ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಕಿಕ್ಕೇರಲಿದೆ ಗಾಂಜಾ ಮತ್ತು; ಏನಿದರ ಗಮ್ಮತ್ತು?

|
Google Oneindia Kannada News

ಕಠ್ಮಂಡು, ಏ. 29: ನೇಪಾಳದಲ್ಲಿ ಮರುವಾನ (Marijuana) ಅಥವಾ ಗಾಂಜಾ ಬೆಳೆಗೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯಲಾಗುತ್ತಿದೆ. ಈ ನಿಟ್ಟಿನಲ್ಲಿ ನಿಷೇಧ ತೆರವುಗೊಳಿಸಿ ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ. ವಿಶ್ವದ ಅತ್ಯಂತ ಅಪಾಯಕಾರಿ ಮಾದಕವಸ್ತುಗಳ ಪಟ್ಟಿಯಿಂದ ವಿಶ್ವಸಂಸ್ಥೆಯು ಗಾಂಜಾವನ್ನು ಹೊರತೆಗೆದಿದೆ. ಇದಕ್ಕಾಗಿ ನೇಪಾಳ ದೊಡ್ಡ ಲಾಬಿ ಮಾಡಿ ಯಶಸ್ವಿಯೂ ಆಯಿತು.

ಒಂದು ಕಾಲದಲ್ಲಿ ನೇಪಾಳಕ್ಕೆ ಅಂತಾರಾಷ್ಟ್ರೀಯ ನಕ್ಷೆಯಲ್ಲಿ ಒಂದು ಸ್ಥಾನ ಸಿಗಲು ಇದೇ ಗಾಂಜಾ ಕಾರಣವಾಗಿತ್ತು. ಅಮೆರಿಕದ ಹಿಪ್ಪಿ ಪ್ರವಾಸಿಗರಿಗೆ ನೇಪಾಳ ಸ್ವರ್ಗವಾಗಿತ್ತು. ಈಗ ಅದೇ ಗಮ್ಮತ್ತಿನ ಸ್ಥಿತಿಗೆ ಮರಳುವ ತವಕದಲ್ಲಿ ನೇಪಾಳ ಇದೆ.

ಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹ

ನೇಪಾಳದ ಕಠ್ಮಂಡುವಿನಲ್ಲಿ ಫ್ರೀಕ್ ಸ್ಟ್ರೀಟ್ ಹೆಸರಿನ ಒಂದು ಬೀದಿ ಇದೆ. ಅಲ್ಲಿ ಡ್ರಗ್ಸ್ ವ್ಯಸನಿಗಳಾದ ವಿದೇಶಿಗರು ದಂಡು ದಂಡಾಗಿ ಬಂದು ಅನೇಕ ದಿನಗಳ ಕಾಲ ಗಾಂಜಾ ಮತ್ತಿನಲ್ಲಿ ತೇಲುತ್ತಿದ್ದ ದೃಶ್ಯ ಬಹಳ ಸಾಮಾನ್ಯವಾಗಿತ್ತು. ಅದು ಎಪ್ಪತ್ತರ ದಶಕದವರೆಗೂ ನಡೆದಿತ್ತು. ಅಮೆರಿಕ ದೇಶ ಮರುವಾನ ಎಂದು ಕರೆಯುವ ಗಾಂಜಾ ಸೇರಿದಂತೆ ಹಲವು ವಸ್ತುಗಳನ್ನ ಮಾದಕ ವಸ್ತುಗಳ ಗುಂಪಿಗೆ ಸೇರಿಸಿ ನಿಷೇಧಿಸಿತು. ಬೇರೆ ಜಾಗತಿಕ ದೇಶಗಳೂ ಗಾಂಜಾವನ್ನು ನಿಷೇಧಿಸಿದವು. ಪರಿಣಾಮವಾಗಿ 1973ರಲ್ಲಿ ನೇಪಾಳದಲ್ಲಿ ಗಾಂಜಾ ಬೆಳೆ ನಿಂತುಹೋಯಿತು.

