• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನೊಂದಿಗೆ ಶಾಲೆಗೆ ಸೇರಿದ ನೇಪಾಳಿ ಮಹಿಳೆ

|
Google Oneindia Kannada News

ಕಠ್ಮಂಡು ಆಗಸ್ಟ್ 19: ಕಲಿಕೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಅನ್ನೋದಕ್ಕೆ ನೇಪಾಳದ ಈ ಮಹಿಳೆ ಸಾಕ್ಷಿಯಾಗಿದ್ದಾರೆ. ನೇಪಾಳಿದ ಎರಡು ಮಕ್ಕಳ ತಾಯಿ ಪಾರ್ವತಿ ಸುನಾರ್ ಅವರು ತಮ್ಮ ಮಗನೊಂದಿಗೆ ಶಾಲೆಗೆ ಸೇರಿದ್ದಾರೆ. ಸುನಾರ್ 15ನೇ ವಯಸ್ಸಿನಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗಿರಲಿಲ್ಲ. ಆಗ ಅವರು ತಮಗಿಂತ ಏಳು ವರ್ಷ ಹಿರಿಯ ವ್ಯಕ್ತಿಯೊಂದಿಗೆ ಮದುವೆಯಾದರು. 16 ನೇ ವಯಸ್ಸಿನಲ್ಲಿ ಅವರು ಮೊದಲ ಮಗುವನ್ನು ಹೊಂದಿದರು. ಸದ್ಯ ಸುನಾರ್‌ ಅವರಿಗೆ 27 ವರ್ಷ. ಶಿಕ್ಷಣ ಮುಂದುವರೆಸುವ ಆಸೆ ಹೊಂದಿದ ಸುನಾರ್ ಅವರು ತಮ್ಮ ಮಗನೊಂದಿಗೆ ಏಳನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ.

ಸುನಾರ್ ಅವರು ಪುನರ್ಬಾಸ್ ಹಳ್ಳಿಯವರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ನನ್ನ ಶಾಲೆಯನ್ನು ತೊರೆಯಬಾರದಿತ್ತು ಎಂದು ನನಗೆ ಈಗ ಅನಿಸುತ್ತಿದೆ. ನಾನು ಕಲಿಕೆಯನ್ನು ಆನಂದಿಸುತ್ತೇನೆ ಮತ್ತು ನನ್ನ ಸ್ವಂತ ಮಕ್ಕಳಂತೆ ಇರುವ ಸಹಪಾಠಿಗಳೊಂದಿಗೆ ಶಾಲೆಗೆ ಹಾಜರಾಗಲು ಹೆಮ್ಮೆಪಡುತ್ತೇನೆ" ಎಂದು ತಿಳಿಸಿದರು. 29 ಮಿಲಿಯನ್ ದೇಶದಲ್ಲಿ ಕೇವಲ 57% ಮಹಿಳೆಯರು ಸಾಕ್ಷರರಾಗಿದ್ದಾರೆ. 27 ವರ್ಷದ ಸುನಾರ್ ಅವರು ಮನೆಯ ಜವಬ್ದಾರಿಯೊಂದಿಗೆ ಸಾಕಷ್ಟು ಸಾಕ್ಷರರಾಗಲು ಆಶಿಸಿದ್ದಾರೆ ಎಂದು ಹೇಳಿದರು.

