Nepal Election: ನೇಪಾಳ ನೆಲದಲ್ಲಿ ಚುನಾವಣೆಗೆ ಡೇಟ್ ಫಿಕ್ಸ್, ಹಂಗಾಮಿ ಸರ್ಕಾರದಿಂದ ಮಹತ್ವದ ನಿರ್ಧಾರ?

ಯಾವುದೇ ಒಂದು ದೇಶದಲ್ಲಿ ಭ್ರಷ್ಟಾಚಾರ & ಅನ್ಯಾಯ ಹೆಚ್ಚಾದರೆ ಪರಿಸ್ಥಿತಿ ಹೇಗೆ ಇರಲಿದೆ? ಅಂತಾ ಇದೀಗ ನೇಪಾಳ ದೇಶ ತಾಜಾ ಉದಾಹರಣೆ ಆಗಿದೆ. ನೇಪಾಳದಲ್ಲಿ ಶುರುವಾಗಿದ್ದ ಹೋರಾಟ ಭಾರಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದು, ಹತ್ತಾರು ಜೀವಗಳು ಬಲಿಯಾಗಲು ಕಾರಣವಾಗಿದೆ ಎಂಬ ಆರೋಪದ ನಡುವೆಯೇ ಇದೀಗ ಹೊಸ ಮನ್ವಂತರ ಶುರುವಾಗಿದೆ. ಅಂದಹಾಗೆ, ನೇಪಾಳದ ನೆಲದಲ್ಲಿ ಚುನಾವಣೆಗೆ ಡೇಟ್ ಫಿಕ್ಸ್ ಆಗಿದ್ದು, ಹಂಗಾಮಿ ಸರ್ಕಾರದಿಂದ ಮಹತ್ವದ ನಿರ್ಧಾರ?

ಭಾರತದ ನೆರೆಯ ದೇಶ ನೇಪಾಳ ಒದ್ದಾಡಿ ಹೋಗಿತ್ತು, ಕಳೆದ ಕೆಲವು ದಿನಗಳಿಂದ ನೇಪಾಳ ದೇಶ ಕೊತ ಕೊತ ಕುದ್ದು ಹೋಗಿತ್ತು. ಆದರೆ ಈಗ ಎಲ್ಲಾ ತಣ್ಣಗಾಗಿ ಹೋಗಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ನೇಪಾಳದ ಯುವಕರು & ಯುವತಿಯರು ಇದೀಗ ರಾಜಕೀಯ ಗೆಲುವು ಕಂಡಿದ್ದಾರೆ. ಸುಶೀಲ ಕರ್ಕಿ ನೇಪಾಳ ಹಂಗಾಮಿ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಈ ಮೂಲಕ ನೇಪಾಳದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಸುದ್ದಿ ಇದೀಗ ಸಂಚಲನ ಸೃಷ್ಟಿಸಿದೆ.

Nepal Will Face New Election On This Date

ನೇಪಾಳ ಸಂಸತ್ ಚುನಾವಣೆ ಫಿಕ್ಸ್

ಹೌದು, ಇದೀಗ ನೇಪಾಳ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಅಂದ್ರೆ ಸಂಸತ್‌ಗೆ ಚುನಾವಣೆ ನಡೆಸಿ ಹೊಸ ಜನಪ್ರತಿನಿಧಿ ಹಾಗೂ ಸರ್ಕಾರ ಆಯ್ಕೆ ಮಾಡಲು ಸಿದ್ಧತೆ ನಡೆಸಲಾಗಿದೆ. 2026 ಮಾರ್ಚ್ 5 ನೇಪಾಳ ಚುನಾವಣೆಗೆ ಡೇಟ್ ಫಿಕ್ಸ್ ಆಗಿದೆ. ಹಲವು ತಿಕ್ಕಾಟದ ನಂತರ ಇದೀಗ ತಣ್ಣಗಾಗಿರುವ ಇದೇ ನೇಪಾಳ ನೆಲದಲ್ಲಿ ಹೊಸ ಸರ್ಕಾರ ಆಯ್ಕೆ ಮಾಡಲು ಯುವ ಸಮೂಹ ಸಿದ್ಧವಾಗಿದೆ. ಆದರೆ ಅದಕ್ಕೂ ಮೊದಲು ಮತ್ತೆ ಹಿಂಸಾಚಾರ ಭುಗಿಲೇಳುತ್ತಾ? ಅನ್ನೋ ಚಿಂತೆ ಇದೀಗ ಶುರುವಾಗಿದೆ.

ಭವಿಷ್ಯದಲ್ಲಿ ಎಲ್ಲವೂ ಬದಲಾಗುತ್ತಾ?

ನೇಪಾಳ ಸರ್ಕಾರವು ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್‌ ಸೇರಿ 26 ದೊಡ್ಡ ದೊಡ್ಡ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್ ಬ್ಯಾನ್ ಮಾಡಿತ್ತು. ಈ ಸುದ್ದಿ ತಿಳಿದ ಲಕ್ಷಾಂತರ ಯುವತಿ & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿತ್ತು. ಆದ್ರೆ ಸೋಷಿಯಲ್ ಮೀಡಿಯಾ ವಿಚಾರಕ್ಕೆ ಪ್ರತಿಭಟನೆ ಮಾಡಿಲ್ಲ, ಭ್ರಷ್ಟಾಚಾರ ವಿರುದ್ಧ ಹೋರಾಟ ಅಂತಾ ಖುದ್ದಾಗಿ ನೇಪಾಳ ಯುವ ಸಮುದಾಯ ಹೇಳಿತ್ತು. ಇದೀಗ ಎಲ್ಲವೂ ತಣ್ಣಗಾಗಿದ್ದು, ಮುಂದಿನ ಬೆಳವಣಿಗೆ ಬಗ್ಗೆ ಈಗ ಸಾಕಷ್ಟು ಕುತೂಹಲ ಕೆರಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+