• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!

By Prasad
|

ಕಠ್ಮಂಡು, ಮೇ. 14 : ಅಮ್ಮಂದಿರಿರುವ ಮಕ್ಕಳೆಲ್ಲ ಜಾಗತಿಕವಾಗಿ ಮೊನ್ನೆ ಭಾನುವಾರ ಅಮ್ಮನ ದಿನ ಆಚರಿಸಿಕೊಂಡರು. ತಮಿಳುನಾಡಿನ 'ಅಮ್ಮ'ನ 'ಕಂದಮ್ಮ'ಗಳಿಗೆ ಜಯಲಲಿತಾ ಜೈಲುಶಿಕ್ಷೆಯಿಂದ ಮುಕ್ತಳಾದ ದಿನವೇ ಅಮ್ಮನ ದಿನ. ಆದರೆ, ಭಾರೀ ಪ್ರಕೃತಿ ವೈರುಧ್ಯಗಳನ್ನು ಎದುರಿಸಿ ಜನಿಸಿದ ಈ ಗಂಡು ಮಗುವಿಗೆ ಮೇ 13ರ ಬುಧವಾರವೇ ಮದರ್ಸ್ ಡೇ.

ಎಲ್ಲಕ್ಕಿಂತ ಹೆಚ್ಚಾಗಿ, ತನ್ನ ಮಗುವಿಗಾಗಿ ಬದುಕುವ ಆಸೆಯನ್ನು ಹಿಡಿದಿಟ್ಟುಕೊಂಡು, ಸಾಹಸ ಮಾಡಿ ಕಟ್ಟಡದ ಅವಶೇಷಗಳ ಅಡಿಯಿಂದ ತಾನೇ ಹೋರಾಡಿ ಹೊರಬಂದ ಅಮ್ಮನಿಗೊಂದು ಭಕ್ತಿಪೂರ್ವಕ ಪ್ರಣಾಮ. ಹೌದು, ನೇಪಾಳದಲ್ಲಿ ಮೊದಲನೇ ಬಾರಿ ಸಂಭವಿಸಿದ ಭೂಕಂಪದಲ್ಲಿ ಕಟ್ಟಡದಡಿ ಸಿಲುಕಿದ್ದ 28 ವರ್ಷದ ಡೊಲ್ಮಾ ತಮಂಗ್ ಈ ಸಾಹಸ ಮೆರೆದ ತಾಯಿ.

ಮಗು ಜಗದ ಇರುವನ್ನು ಅರಿತುಕೊಳ್ಳಲು ಆರಂಭಿಸಿದ ನಂತರ, ಮಡಿಲಲ್ಲಿ ಕೂಡಿಸಿಕೊಂಡು ತಾನು ಮೆರೆದ ಸಾಹಸವನ್ನು ಬಿಡಿಬಿಡಿಯಾಗಿ ತಮಾಂಗ್ ಹೇಳುತ್ತಿದ್ದರೆ ಮಗುವಿಗೆ ರೋಮಾಂಚನವಾಗದೆ ಇದ್ದೀತಾ? [ಕಠ್ಮಂಡುವಿನಲ್ಲಿ ನಾಲ್ಕು ತಿಂಗಳ ಮಗುವಿನ ರಕ್ಷಣೆ]

ಆಗಿದ್ದೇನೆಂದರೆ, ಏಪ್ರಿಲ್ 25ರಂದು ನೇಪಾಳದಲ್ಲಿ 7.8 ಪ್ರಮಾಣದಷ್ಟು ಸಂಭವಿಸಿದ ಭೀಕರ ಭೂಕಂಪದ ಸಂದರ್ಭದಲ್ಲಿ ಡೊಲ್ಮಾ ತಮಂಗ್ ತುಂಬು ಗರ್ಭಿಣಿ. ಅಂದು ಆಕೆ ವಾಸವಾಗಿದ್ದ ಮನೆಯೂ ಧರಾಶಾಯಿಯಾಗಿತ್ತು. ಅದರಡಿ ತಮಾಂಗ್ ಸಿಲುಕಿದ್ದಳು, ಹೊಟ್ಟೆಯಲ್ಲಿದ್ದ ತನ್ನ ಮಗುವಿನ ಸಮೇತ.