ತಾಯಿ ವೈದ್ಯರಾಗಬೇಕೆಂಬ ಕನಸು ಇದೆ- ರೇಶಮ್

ತಾಯಿ ವೈದ್ಯರಾಗಬೇಕೆಂಬ ಕನಸು ಇದೆ- ರೇಶಮ್

"ಅಮ್ಮನೊಂದಿಗೆ ಶಾಲೆಗೆ ಹೋಗುವುದು ನನಗೆ ಸಂತೋಷವಾಗಿದೆ. ಜೊತೆಗೆ ಅವಳೊಂದಿಗೆ ಊಟದ ವಿರಾಮವನ್ನು ಕಳೆಯುತ್ತೇನೆ" ಎಂದು ಅವರ ಮಗ ರೇಶಮ್(11) ಹೇಳುತ್ತಾರೆ. ಹತ್ತಿರದ ಇನ್ಸ್ಟಿಟ್ಯೂಟ್‌ನಲ್ಲಿ ಅವರು ಓದುವ ಕಂಪ್ಯೂಟರ್ ತರಗತಿಗಳಿಗೂ ಬೈಸಿಕಲ್‌ನಲ್ಲಿ ಅವರು ಸವಾರಿ ಮಾಡುತ್ತಾರೆಂದು ಮಗ ರೇಶಮ್ ಹೇಳಿದರು.

"ನಾವು ಶಾಲೆಗೆ ಹೋಗುವಾಗ ನಾವು ಹರಟೆ ಹೊಡೆಯುತ್ತೇವೆ, ನಾವು ಇಬ್ಬರು ಮಾತನಾಡುವ ಮೂಲಕ ಬೇರೆ ಭಾಷೆಯನ್ನೂ ಕಲಿಯುತ್ತೇವೆ" ಎಂದು ಅವರು ಹೇಳಿದರು. ಜೊತೆಗೆ ಅವರ ತಾಯಿ ವೈದ್ಯರಾಗಬಹುದೆಂದು ಆಶಿಸಿದರು. ಹಿಂದೆ ಸುನಾರ್ ಅವರಿಗೆ ಕಲಿಯಲು ಅವಕಾಶ ಸಿಗಲಿಲ್ಲ. ಆದರೀಗ ಕಲಿಯಲು ಉತ್ಸುಕರಾಗಿದ್ದರು ಎಂದು ಗ್ರಾಮದ ಶಾಲೆಯ ಪ್ರಾಂಶುಪಾಲರಾದ ಜೀವನ್ ಜ್ಯೋತಿ ಹೇಳಿದರು.

ಸಮಸ್ಯೆಗಳ ಸುಳಿಯಲ್ಲಿ ಜೀವನ

ಸಮಸ್ಯೆಗಳ ಸುಳಿಯಲ್ಲಿ ಜೀವನ

ಸುನಾರ್ ಅವರು ಎರಡು ಕೋಣೆಯ ಮನೆಯನ್ನು ಹೊಂದಿದ್ದಾರೆ. ಇದರಲ್ಲಿ ಸುನಾರ್ ಮಕ್ಕಳಾದ ರೇಶಮ್ ಮತ್ತು ಅರ್ಜುನ್, ಅವರ ಅತ್ತೆಯೊಂದಿಗೆ ವಾಸವಿದ್ದಾರೆ. ಅವರ ಮನೆಯ ಅಂಗಳದಲ್ಲಿ ಮೇಕೆಗಳನ್ನು ಸಾಕಿದ್ದಾರೆ. ಅವರ ಮನೆಗೆ ಶೌಚಾಲಯದ ಕೊರತೆಯಿದೆ, ಆದ್ದರಿಂದ ಕುಟುಂಬವು ಅದರ ಬದಲಾಗಿ ಹತ್ತಿರದ ಸಾರ್ವಜನಿಕ ಜಮೀನನ್ನು ಬಳಸುತ್ತದೆ.

ತಮ್ಮ ಮನೆಯ ಹೊರಗಿನ ಕೈಪಂಪ್‌ನಿಂದ ನೀರನ್ನು ಎಳೆದು ಸ್ನಾನ ಮಾಡುತ್ತಾರೆ. ಅದರ ಸುತ್ತಲಿನ ಹಸಿರಿನ ಹೊಲಗಳಲ್ಲಿ ಕೆಲಸ ಮಾಡುವುದು ಮತ್ತು ಹುಟ್ಟುಹಬ್ಬಕ್ಕೆ ಕೇಕ್ ತಯಾರಿಸುವುದು ಇವರ ಕೆಲಸ. ಸುನಾರ್ ಅವರ ಪತಿ ತನ್ನ ಕುಟುಂಬವನ್ನು ಪೋಷಿಸುವ ಸಲುವಾಗಿ ದಕ್ಷಿಣ ಭಾರತದ ನಗರವಾದ ಚೆನ್ನೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ.

