Gen-Z ಹೋರಾಟ ಮತ್ತೆ ಶುರು, ಬಿತ್ತು.. ಬಿತ್ತು.. ಮತ್ತೆ ನೇಪಾಳ ನೆಮ್ಮದಿಗೆ ಬೆಂಕಿ ಬಿತ್ತು...
ಭಾರತದ ನೆರೆಯ ದೇಶ ಹಾಗೂ ಜಗತ್ತಿನ ಪ್ರಮುಖ ಹಿಂದೂ ರಾಷ್ಟ್ರದಲ್ಲಿ ಇದೀಗ ಮತ್ತೆ ಹಿಂಸೆ ಶುರುವಾಗುವ ಆತಂಕ ಆವರಿಸಿದೆ. ಭಾರತದ ಮಿತ್ರರಾಷ್ಟ್ರ ನೇಪಾಳ ನೆಲದಲ್ಲಿ ಕೆಲವು ದಿನಗಳ ಹಿಂದಷ್ಟೇ ಭೀಕರವಾಗಿ ಪ್ರತಿಭಟನೆ ನಡೆದಿತ್ತು, ಈ ಹೋರಾಟದಲ್ಲಿ ರಕ್ತ ಹರಿದಿತ್ತು. ಅಲ್ಲದೆ ಈ ಹೋರಾಟದಲ್ಲಿ ಹೊಸ ತಲೆಮಾರಿನ Gen-Z ಹೋರಾಟಗಾರರು ಎಂಟ್ರಿ ಕೊಟ್ಟು, ನೇಪಾಳದಲ್ಲಿ ಭಾರಿ ದೊಡ್ಡ ಕ್ರಾಂತಿ ಮಾಡಿದ್ದರು. ಹಾಗೂ ಪ್ರಧಾನಿಯನ್ನೇ ಬದಲಾಯಿಸುವಲ್ಲಿ ಯಶಸ್ವಿಯೂ ಆಗಿದ್ದರು. ಇಷ್ಟಾದರೂ ನೇಪಾಳ ಸೈಲೆಂಟ್ ಆಗಿಲ್ಲ, ಬದಲಾಗಿ ಈಗ ಮತ್ತೆ ವೈಲೆಂಟ್ ಆಗಿದೆ!
ಹೌದು, ನೇಪಾಳ ನೆಲದಲ್ಲಿ ಇದೀಗ ಮತ್ತೆ ಬೃಹತ್ ಹೋರಾಟ ಶುರುವಾಗಿಬಿಟ್ಟಿದೆ. ಇನ್ನೊಮ್ಮೆ Gen-Z ಹೋರಾಟಗಾರರು ನೇಪಾಳ ದೇಶದಲ್ಲಿ ಬೀದಿಗೆ ಇಳಿದು ಹೋರಾಟ ಆರಂಭಿಸಲು ಎಲ್ಲಾ ರೀತಿಯ ಸಿದ್ಧತೆ ಆರಂಭಿಸಿದ್ದಾರೆ. ಈ ರೀತಿಯಾಗಿ ಹೋರಾಟ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ದಿಢೀರ್ ಭಯದ ವಾತಾವರಣ ಕೂಡ ನೇಪಾಳ ನೆಲದಲ್ಲಿ ನಿರ್ಮಾಣ ಆಗಿತ್ತು. ಇಷ್ಟೆಲ್ಲಾ ಭಾರಿ ಸೂಕ್ಷ್ಮ ವಾತಾವರಣ ನಿರ್ಮಾಣ ಆಗಿರುವ ಬೆನ್ನಲ್ಲೇ ನೇಪಾಳ ಸರ್ಕಾರ ಕೂಡ ಇದೀಗ ಕಠಿಣ & ಸೂಕ್ತ ಕ್ರಮ ಜಾರಿಗೊಳಿಸಿದೆ.

ನೇಪಾಳ ನೆಮ್ಮದಿಗೆ ಮತ್ತೆ ಬೆಂಕಿ...
ಅಂದಹಾಗೆ ಕೆಲವು ದಿನಗಳ ಹಿಂದಷ್ಟೇ ಬೃಹತ್ ಹೋರಾಟ ಮಾಡಿ, ಪ್ರಧಾನಿ ವಿರುದ್ಧ ಭರ್ಜರಿ ಭ್ರಷ್ಟಾಚಾರ ಆರೋಪ ಮಾಡಿ ಗೆದ್ದು ಬೀಗಿದ್ದ Gen-Z ಹೋರಾಟಗಾರರು ಈಗ ಮತ್ತೊಮ್ಮೆ ತಮ್ಮ ಆರ್ಭಟ ತೋರಿಸಲು ಸಜ್ಜಾಗಿದ್ದಾರೆ. ಈ ಬಾರಿ ಮತ್ತೊಮ್ಮೆ ಸರ್ಕಾರ ಬದಲಾಯಿಸುವ ಮುನ್ಸೂಚನೆ ಕೂಡ ಸಿಕ್ಕ ತಕ್ಷಣ ಅಲ್ಲಿನ ಆಡಳಿತ ಫುಲ್ ಅಲರ್ಟ್ ಆಗಿದ್ದು, ಕರ್ಫ್ಯೂ ಜಾರಿಗೊಳಿಸಿದೆ. ಹೀಗೆ ನೇಪಾಳದ ಬೀದಿ ಬೀದಿಗಳಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಈ ಮೂಲಕ Gen-Z ಹೋರಾಟ ಹತ್ತಿಕ್ಕಲು ಎಲ್ಲಾ ರೀತಿಯ ಪ್ರಯತ್ನ ಸಾಗಿದೆ.
ಭಾರತ ಕೂಡ ಗಮನಿಸುತ್ತಾ ಇದೆ...
ಒಟ್ನಲ್ಲಿ ಭಾರತದ ನೆರೆಯ ದೇಶದಲ್ಲಿ ಮತ್ತೊಮ್ಮೆ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಭಾರತ ಕೂಡ ಈ ವಿಚಾರದಲ್ಲಿ ಅಲರ್ಟ್ ಆಗಿದೆ. ಯಾಕಂದ್ರೆ ಒಂದು ಕಡೆ ಚೀನಾ ಕೂಡ ನೇಪಾಳ ದೇಶದಲ್ಲಿ ತಮ್ಮ ಪರವಾಗಿ ಇರುವ ನಾಯಕನನ್ನು ಕೂರಿಸಬೇಕು ಎಂದು ಪ್ರಯತ್ನ ಮಾಡುತ್ತಿದೆ. ಪರಿಸ್ಥಿತಿ ಹೀಗೆ ಇದ್ದಾಗ ಅಲರ್ಟ್ ಆಗಿರುವ ಭಾರತ ಕೂಡ ಪ್ರತಿಕ್ಷಣದ ಮಾಹಿತಿ ಗಮನಿಸುತ್ತಿದೆ. ಹಿಂಸಾಚಾರದ ಬೆಂಕಿ ಹೊತ್ತಿಕೊಳ್ಳದಂತೆ ನೇಪಾಳ ಸರ್ಕಾರ ಕೂಡ ಭಾರಿ ಭದ್ರತೆ ಒದಗಿಸಿದೆ. ಏಷ್ಯಾದಲ್ಲಿ ಮತ್ತೆ ಮತ್ತೆ ಈ ರೀತಿಯ ಹೋರಾಟಗಳು ನಡೆಯುತ್ತಿರುವುದು ಜಗತ್ತಿನ ಗಮನ ಸೆಳೆಯುತ್ತಿದೆ...
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ











Click it and Unblock the Notifications