 ನೇಪಾಳ ಸಂಸ್ಕೃತಿಯ ಭಾಗ ಈ ಗಾಂಜಾ:

ನೇಪಾಳ ಸಂಸ್ಕೃತಿಯ ಭಾಗ ಈ ಗಾಂಜಾ:

ವಿಶ್ವದ ಏಕೈಕ ಹಿಂದೂ ದೇಶ ಎನಿಸಿರುವ ನೇಪಾಳದಲ್ಲಿ ಶಿವನ ಆರಾಧನೆ ಪ್ರಮುಖ. ಶಿವ ಭಂಗಿ ಸೇದುತ್ತಾರೆಂದು ಪುರಾಣದಲ್ಲಿ ಬರೆಯಲಾಗಿದೆ ಎಂದು ಕೆಲವರು ಹೇಳುತ್ತಾರೆ. ಕಠ್ಮಂಡುವಿನಲ್ಲಿರುವ ಪಶುಪತಿನಾಥ ದೇವಸ್ಥಾನದ ಆವರಣದಲ್ಲಿ ಭಕ್ತರು ಗಾಂಜಾ ಭಂಗಿ ಸೇದುತ್ತಾರೆ. ಇದು ಗಾಂಜಾ ನಿಷೇಧ ಇದ್ದಾಗಲೂ ಇದೊಂದು ಸ್ಥಳದಲ್ಲಿ ಅವಕಾಶ ಇತ್ತು.

ಬೆಂಗಳೂರಲ್ಲಿ ಪ್ರಾರಂಭವಾಗಲಿದೆ ಭಾರತದ ಮೊದಲ 'ಗಾಂಜಾ ಆಸ್ಪತ್ರೆ'ಬೆಂಗಳೂರಲ್ಲಿ ಪ್ರಾರಂಭವಾಗಲಿದೆ ಭಾರತದ ಮೊದಲ 'ಗಾಂಜಾ ಆಸ್ಪತ್ರೆ'

 ಔಷಧೀಯ ಗುಣ:

ಔಷಧೀಯ ಗುಣ:

ಹಾಗೆಯೇ ಆಯುರ್ವೇದದಲ್ಲೂ ಗಾಂಜಾ ಪ್ರಸ್ತಾಪ ಇದ್ದು, ಅದರ ಔಷಧೀಯ ಗುಣಗಳನ್ನ ತಿಳಿಸಲಾಗಿದೆ. ಕೆಲ ಗಂಭೀರ ಕಾಯಿಲೆಗೆ ನೀಡುವ ಆಯುರ್ವೇದ ಔಷಧದ ಹೂರಣದಲ್ಲಿ ಗಾಂಜಾ ಎಲೆಗಳ ರಸ ಕೂಡ ಇರುತ್ತದೆ. ಹೆಚ್‌ಐವಿ ರೋಗಿಗಳ ಚಿಕಿತ್ಸೆಗೂ ಗಾಂಜಾ ಬಳಕೆ ಆಗುತ್ತದೆ.

 ಸಿರಿವಂತ ದೇಶಗಳ ತಾಳಕ್ಕೆ ನಾವ್ಯಾಕೆ ಕುಣಿಯಬೇಕು?

ಸಿರಿವಂತ ದೇಶಗಳ ತಾಳಕ್ಕೆ ನಾವ್ಯಾಕೆ ಕುಣಿಯಬೇಕು?

ನೇಪಾಳದಲ್ಲಿ ಈಗ ಗಾಂಜಾ ನಿಷೇಧ ತೆರವಿಗೆ ದೊಡ್ಡ ಬೆಂಬಲ ಸೃಷ್ಟಿಯಾಗಿದೆ. ಅಮೆರಿಕದಂಥ ಪ್ರಭಾವಿ ದೇಶಗಳು ನಿಷೇಧ ಮಾಡಿತೆಂದು ನಾವು ಗಾಂಜಾ ಕೈಬಿಟ್ಟೆವು. ನಮ್ಮ ಆದಾಯದ ಮೂಲವೊಂದು ನಿಂತುಹೋಯಿತು. ಇನ್ಮುಂದೆ ನಾವ್ಯಾಕೆ ಈ ದೇಶಗಳ ತಾಳಕ್ಕೆ ಕುಣಿಯಬೇಕು ಎಂದು ಇಲ್ಲಿನವರು ವಾದಿಸುತ್ತಾರೆ.