ಜಾತಿ ಕಲಿಕೆಗೆ ಮುಳುವಾಗಿಲ್ಲ ಎಂದ ಸುನಾರ್

ಜಾತಿ ಕಲಿಕೆಗೆ ಮುಳುವಾಗಿಲ್ಲ ಎಂದ ಸುನಾರ್

ಅವರು ದಲಿತ ಸಮುದಾಯಕ್ಕೆ ಸೇರಿದವರು. ಹಿಂದೆ ಅಸ್ಪೃಶ್ಯರು ಎಂದು ಕರೆಯಲ್ಪಟ್ಟಿದ್ದರು ಎಂದು ಸುನಾರ್ ಹೇಳಿದರು. ನನಗೆ ಅಥವಾ ನನ್ನ ಕುಟುಂಬದ ವಿರುದ್ಧ ಯಾರೂ ತಾರತಮ್ಯ ಮಾಡುವುದಿಲ್ಲ ಎಂದು ಅವರು ಹೇಳುತ್ತಾರೆ. ಸರಳವಾದ ಅಕ್ಕಿ ಮತ್ತು ಬೇಳೆಯಿಂದ ತಯಾರಿಸಿದ ಊಟ ನಿತ್ಯ ಮಾಡುತ್ತಾರೆ. ಸುನರ್ ತನ್ನ ಮಗನೊಂದಿಗೆ 20 ನಿಮಿಷಗಳ ನಡಿಗೆಯಲ್ಲಿ ಶಾಲೆಗೆ ಹೋಗುತ್ತಾರೆ. ಈ ವೇಳೆ ಶಾಲಾ ಸಮವಸ್ತ್ರವನ್ನು ಧರಿಸುತ್ತಾರೆ.

ಸಹಪಾಠಿಗಳು ಅವರನ್ನು ಪ್ರೀತಿಯಿಂದ ದೀದಿ ಎಂದು ಕರೆಯುತ್ತಾರೆ. ಈ ನೇಪಾಳಿ ಪದವನ್ನು ಅಕ್ಕನಿಗೆ ಬಳಸಲಾಗುತ್ತದೆ. 'ಸುನಾರ್ ಜೊತೆ ಒಂದೇ ತರಗತಿಯಲ್ಲಿ ಇರುವುದು ಖುಷಿ ಕೊಟ್ಟಿದೆ. ನಾನು ಅವಳಿಗೆ ಅಧ್ಯಯನದಲ್ಲಿ ಸಹಾಯ ಮಾಡುತ್ತೇನೆ ಮತ್ತು ಅವಳು ನನಗೆ ಸಹಾಯ ಮಾಡುತ್ತಾಳೆ' ಎಂದು ಆಕೆಯ ಸಹಪಾಠಿಗಳಲ್ಲಿ ಒಬ್ಬರಾದ 14 ವರ್ಷ ವಯಸ್ಸಿನ ಬಿಜಯ್ ಬಿ.ಕೆ. ಹೇಳಿದರು.

ಸುನಾರ್ ಅವರ ಪ್ರಯತ್ನಗಳು ನೇಪಾಳದ ತಮ್ಮ ಹಳ್ಳಿಯಲ್ಲಿ ಕಲಿಕೆಯ ಆಸಕ್ತಿ ಹೊಂದಿದ ಮಹಿಳೆಯರಿಗೆ ಕಲಿಯಲು ಪ್ರೇರೇಪಿಸುತ್ತಿವೆ. ಇಲ್ಲಿ ಮಹಿಳೆಯರು ಇನ್ನೂ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಬಾಲ್ಯ ವಿವಾಹವು ಕಾನೂನುಬಾಹಿರವಾಗಿದ್ದರೂ ಸಹ ವ್ಯಾಪಕವಾಗಿದೆ.

