ಉಕ್ರೇನ್ ಬಳಿ ಸಾವಿರಾರು ಕಮಾಂಡೋಗಳನ್ನು ನಿಯೋಜಿಸಲಿದೆ ನ್ಯಾಟೋ

ಉಕ್ರೇನ್ ಬಳಿ ಸಾವಿರಾರು ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ನ್ಯಾಟೋ ಹೇಳಿದೆ. ಹಾಗೆಯೇ ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಿದೆ.

ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾಗೆ ಹಲವು ನಿರ್ಬಂಧಗಳನ್ನು ವಿಧಿಸಲು ನ್ಯಾಟೋ ನಿರ್ಧರಿಸಿದೆ. ಐರೋಪ್ಯ ಒಕ್ಕೂಟದ ಜೊತೆ ಈ ಸಂಬಂಧ ಮಾತುಕತೆ ನಡೆಸಿರುವ ನ್ಯಾಟೋ, ರಷ್ಯಾಗೆ ಹಲವು ವಿಧದ ವ್ಯಾಪಾರ ಹಾಗೂ ಆರ್ಥಿಕ ದಿಗ್ಬಂಧನ ಹೇರಲು ನಿರ್ಧರಿಸಿದೆ.

ಒಂದು ವೇಳೆ ರಷ್ಯಾ ದೇಶವು ತನ್ನ ಆಕ್ರಮಣಕಾರಿ ಪ್ರವೃತ್ತಿಯನ್ನು ಮುಂದುವರೆಸಿದರೆ ನ್ಯಾಟೋ ಕೈಕಟ್ಟಿ ಕೂರೋದಿಲ್ಲ ಎಂದು ಎಚ್ಚರಿಸಿದೆ. ನಮ್ಮಲ್ಲಿ ನೂರಕ್ಕೂ ಹೆಚ್ಚು ಯುದ್ಧ ವಿಮಾನಗಳಿವೆ, ಉತ್ತರ ಹಾಗೂ ಮೆಡಿಟರೇನಿಯನ್ ಸಮುದ್ರದಲ್ಲಿ 120ಕ್ಕೂ ಹೆಚ್ಚು ಮಿತ್ರ ಪಡೆಯ ಯುದ್ಧ ನೌಕೆಗಳೂ ಇವೆ.

NATO To Deploy Thousands Of Commandos To Nations Near Ukraine

ಹೀಗಾಗಿ, ಒಂದು ವೇಳೆ ಅಗತ್ಯಬಿದ್ದರೆ ನಾವೂ ರಷ್ಯಾ ವಿರುದ್ಧ ಮುಗಿಬೀಳುತ್ತೇವೆ ಎಂದು ಎಚ್ಚರಿಸಿದ್ದಾರೆ. ನಮ್ಮ ಮಿತ್ರ ರಾಷ್ಟ್ರಗಳ ರಕ್ಷಣೆಗೆ ನಾವು ಎಂಥದ್ದೇ ಕಠಿಣ ನಿಲುವನ್ನು ತಳೆಯಲು ಸಿದ್ಧ ಎಂದು ನ್ಯಾಟೋ ಹೇಳಿದೆ.

ಉಕ್ರೇನ್‌ ಮೇಲೆ ದಂಡೆತ್ತಿ ಹೋಗಿರುವ ರಷ್ಯಾ ದೇಶದ ನಿಲುವನ್ನು ನ್ಯಾಟೋ ಖಂಡಿಸಿದ್ದು, ಈ ಕೂಡಲೇ ರಷ್ಯಾ ದೇಶವು ಉಕ್ರೇನ್ ಗಡಿಯಿಂದ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದೆ. ತಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲೆನ್‌ಬರ್ಗ್ ಆಗ್ರಹಿಸಿದ್ದಾರೆ.

2ನೇ ಮಹಾಯುದ್ಧದ ಬಳಿಕ ರಚನೆಯಾದ ನ್ಯಾಟೋ ಪಡೆಯು ತನ್ನ ವಿರುದ್ಧದ ಕಾರ್ಯಾಚರಣೆಗಾಗಿ ರಚಿಸಲಾದ ಕೂಟ ಎಂಬುದು ರಷ್ಯಾದ ಲೆಕ್ಕಾಚಾರ. ಇದರ ಜತೆಗೆ 1991ರಲ್ಲಿ ಸೋವಿಯತ್‌ ಒಕ್ಕೂಟ ಪತನದ ಬಳಿಕ ಸೋವಿಯತ್‌ ಒಕ್ಕೂಟದಲ್ಲಿದ್ದ ಹಲವು ದೇಶಗಳು ನ್ಯಾಟೋ ಪಡೆಗಳ ಸದಸ್ಯ ರಾಷ್ಟ್ರಗಳಾಗಿವೆ. ಅಲ್ಲದೆ 2008ರಲ್ಲಿ ರಷ್ಯಾದ ಜತೆ ಗಡಿ ಹಂಚಿಕೊಂಡ ಉಕ್ರೇನ್‌ಗೂ ಸದಸ್ಯ ರಾಷ್ಟ್ರವಾಗಲು ನ್ಯಾಟೋ ಆಹ್ವಾನ ನೀಡಿದೆ.

