25,00,00,00,000 ರೂಪಾಯಿ ನಷ್ಟದಲ್ಲಿ ನರಳುತ್ತಿರುವ ಭಾರತದ ನೆರೆಯ ದೇಶ... Nepal News
ನೇಪಾಳ ನೆಲದಲ್ಲಿ ಹೊತ್ತಿಕೊಂಡ ಬೆಂಕಿಯ ಕಿಡಿ ನಿಧಾನವಾಗಿ ತಣ್ಣಗಾಗಿದ್ದರೂ, ಇದೀಗ ಅಲ್ಲಿರುವ ಜನರಿಗೆ ಮಾತ್ರ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ನೇಪಾಳ ದೇಶಕ್ಕೆ ಭಾರಿ ದೊಡ್ಡ ಪೆಟ್ಟು ಕೊಟ್ಟ Gen Z ಹೋರಾಟ ಇದೀಗ ಒಂದಷ್ಟು ಹಿಡಿತಕ್ಕೆ ಸಿಕ್ಕಿದೆ ನಿಜ, ಆದರೆ ಸತತ ಹೋರಾಟ & ಹಿಂಸಾಚಾರ ಪರಿಣಾಮ ಇಡೀ ನೇಪಾಳ ಸುಟ್ಟು ಭಸ್ಮವಾಗುವ ಹಂತಕ್ಕೆ ತಲುಪಿದೆ. ಅದರಲ್ಲೂ ಪ್ರವಾಸೋದ್ಯಮ ನಂಬಿ ಬದುಕುತ್ತಿರುವ ನೇಪಾಳದಲ್ಲಿ ಒಂದೇ ಒಂದು ಹೋರಾಟ ಎಷ್ಟು ಸಾವಿರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದೆ ಗೊತ್ತಾ?
ಸೋಷಿಯಲ್ ಮೀಡಿಯಾ ಇಲ್ಲದೇ ಬದುಕಲ್ಲ ಎನ್ನುವಷ್ಟು ಯುವತಿ, ಯುವಕರು ಈಗ ಜಗತ್ತಿನ ಮೂಲೆ ಮೂಲೆಯಲ್ಲೂ ಅಂಟಿಕೊಂಡಿದ್ದಾರೆ. ಒಂದು ಹೊತ್ತು ಊಟ ಕಡಿಮೆ ಆದರೂ ಪರವಾಗಿಲ್ಲ ಆದರೆ 1 ಜಿಬಿ ನೆಟ್ ಕಡಿಮೆ ಆಗಬಾರದು ಅನ್ನೋದು ಈಗಿನ ಯುವತಿ & ಯುವಕರ ಆಗ್ರಹ. ಹೀಗೆ ಸೋಷಿಯಲ್ ಮೀಡಿಯಾ ಮೂಲಕ ರೀಲ್ಸ್ ಮಾಡಿ ತಿಂಗಳಿಗೆ 10 ಲಕ್ಷ ರೂಪಾಯಿ & 20 ಲಕ್ಷ ರೂಪಾಯಿ ಹಣ ಗಳಿಸುವ ಸೋಷಿಯಲ್ ಮೀಡಿಯಾ ಸ್ಟಾರ್ಸ್ ಇದ್ದಾರೆ. ಆದ್ರೆ ನೇಪಾಳ ದೇಶದಲ್ಲಿ ಇದೇ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ್ದ ವಿಚಾರವೇ ದೊಡ್ಡ ಕ್ರಾಂತಿಯ ಕಿಡಿ ಹೊತ್ತಿಸಿತ್ತು!

25,00,00,00,000 ರೂಪಾಯಿ ನಷ್ಟ...
ನೇಪಾಳದಲ್ಲಿ ಶುರುವಾಗಿದ್ದ ಹೋರಾಟದ ಬೆಂಕಿ ಇಡೀ ದೇಶವನ್ನೇ ಸುಟ್ಟು ಹಾಕಿತ್ತು. ದಿಢೀರ್ ನೇಪಾಳ ಸರ್ಕಾರ ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್ ಸೇರಿ 26 ದೊಡ್ಡ ದೊಡ್ಡ ಸೋಷಿಯಲ್ ಮೀಡಿಯಾ ಆಪ್ಸ್ ಬ್ಯಾನ್ ಮಾಡಿತ್ತು. ಈ ಸುದ್ದಿ ತಿಳಿದ ಲಕ್ಷಾಂತರ ನೇಪಾಳ ಯುವತಿ & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರು ಎನ್ನಲಾಗಿತ್ತು. ಆದರೆ ಇದು ಸೋಷಿಯಲ್ ಮೀಡಿಯಾಗಳ ಪರವಾಗಿ ಅಲ್ಲ ಭ್ರಷ್ಟಾಚಾರ ವಿರುದ್ಧದ ಹೋರಾಟ ಅಂತಾ ಖುದ್ದಾಗಿ ನೇಪಾಳ ಯುವ ಸಮುದಾಯ ಹೇಳಿತ್ತು. ಜೊತೆಗೆ 20ಕ್ಕೂ ಹೆಚ್ಚು ಜನ ಮೃತಪಟ್ಟು, 400ಕ್ಕೂ ಹೆಚ್ಚು ಜನರಿಗೆ ಈ ಗಲಾಟೆಯ ವೇಳೆ ಗಂಭೀರವಾಗಿ ಗಾಯಗಳಾಗಿವೆ ಎಂದು ಆರೋಪ ಮಾಡಲಾಗಿತ್ತು. ಇದರ ಜೊತೆಗೆ 25,00,00,00,000 ರೂಪಾಯಿ ನಷ್ಟ ಕೂಡ ಆಗಿದೆಯಂತೆ...
ಭಾರಿ ದೊಡ್ಡ ಪ್ರಮಾಣದ ನಷ್ಟ
ನೇಪಾಳ ನೆಲದಲ್ಲಿ ಪ್ರತಿಭಟನೆ ನಡೆಸುವಾಗಲೇ ಹೋಟೆಲ್ ಕಟ್ಟಡಗಳು, ಸಂಸತ್ ಭವನ ಸೇರಿದಂತೆ ಹಲವು ಕಡೆ ಬೆಂಕಿ ಹಚ್ಚಲಾಗಿತ್ತು. ಪ್ರಮುಖವಾಗಿ ಹೋಟೆಲ್ ಇಂಡಸ್ಟ್ರಿ ಈ ಹೋರಾಟದಲ್ಲಿ ಭಾರಿ ದೊಡ್ಡ ನಷ್ಟ ಅನುಭವಿಸಿದ್ದು, ಸುಮಾರು 25,00,00,00,000 ರೂಪಾಯಿ ನಷ್ಟ ಆಗಿದೆ ಎನ್ನಲಾಗಿದೆ. ಮತ್ತೊಂದು ಕಡೆ ನೇಪಾಳ ದೇಶದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ನಿರೀಕ್ಷೆ ಮೂಡಿದ್ದು, ಈಗ ಸೇನೆಯ ಹಿಡಿತಕ್ಕೆ ದೇಶ ಸಿಕ್ಕಿದೆ.












Click it and Unblock the Notifications