ತಮಾಂಗ್ ತೀವ್ರವಾಗಿ ಗಾಯಗೊಂಡಿದ್ದಳು ಮತ್ತು ಇತರರ ಸಹಾಯ ಹೇಗೆ ಪಡೆಯಬೇಕೆಂಬ ಚಿಂತೆಯಲ್ಲಿದ್ದಳು. ಆದರೆ, ಬದುಕುವ ಆಸೆಯನ್ನು ಮಾತ್ರ ಬಿಟ್ಟಿರಲಿಲ್ಲ.

"ನನಗೆ ತೀವ್ರವಾಗಿ ಗಾಯಗಳಾಗಿದ್ದವು. ನಾನು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದೆ. ನನಗೆ ನನ್ನ ಆರೋಗ್ಯದ ಬಗ್ಗೆ ಎಳ್ಳಷ್ಟೂ ಚಿಂತೆಯಿರಲಿಲ್ಲ. ಆದರೆ ಹೊಟ್ಟೆಯಲ್ಲಿದ್ದ ನನ್ನ ಮಗುವಿನ ಆರೋಗ್ಯದ ಬಗ್ಗೆ ತೀವ್ರ ಕಳವಳಗೊಂಡಿದ್ದೆ" ಎಂದು ಬಿಬಿಸಿಗೆ ತಮಾಂಗ್ ತನ್ನ ಕಥೆಯನ್ನು ಬಿಚ್ಚಿಟ್ಟಿದ್ದಾಳೆ.

"ಭೂಕಂಪದಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡೆ, ಮನೆಮಠವೂ ಹೋಯಿತು. ತಾತ್ಕಾಲಿಕ ಜೋಪಡಿಯಲ್ಲಿ ಬದುಕುತ್ತಿದ್ದೆ. ಆದರೆ ಈ ನನ್ನ ಮಿರಾಕಲ್ ಕಂದಮ್ಮ ಎಲ್ಲ ನೋವುಗಳನ್ನು ಮರೆಯುವಂತೆ ಮಾಡಿದೆ. ಆರೋಗ್ಯಕರವಾಗಿ ಜನಿಸಿದ್ದು ನಮ್ಮ ಕುಟುಂಬಕ್ಕೆ ಮರುಜನ್ಮ ಸಿಕ್ಕಂತಾಗಿದೆ" ಎಂದು ತಮಾಂಗ್ ಸಂತಸ ಹಂಚಿಕೊಂಡಿದ್ದಾಳೆ.

ಮತ್ತೊಂದು ಘಟನೆಯಲ್ಲಿ, ಭೂಕಂಪ ಸಂಭವಿಸುವ ಕೆಲವೇ ಗಂಟೆಗಳ ಮೊದಲು ರಂಜಿತಾ ಶ್ರೇಷ್ಠಾ ಎಂಬ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಭೂಕಂಪ ಸಂಭವಿಸಿದ ಎರಡು ದಿನಗಳ ನಂತರ ಅವಶೇಷಗಳಡಿ ಸಿಲುಕಿದ್ದ ನಾಲ್ಕು ತಿಂಗಳ ಮಗುವನ್ನು ಯೋಧರು ಯಶಸ್ವಿಯಾಗಿ ಪಾರು ಮಾಡಿದ್ದರು.

ಈ ಭೀಕರ ಭೂಕಂಪದಲ್ಲಿ ಎಷ್ಟೋ ಜೀವಗಳು ಬಲಿಯಾಗಿವೆ, ಎಷ್ಟೋ ದುರಾದೃಷ್ಟವಂತರು ಬದುಕಿಯೂ ಸತ್ತಂತಾಗಿದ್ದಾರೆ. ಆದರೆ, ಇಂಥ ಕಂದಮ್ಮಗಳು ಈ ದುರಂತದ ನಡುವೆಯೂ ಬದುಕಲು ಆಶಾಭಾವನೆ ಮೂಡಿಸುತ್ತಿವೆ.

English summary
A brave mother, who had dug herself out of rubble when earthquake happened on April 25 in Nepal, has given birth to healthy baby boy on May 15, Wednesday. Mother was severely injured, but did not lose fighting spirit. Yes, miracles do happen on earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X