ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ.

ಶಾಲೆ, ಸಾರಿಗೆ, ಸಂಚಾರ ಮುಕ್ತ

ಶಾಲೆ, ಸಾರಿಗೆ, ಸಂಚಾರ ಮುಕ್ತ

ನ್ಯೂಜಿಲೆಂಡ್ ನಲ್ಲಿ ವಿಧಿಸಲಾಗಿದ್ದ ಲೆವಲ್ 1 ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದ್ದು, ಶಾಲೆ, ಕಚೇರಿ, ಸಾರ್ವಜನಿಕರ ಗುಂಪು ಗೂಡುವಿಕೆ, ಪ್ರಾದೇಶಿಕ ವಿಮಾನಯಾನ ಎಲ್ಲವೂ ಮುಕ್ತವಾಗಲಿದೆ. ಆದರೆ, ವಿದೇಶಿ ವಿಮಾನಯಾನ, ಅಂತಾರಾಷ್ಟ್ರೀಯ ಗಡಿ ಬಂದ್ ಆಗಿರಲಿದೆ.

ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖ

ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖ

ಸೋಂಕಿತ ಪ್ರಕರಣಗಳ ಸಂಖ್ಯೆ ಕಮ್ಮಿಯಾಗುತ್ತಿರುವುದರಿಂದ ಲಾಕ್ ಡೌನ್ ನಿಯಮಗಳು ನ್ಯೂಜಿಲ್ಯಾಂಡ್ ನಲ್ಲಿ ಸಡಿಲಗೊಂಡಿವೆ. ವ್ಯಾಪಾರ-ವಹಿವಾಟು, ಕಾರ್ಖಾನೆ, ಪ್ರವಾಸೋದ್ಯಮ ಎಲ್ಲವೂ ಆರಂಭಗೊಂಡಿದೆ. ಆದರೆ, ಎಲ್ಲರಿಗೂ ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಲಾಗಿದೆ. ಕೊವಿಡ್ 19 ಪರೀಕ್ಷೆ ಮಾಡಿ ನೆಗಟಿವ್ ಎಂಬ ವರದಿ ಬಂದಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಅಡ್ಡಾಡಬಹುದಾಗಿದೆ.

'ವರ್ಕ್ ಫ್ರಮ್ ಹೋಮ್' ಆಯ್ಕೆ ಬಳಸಿ ಗೆದ್ದ ಕಿವೀಸ್

'ವರ್ಕ್ ಫ್ರಮ್ ಹೋಮ್' ಆಯ್ಕೆ ಬಳಸಿ ಗೆದ್ದ ಕಿವೀಸ್

ಕಳೆದ ಎರಡು ತಿಂಗಳಿನಿಂದ 'ವರ್ಕ್ ಫ್ರಮ್ ಹೋಮ್' ಮಂತ್ರ ಜಪಿಸುತ್ತಿರುವ ನ್ಯೂಜಿಲೆಂಡ್ ಈಗ ಹೊಸ ಮಾದರಿ ಕಾರ್ಯ ನಿರ್ವಹಣೆಗೆ ಹೊಂದಿಕೊಂಡಿದೆ. ಆದರೆ, ಶಾಲೆ, ಜಿಮ್, ಲೈಬ್ರರಿ, ಮ್ಯೂಸಿಯಂಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ. ಮದುವೆ ಮತ್ತು ಅಂತ್ಯ ಸಂಸ್ಕಾರದ ಸಮಯದಲ್ಲಿ 10 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂಬ ನಿಯಮಗಳಿವೆ. ಅತಿ ಹೆಚ್ಚು ಪರೀಕ್ಷೆ ಹಾಗೂ ಕಠಿಣ ಲಾಕ್ಡೌನ್ ನಿಯಮಗಳ ಮೂಲಕ ಯುದ್ಧದಲ್ಲಿ ಗೆಲುವು ಸಾಧಿಸಲಾಗಿದೆ.

ಮುಖ್ಯವಾಗಿದ್ದ ಮೂರನೇ ಹಂತದ ಲಾಕ್ ಡೌನ್

ಮುಖ್ಯವಾಗಿದ್ದ ಮೂರನೇ ಹಂತದ ಲಾಕ್ ಡೌನ್

ಮಾರ್ಚ್ 23 ರಂದು ನ್ಯೂಜಿಲೆಂಡ್ ಮೂರನೇ ಹಂತದ ಲಾಕ್ ಡೌನ್ ಘೋಷಣೆಯಾಗಿತ್ತು. ಈ ಲಾಕ್ಡೌನ್ ಅವಧಿಯಲ್ಲಿ ಕಠಿಣ ಕ್ರಮ, ಸಾರ್ವಜನಿಕರ ನೆರವಿನಿಂದ ಸೋಂಕು ನಿಯಂತ್ರಣ ಸಾಧ್ಯವಾಯಿತು. ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲಾ ರೀತಿಯ ವ್ಯಾಪಾರ-ವಹಿವಾಟು ಬಂದ್ ಆಗಿತ್ತು. ಶಾಲಾ-ಕಾಲೇಜು, ಸಾರ್ವಜನಿಕ ಕಾರ್ಯಕ್ರಮಗಳು, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿತ್ತು. ನೌಕರರು ಮನೆಯಿಂದಲೇ ಕೆಲಸ ಮಾಡಿದ್ದರು.

English summary
New Zealand is now declared as'Covid-19 free'.New Zealand has no active diagnosed cases of Covid-19 for the first time since 28 February, health officials say.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X