ಮೊದಲೇ ನ್ಯಾಟೋ ಎಂದರೆ ಬೆಂಕಿಯ ಕೆಂಡಕಾರುತ್ತಿದ್ದ ರಷ್ಯಾಕ್ಕೆ, ಇದು ಗಾಯದ ಮೇಲೆ ತುಪ್ಪ ಸುರಿದಂತಾಗಿದೆ. ಇದೇ ಕಾರಣಕ್ಕೆ ಉಕ್ರೇನ್‌ ನ್ಯಾಟೋ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಸೇರುವುದನ್ನು ವಿರೋಧಿಸಿಕೊಂಡೇ ಬರುತ್ತಿದೆ. ಉಕ್ರೇನ್‌ ನ್ಯಾಟೋ ಪಟ್ಟಿಗೆ ಸೇರಿದರೆ, ಅಮೆರಿಕದ ಸೇನೆ ರಷ್ಯಾದ ಗಡಿಯಲ್ಲಿ ಬಂದು ನಿಯೋಜನೆಯಾಗಲಿದೆ ಎಂಬುದು ರಷ್ಯಾದ ಆತಂಕ.

ನ್ಯಾಟೋ ಒಕ್ಕೂಟ ಎಂದರೇನು?: 2ನೇ ಮಹಾಯುದ್ಧ ಮುಕ್ತಾಯದ ಬಳಿಕ ಕೆಲ ವರ್ಷಗಳ ನಂತರ ಅಮೆರಿಕ, ಕೆನಡಾ, ಬ್ರಿಟನ್‌ ಮತ್ತು ಫ್ರಾನ್ಸ್‌ ಸೇರಿದಂತೆ 12 ರಾಷ್ಟ್ರಗಳು ರಚಿಸಿಕೊಂಡಿರುವ ಸೇನಾ ಮೈತ್ರಿಯೇ ನಾಥ್‌ರ್‍ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌(ನ್ಯಾಟೋ). ಪ್ರಸ್ತುತ 30 ದೇಶಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ. ಈ ದೇಶಗಳ ಮೇಲೆ ಯಾವುದೇ ಶತ್ರು ದೇಶ ದಾಳಿ ಮಾಡಿದಂಥ ಸಂದರ್ಭದಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳು ಪರಸ್ಪರ ನೆರವಿಗೆ ಧಾವಿಸಲಿವೆ.

ಯುರೋಪ್‌ನಲ್ಲಿ ರಷ್ಯಾದ ವಿಸ್ತರಣಾ ನೀತಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಈ ನ್ಯಾಟೋ ಪಡೆಯನ್ನು ಹುಟ್ಟು ಹಾಕಲಾಗಿದೆ. 1955ರಲ್ಲಿ ಸೋವಿಯತ್‌ ರಷ್ಯಾ ಈಸ್ಟರ್ನ್‌ ಯುರೋಪಿಯನ್‌ ಕಮ್ಯುನಿಸ್ಟ್‌ ಕಂಟ್ರೀಸ್‌(ಪೂರ್ವ ಯೂರೋಪ್‌ ಕಮ್ಯುನಿಸ್ಟ್‌ ರಾಷ್ಟ್ರಗಳು) ಸೇನಾ ಮೈತ್ರಿ ರಚಿಸುವ ಮೂಲಕ ನ್ಯಾಟೋ ಪಡೆಗಳಿಗೆ ತಿರುಗೇಟು ನೀಡುವ ಯತ್ನಕ್ಕೆ ಕೈಹಾಕಿತು. ಆದರೆ 1991ರಲ್ಲಿ ಸೋವಿಯತ್‌ ಒಕ್ಕೂಟ ಪತನವಾದ ಬಳಿಕ ವಾರ್ಸಾ ಒಕ್ಕೂಟದಲ್ಲಿದ್ದ ಹಲವು ದೇಶಗಳು ನ್ಯಾಟೋ ಸದಸ್ಯರಾದವು.

ರಷ್ಯಾದ ಪ್ರಮುಖ ಬೇಡಿಕೆಗಳು ಏನೇನು?: ಯಾವುದೇ ಕಾರಣಕ್ಕೂ ಉಕ್ರೇನ್‌ ಮತ್ತು ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ದೇಶಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ನ್ಯಾಟೋ ಮೈತ್ರಿಕೂಟ ಭರವಸೆ ನೀಡಬೇಕು.

ಪೂರ್ವ ಮತ್ತು ಕೇಂದ್ರ ಯುರೋಪ್‌ ದೇಶಗಳನ್ನು ವ್ಯಾಪ್ತಿಗೆ ಸೇರಿಸಿಕೊಳ್ಳುವುದಕ್ಕೆ ಮುನ್ನ ಅಂದರೆ 1997ಕ್ಕೆ ಮುನ್ನ ಇದ್ದ ಸ್ಥಿತಿಗೆ ಸೇನಾ ನಿಯೋಜನೆಯನ್ನು ನ್ಯಾಟೋ ಕಡಿತ ಮಾಡಬೇಕು.ಬಂಡುಕೋರರ ವಶದಲ್ಲಿರುವ ಪ್ರದೇಶಗಳಿಗೆ ಉಕ್ರೇನ್‌ ಸರ್ಕಾರ ಸ್ವಾಯತ್ತೆ ನೀಡಬೇಕು. ರಷ್ಯಾದ ಗಡಿಯಲ್ಲಿ ನ್ಯಾಟೋ ದೇಶಗಳ ಯಾವುದೇ ಸೇನಾ ಕವಾಯತು ನಡೆಯಬಾರದು.

Recommended Video

      ಸ್ವಾತಂತ್ರ್ಯ ರಕ್ಷಣೆಗಾಗಿ ರಷ್ಯಾ ವಿರುದ್ಧ ಯುದ್ಧಮಾಡಲು ರೆಡಿಯಾದ ಉಕ್ರೇನ್ ಅಧ್ಯಕ್ಷ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+