"ಅವಳು ಒಳ್ಳೆಯ ಕೆಲಸ ಮಾಡುತ್ತಿದ್ದಾಳೆ. ಇತರರು ಅವಳನ್ನು ಅನುಸರಿಸಬೇಕು ಮತ್ತು ಶಾಲೆಗೆ ಹೋಗಬೇಕು ಎಂದು ನಾನು ಭಾವಿಸುತ್ತೇನೆ" ಎಂದು ಸಂಬಂಧಿಕರಲ್ಲದಿದ್ದರೂ ಶಾಲೆಯ 10 ನೇ ತರಗತಿಯಲ್ಲಿ ಓದುತ್ತಿರುವ ಆಕೆಯ ನೆರೆಹೊರೆಯವರಲ್ಲಿ ಒಬ್ಬರಾದ ಶ್ರುತಿ ಸುನರ್ ಹೇಳಿದರು.

ಬಡತನದ ಕಾರಣಗಳಿಂದ ಗೈರಾಗುವ ಮಕ್ಕಳು

ಬಡತನದ ಕಾರಣಗಳಿಂದ ಗೈರಾಗುವ ಮಕ್ಕಳು

ಪ್ರಾಥಮಿಕ ಶಿಕ್ಷಣದಲ್ಲಿ ಅಥವಾ 1 ರಿಂದ 8 ನೇ ತರಗತಿಗಳಲ್ಲಿ ಹುಡುಗಿಯರ ದಾಖಲಾತಿ 94.4% ಎಂದು ಅಧಿಕೃತ ಅಂಕಿಅಂಶಗಳು ತೋರಿಸುತ್ತವೆ. ಆದರೆ ಸಮುದಾಯ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಥಾಪಾ ಅವರು ಪಠ್ಯ-ಪುಸ್ತಕಗಳ ಕೊರತೆಯಿಂದ ಬಡತನದ ಕಾರಣಗಳಿಂದ ಅರ್ಧದಷ್ಟು ಮಕ್ಕಳು ಶಾಲೆಯನ್ನು ತೊರೆದಿದ್ದಾರೆ ಎಂದು ಹೇಳಿದರು.

"ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯಗಳಂತಹ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಹೀಗಾಗಿ ಶೌಚಾಲಯಗಳಿಲ್ಲದ ಕಾರಣ ಹೆಚ್ಚಿನ ಹುಡುಗಿಯರು ಶಾಲೆ ಬಿಡುತ್ತಾರೆ" ಎಂದು ಥಾಪಾ ಹೇಳಿದ್ದಾರೆ. ಆದರೆ ತನ್ನ ಅಧ್ಯಯನಕ್ಕೆ ಮರಳಲು ಮನೆಗೆಲಸದ ಕೆಲಸವನ್ನು ತ್ಯಜಿಸಿದ ಸುನರ್, 12 ನೇ ತರಗತಿಯನ್ನು ಮುಗಿಸಲು ನಿರ್ಧರಿಸಿದ್ದಾಳೆ. ಅನೂಕೂಲ ಸಿಕ್ಕರೆ ಮುಂದೆ ಓದುವುದಾಗಿ ತಿಳಿಸಿದ್ದಾರೆ. ಏನಾ ಆಗಲಿ ಇವರಲ್ಲಿರುವ ಕಲಿಕೆ ಮೇಲಿನ ಆಸಕ್ತಿಯನ್ನು ಜನ ಮೆಚ್ಚಿಕೊಂಡಿದ್ದಾರೆ.

English summary
A Nepali mother of two, Parwati Sunar finds herself attending the same school as her son after returning to an education system she fled at the age of 15. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X