ನಮ್ಮಂಥ ಬಡದೇಶವು ಗಾಂಜಾವನ್ನು ಒಂದು ಮಾದಕವಸ್ತು ಎಂದು ಯಾಕೆ ಪರಿಗಣಿಸಬೇಕು. ನಮ್ಮ ಜನರಿಗೆ ಶಿಕ್ಷೆಯಾಗುತ್ತಿದೆ. ಕಳ್ಳಸಾಗಾಣಿಕೆಯಿಂದಾಗಿ ಭ್ರಷ್ಟಾಚಾರವೂ ಹೆಚ್ಚುತ್ತಿದೆ ಎಂದು ನೇಪಾಳದ ಗೃಹ ಸಚಿವರ ಬಿರೋಧ ಕಾಠಿವಾಡ ಹೇಳುತ್ತಾರೆ. ಗಾಂಜಾ ನಿಷೇಧ ತೆರವಿಗೆ ನೇಪಾಳದಲ್ಲಿ ಮಸೂದೆ ಮಂಡನೆ ಮಾಡಿದ್ದು ಇವರೆಯೇ. ಹಾಗೆಯೇ ಸರಕಾರವು ಗಾಂಜಾ ಬೆಳೆಯ ಔಷಧೀಯ ಗುಣಗಳನ್ನ ಅಧ್ಯಯನ ಮಾಡುವ ಯೋಜನೆ ಆರಂಭಿಸಿದೆ.

 ನೇಪಾಳಕ್ಕೆ ಒಳ್ಳೆಯ ಆದಾಯ ಮೂಲ:

ನೇಪಾಳಕ್ಕೆ ಒಳ್ಳೆಯ ಆದಾಯ ಮೂಲ:

ದಶಕಗಳ ಹಿಂದೆ ನೇಪಾಳದ ಬಹಳಷ್ಟು ಪ್ರದೇಶಗಳಲ್ಲಿ ರೈತರು ಗಾಂಜಾ ಬೆಳೆ ಬೆಳೆಯುತ್ತಿದ್ದರು. ಗಾಂಜಾ ರಫ್ತಿನಿಂದ ಸಾಕಷ್ಟು ಆದಾಯ ಬರುತ್ತಿತ್ತು. ಜೊತೆಗೆ ವಿದೇಶೀ ಪ್ರವಾಸಿಗರು ಗಾಂಜಾ ಮತ್ತಿಗಾಗಿ ಇಲ್ಲಿಗೆ ಬರುತ್ತಿದ್ದರಿಂದ ಪ್ರವಾಸೋದ್ಯಮ ಕೂಡ ಕಣ್ಕುಕ್ಕುವಂತಿತ್ತು. ಈಗ ಮತ್ತೆ ಅದೇ ಸ್ಥಿತಿಗೆ ಮರಳುವ ನಿರೀಕ್ಷೆಯಲ್ಲಿ ನೇಪಾಳ ಇದೆ.

ಅಮೆರಿಕದ ಕೆಲ ರಾಜ್ಯಗಳಲ್ಲಿ ಈಗಾಗಲೇ ಗಾಂಜಾವನ್ನು ನಿಷೇಧಿತ ಡ್ರಗ್ಸ್ ಪಟ್ಟಿಯಿಂದ ಹೊರತರಲಾಗಿದೆ. ವಿಶ್ವಸಂಸ್ಥೆ ಕೂಡ ಗಾಂಜಾವನ್ನು ಅಪಾಯಕಾರಿ ಡ್ರಗ್ಸ್ ಅಲ್ಲ ಎಂದು ಹೇಳಿದೆ. ಹೀಗಾಗಿ, ಆರ್ಥಿಕವಾಗಿ ಕುಗ್ಗಿಹೋಗಿರುವ ನೇಪಾಳಕ್ಕೆ ಒಳ್ಳೆಯ ಆದಾಯ ಮೂಲವೊಂದು ಮತ್ತೆ ನೆಲೆನಿಂತಾಗಿದೆ.

English summary
Nepal's marijuana ban could soon be up in smoke, as lawmakers mull a return to the liberal drug policies that once made the Himalayan republic a popular pit stop on the overland "hippie trail".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X